Advertisement
ನಂಬಿಕೆ ಮಾತ್ರದಿಂದಲೇ ಅನುಸರಿಸುವ ಕೆಲವು ಆಚರಣೆಗಳಿಗೆ ಮೂಢನಂಬಿಕೆ ಎನ್ನಬಹುದು. ಮೂಢ ನಂಬಿಕೆಗಳು ಮನುಷ್ಯನ ಹುಟ್ಟಿನಷ್ಟೇ ಹಳೆಯದಾಗಿದೆ. ಇವು ಶತಮಾನಗಳಿಂದ ಮಾನವನ ಜೀವನದೊಂದಿಗೆ ಹಾಸುಹೊಕ್ಕಾಗಿ ಬೆಳೆದು ಬಂದಿದೆ. ಅಂಜಿಕೆ, ಅಜ್ಞಾನಗಳೇ ಇವುಗಳ ಮೂಲ. ನಿಸರ್ಗದ ಭೀತಿಗಳಿಂದ ರಕ್ಷಣೆ ಪಡೆಯುವ ಆಸೆಯಿಂದ ಮನುಷ್ಯನು ತನ್ನದೇ ಅದ ಕೆಲವು ನಂಬಿಕೆಗಳನ್ನು ಬೆಳಿಸಿಕೊಂಡನು. ಇವೇ ಮುಂದೆ ಮೂಢನಂಬಿಕೆಗಳಾಗಿ ಬೆಳೆದವು.
Related Articles
Advertisement
ಶಕುನಗಳು ಸಹ ಮೂಢನಂಬಿಕೆಯ ಸಾಲಿನಲ್ಲಿಯೇ ಬರುವವು. ಹಲ್ಲಿಯು ಲೊಚಗುಟ್ಟಾಗ ದೇವರನ್ನು ನೆನಪಿಸಿಕೊಳ್ಳಬೇಕಂತೆ. ಹಲ್ಲಿಗಳು ಮೈಮೇಲೆ ಬಿದ್ದರೆ ವಿವಿಧ ಫಲಾಫಲಗಳನ್ನು ಹೇಳುವ ಹಲ್ಲಿ ಶಕುನದ ಶಾಸ್ತ್ರವೇ ಇದೆ. ಪ್ರಗತಿಪರ ರಾಷ್ಟ್ರಗಳಲ್ಲೂ ಒಂದಲ್ಲೊಂದು ರೀತಿಯ ಅಪಶಕುನ ಹಾಗೂ ನಂಬಿಕೆಗಳಿವೆ. ಕಾಗೆಯ ಶಕುನಕಂಜದ ಸಿಸಿರೋ ಎಂಬ ರಾಜನೊಬ್ಬ ಹಿಂದಿರುಗಿ ಶತ್ರುಗಳ ಕೆಯ್ಗೆ ಸಿಕ್ಕಿ ಸತ್ತನು ಎಂದು ಹೇಳಲಾಗುವ ಪರದೇಸಿ ಕಥೆಗಳಿವೆ.
ಇಂದಿನ ನಮ್ಮ ರಾಜಕೀಯ ಮುಖಂಡರ ಸುತ್ತ ಭವಿಷ್ಯ ನುಡಿಯುವ ತಂಡವೇ ಇರುವುದನ್ನು ನಾವು ನೋಡಬಹುದು. ಹಾಗೆಯೇ ಪರದೇಶಗಳಲ್ಲಿ 13 ಅಂಕಿ ಅಪಶಕುನ, ಅಶುಭ ಎಂದು ತಿಳಿಯುವರು ಅದಕ್ಕಾಗಿ ಅಲ್ಲಿಯ ಹೊಟೇಲ್‌ಗಳಲ್ಲಿ 13 ನಂಬರಿ ನ ಬದಲಿಗೆ ಅದನ್ನು 12 ಅ ಎಂದು ಸೂಚಿಸಿರುವುದನ್ನು ಕಾಣಬಹುದು. ಇಂತಹ ಮೂಢನಂಬಿಕೆಗಳನ್ನು ಬೇಗ ಕಿತ್ತು ಹಾಕಬೇಕು. ಇಲ್ಲವಾದರೆ ಇವು ಸಮಾಜದಲ್ಲಿ ಅಜ್ಞಾನ ಮತ್ತು ಭಯಾನಕ ವಾತಾವರಣವನ್ನು ಇನ್ನಷ್ಟು ಬೆಳೆಸಬಹುದು.
ಮನುಷ್ಯನ ಜೀವನದಲ್ಲಿ ರಕ್ತಗತವಾಗುವವು. ಎಲ್ಲ ನಂಬಿಕೆಗಳು ಮೂಢನಂಬಿಕೆಗಳು ಎಂದಲ್ಲ. ಕೆಲವು ನಂಬಿಕೆಗಳಲ್ಲಿ ಹುರುಳಿದ್ದರೂ ಕೆಲವು ನಂಬಿಕೆಗಳು ವಿನಾಕಾರಣ ಬೆಳೆಯಹುದು. ಈ ಮೂಢನಂಬಿಕೆಗಳು ಒಂದು ದೇಶದ ಬೆಳವಣಿಗೆಯನ್ನು ಕುಂಠಿತ ಗೊಳಿಸಲೂ ಬಹುದು. ಆದ್ದರಿಂದ ಯಾವುದೇ ನಂಬಿಕೆಗಳನ್ನು ಅದರ ಹಿನ್ನೆಲೆ ಅರಿಯದೆ ನಾವು ನಂಬಬಾರದು.
-ವಾಣಿ ದಾಸ್,
ಎಂ. ಎಂ. ಮಹಾವಿದ್ಯಾಲಯ ಶಿರಸಿ