Advertisement

ಮೇ. 26ಕ್ಕೆ ವರ್ಷದ ಮೊದಲ ಚಂದ್ರಗ್ರಹಣ : ದೇಶದ ಪೂರ್ವ ವಲಯದಲ್ಲಿ ಗೋಚರ

08:42 PM May 19, 2021 | Team Udayavani |

ನವದೆಹಲಿ: ವರ್ಷದ ಮೊದಲ ಚಂದ್ರಗ್ರಹಣದ ದ್ವಿತೀಯಾರ್ಧ (ಸೂಪರ್‌ಬ್ಲಿಡ್‌ ಮೂನ್‌) ಇದೇ 26ರಂದು ದೇಶದ ಪೂರ್ವ ವಲಯದಲ್ಲಿ ಗೋಚರವಾಗಲಿದೆ.

Advertisement

ಪೂರ್ಣ ಚಂದ್ರಗ್ರಹಣವು ಈಶಾನ್ಯ ಏಷ್ಯಾದ ಕೆಲವು ಭಾಗಗಳು, ಪೆಸಿಫಿಕ್‌ ಸಮುದ್ರ, ಉತ್ತರ-ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾದಲ್ಲಿ ಭಾರತೀಯ ಕಾಲಮಾನದ ಪ್ರಕಾರ, ಬೆಳಗಿನ ಜಾವ 3:15ರಿಂದ 6:22ರವರೆಗೆ ಕಾಣಸಿಗುತ್ತದೆ.

ಭಾರತದಲ್ಲಿ ಕೋಲ್ಕತಾ ಹಾಗೂ ಇನ್ನಿತರ ಪೂರ್ವ ವಲಯದ ಭಾಗಗಳಲ್ಲಿ ಇರುವವರು ಬೆಳಗ್ಗೆ 6:15ರಿಂದ 6:22ರೊಳಗೆ ವೀಕ್ಷಿಸಬಹುದು.

10 ವರ್ಷದ ಇಂಥ ವಿದ್ಯಮಾನ ಪೂರ್ವವಲಯದಲ್ಲಿ ಕಾಣಿಸುತ್ತಿದೆ. 2011ರ ಡಿ. 10ರಂದು ಸಂಭವಿಸಿದ್ದ ಸೂಪರ್‌ಬ್ಲಿಡ್‌ ಮೂನ್‌, ಕೋಲ್ಕತಾದ ಹಾಗೂ ಸುತ್ತಲಿನ ಪ್ರಾಂತ್ಯದಲ್ಲಿ ಗೋಚರಿಸಿತ್ತು.

ಇದನ್ನೂ ಓದಿ :ಶಾಸಕರ ಸಮಯಪ್ರಜ್ಞೆಯಿಂದ ತಪ್ಪಿದ ಆಕ್ಸಿಜನ್‌ ಅನಾಹುತ

Advertisement
Advertisement

Udayavani is now on Telegram. Click here to join our channel and stay updated with the latest news.

Next