Advertisement

Supercop, ಪದ್ಮಶ್ರೀ ಪುರಸ್ಕೃತ ಕೆ ಪಿ ಎಸ್‌ ಗಿಲ್‌ ವಿಧಿವಶ

04:39 PM May 26, 2017 | udayavani editorial |

ಚಂಡೀಗಢ: ಪೊಲೀಸ್‌ ಇಲಾಖೆಯಲ್ಲಿ ಸೂಪರ್‌ ಕಾಪ್‌ ಎಂದೇ ಖ್ಯಾತರಾಗಿದ್ದ , ಪದ್ಮಶ್ರೀ ಪುರಸ್ಕೃತ, ಮಾಜಿ ಪಂಜಾಬ್‌ ಡಿಜಿಪಿ ಕೆ ಪಿ ಎಸ್‌ ಗಿಲ್‌ (ಕನ್ವರ್‌ ಪಾಲ್‌ ಸಿಂಗ್‌ ಗಿಲ್‌) ಅವರು ಇಂದು ಶುಕ್ರವಾರ ನಿಧನ ಹೊಂದಿದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

Advertisement

ಕೆ ಪಿ ಎಸ್‌ ಗಿಲ್‌ ಅವರು ಕೇಂದ್ರ ಮೀಸಲು ಪಡೆಯ (ಸಿಆರ್‌ಪಿಎಫ್) ಮಹಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು ಮತ್ತು ಎರಡು ಬಾರಿ ಪಂಜಾಬ್‌ ಪೊಲೀಸ್‌ ಮಹಾ ನಿರ್ದೇಶಕರಾಗಿದ್ದರು. 

ಪಂಜಾಬ್‌ನಲ್ಲಿನ ಸಿಕ್ಖ ಬಂಡಾಯವನ್ನು ನಿಯಂತ್ರಣಕ್ಕೆ ತಂದ ಖ್ಯಾತಿ ಗಿಲ್‌ ಅವರದ್ದಾಗಿದೆ.

ಗಿಲ್‌ ಅವರು 2006-2007ರಲ್ಲಿ ಛತ್ತೀಸ್‌ಗಢ ಸರಕಾರಕ್ಕೆ ಭದ್ರತಾ ಸಲಹೆಗಾರರಾಗಿದ್ದರು. 1995ರಲ್ಲಿ ಅವರು ಇಂಡಿಯನ್‌ ಪೊಲೀಸ್‌ ಸರ್ವಿಸ್‌ನಿಂದ ನಿವೃತ್ತರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next