“ಎಂ101′ ಎಂಬ ನಕ್ಷತ್ರಪುಂಜದಲ್ಲಿ ಈ ಸೂಪರ್‌ನೊವಾ ಉಂಟಾಗಿದೆ. ಮೇ 19 ಮತ್ತು ಮೇ 22ರಂದು ದೂರದರ್ಶಕದಲ್ಲಿ ಎರಡು ಫೋಟೋಗಳು ಸೆರೆಯಾಗಿದೆ. ನಕ್ಷತ್ರವು ತನ್ನ ಜೀವನದ ಅಂತ್ಯವನ್ನು ತಲುಪಿದಾಗ ಮತ್ತು ಅದರ ಮಧ್ಯಭಾಗದಲ್ಲಿ ಪರಮಾಣು ಸಮ್ಮಿಲನಕ್ಕಾಗಿ ಇಂಧನ ಖಾಲಿಯಾದಾಗ ಈ ಸ್ಫೋಟ ಸಂಭವಿಸುತ್ತದೆ. ಈ ಸ್ಫೋಟವು ಇಡೀ ನಕ್ಷತ್ರಪುಂಜವನ್ನು ಆವರಿಸುತ್ತದೆ.
Advertisement
ಈ ಸ್ಫೋಟವನ್ನೇ “ಸೂಪರ್‌ನೊವಾ” ಎಂದು ಕರೆಯಲಾಗುತ್ತದೆ. ಈಗ ಸಂಭವಿಸಿದ ಸ್ಫೋಟ “ಟೈಪ್-2 ಸೂಪರ್‌ನೊವಾ’ ವಿಭಾಗಕ್ಕೆ ಬರಲಿದೆ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. ನಮ್ಮ ಸೂರ್ಯನಿಗಿಂತ ಎಂಟು ಪಟ್ಟು ಅಧಿಕ ಗಾತ್ರವಿರುವ ಈ ನಕ್ಷತ್ರವು ಇಂಧನ ಖಾಲಿಯಾಗಿ ಸ್ಫೋಟಗೊಂಡಿದ್ದು, ಜತೆಗೆ ತನ್ನದೇ ಗುರುತ್ವಾಕರ್ಷಣೆಯ ಅಡಿಯಲ್ಲಿ ಸಂಕುಚಿತಗೊಳ್ಳಲು ಪ್ರಾರಂಭಿಸಿದೆ ಎಂದು ಖಗೋಳಶಾಸ್ತ್ರಜ್ಞರು ತಿಳಿಸಿದ್ದಾರೆ.