Advertisement
ಸೋಮವಾರ ಪತ್ರಿಕೆಗಳ ಸಂಪಾದಕರ ಜತೆ ಸಂವಾದ ನಡೆಸಿದ ಅವರು, ಆಟೋಚಾಲಕರ ಸಂಘಟನೆಗಳು, ಗಾರ್ಮೆಂಟ್ಸ್ ನೌಕರರು ಮತ್ತಿತರ ಅಸಂಘಟಿತ ಕ್ಷೇತ್ರಗಳ ಪ್ರತಿನಿಧಿಗಳ ಸಲಹೆಗಳನ್ನೂ ಬಜೆಟ್ ರೂಪಿಸುವಲ್ಲಿ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
Related Articles
Advertisement
ಪ್ರಧಾನಿಗೆ ಪತ್ರ: ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕರ್ನಾಟಕದ ಕೊಡುಗೆ ಮಹತ್ವದ್ದಾಗಿದ್ದರೂ ಪ್ರಧಾನಿ ಮೋದಿ ಅವರ ಚಿತ್ರವನ್ನು ಪ್ರಕಟಿಸಿ ಯೋಜನೆ ಕೇಂದ್ರ ಸರ್ಕಾರದ್ದೇ ಎನ್ನುವ ರೀತಿಯಲ್ಲಿ ಪ್ರದರ್ಶನ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಕಟಕಿಯಾಡಿದ್ದಾರೆ.
ರಾಜ್ಯಸರ್ಕಾರದಿಂದ ಸುಮರು 130 ಕೊಟಿ ರೂ. ಯೋಜನೆಗೆ ಒದಗಿಸಲಾಗುತ್ತಿದೆ. ಕೇಂದ್ರ ಸರ್ಕಾರ ಕೇವಲ 30 ಕೊಟಿ ರೂ.ಗಳನ್ನು ಕೇಂದ್ರ ನೀಡುತ್ತಿದೆ. ದೇಶದೆಲ್ಲೆಡೆ ಈ ರೀತಿ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದ ಕೊಡುಗೆ ಮಹತ್ವದ್ದಾಗಿರುವುದರಿಂದ ಆ ಬಗ್ಗೆ ಪ್ರಕಟಣೆಗಳಲ್ಲಿ,
ಕೇಂದ್ರ ನಡೆಸುತ್ತಿರುವ ಪ್ರಚಾರದಲ್ಲಿ ಉಲ್ಲೇಖೀಸಬೇಕೇಂದು ತಿಳಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ಆ ಕಾರಣಕ್ಕಾಗಿ ರಾಜ್ಯ ಸರ್ಕಾರದ ಯಶಸ್ವಿನಿ ಯೋಜನೆಯನ್ನು ಮತ್ತೆ ಜಾರಿಗೊಳಿಸುವ ಬಗ್ಗೆ ಚರ್ಚೆ ನಡೆದಿದೆ ಎಂದೂ ಅವರು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸರ್ಕಾರ ಸಿಬಿಐ ತನಿಖಾ ಸಂಸ್ಥೆಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕವಾದುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಲ್ಲಿ ನಡೆದಿರುವ ಘಟನೆ ರಾಜ್ಯ ಸರ್ಕಾರಗಳ ಸ್ವಾಯತ್ತತೆಗೆ ಧಕ್ಕೆ ತರುವ ವಿಚಾರವಾಗಿದೆ. ತಾವು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರವಾಗಿ ನಿಲ್ಲುತ್ತೇನೆ.-ಎಚ್.ಡಿ. ಕುಮಾರಸ್ವಾಮಿ