Advertisement
ಜೋರ್ಡನ್ 19ನೇ ಓವರ್‌ನ ಮೊದಲ ಎಸೆತದಲ್ಲಿ ಕೋರಿ ಆ್ಯಂಡರ್ಸನ್ ವಿಕೆಟ್ ಉಡಾಯಿಸಿದ ಬಳಿಕ 3ನೇ, 4ನೇ ಹಾಗೂ 5ನೇ ಎಸೆತಗಳಲ್ಲಿ ಅಲಿ ಖಾನ್, ನೋಸ್ತುಶ್ ಕೆಂಜಿಗೆ ಮತ್ತು ಸೌರಭ್ ನೇತ್ರಾವಲ್ಕರ್ ಅವರನ್ನು ಔಟ್ ಮಾಡಿದರು. ಜೋರ್ಡನ್ ಸಾಧನೆ 10 ರನ್ನಿಗೆ 4 ವಿಕೆಟ್.
Related Articles
Advertisement
ಗ್ರೂಪ್-2ರಲ್ಲಿ ಎರಡೂ ಪಂದ್ಯ ಗೆದ್ದಿರುವ ದಕ್ಷಿಣ ಆಫ್ರಿಕಾ ಬಹುತೇಕ ಸೆಮಿಫೈನಲ್ ಸನಿಹದಲ್ಲಿದೆ. ಆದರೆ ಎರಡರಲ್ಲಿ ಒಂದು ಪಂದ್ಯ ಗೆದ್ದು 2 ಅಂಕ ಗಳಿಸಿರುವ ವಿಂಡೀಸ್‌ಗೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಜಯ ಗಳಿಸಿ ಓಟ ಮುಂದುವರಿಸಿತ್ತು. ವೆಸ್ಟ್ ಇಂಡೀಸ್ ದುರ್ಬಲ ಅಮೆರಿಕ ವಿರುದ್ಧ 9 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿ ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ 22 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎರಡೂ ತಂಡಗಳೂ ತಲಾ 11 ಬಾರಿ ಗೆದ್ದಿವೆ.