Advertisement

ಬಿಸಿಲು, ಮಳೆ ಮತ್ತು ಸಂಬಳ: ಇದೀಗ ಹವಾಮಾನ ವರದಿ…

12:38 PM Aug 01, 2017 | |

ಬಾಹ್ಯಾಕಾಶದಲ್ಲಿ ಭಾರತದ ವಿಜ್ಞಾನಿಗಳು ಮಾಡಿರುವ ಸಾಧನೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಈಗ ಭಾರತವನ್ನು ನೋಡುವ ಪರಿಯೇ ಬದಲಾಗಿದೆ. ಉಪಗ್ರಹದ ಆಸರೆಯಿಂದಲೇ ದೇಶದಲ್ಲಿನ ಮಳೆ, ಬಿಸಿಲು, ಗಾಳಿ ವಾತಾವರಣದ ಬಗ್ಗೆ ಮಾಹಿತಿ ಸಿಗುತ್ತಿದೆ. ದೇಶದಲ್ಲಿ ನಡೆಯಬಹುದಾದ ಪಕೃತಿ ವಿಕೋಪಗಳು ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತಗಳ ಕುರಿತು ಮುನ್ನೆಚ್ಚರಿಕೆ ನೀಡುತ್ತಾ ರಾಷ್ಟ್ರ ರಕ್ಷಣೆಯ ಕಾರ್ಯ ನಿರ್ವಹಿಸುವವರು ಹವಾಮಾನ ಶಾಸ್ತ್ರಜ್ಞರು…

Advertisement

‘ಇದೇನಪ್ಪಾ… ಜಿಟಿಜಿಟಿ ಮಳೆ ಬಂದು ಮೂರು ದಿನ ಆದ್ರೂ. ಇನ್ನೂ ನಿಲ್ತನೇ ಇಲ್ಲಾ, ಈ ಚಂಡಮಾರುತಗಳು ಯಾಕಾದ್ರೂ ಬರ್ತಾವೋ.. ನಾಳೆಯಿಂದ ಮಳೆ ನಿಲ್ಲುತ್ತೆ ಅಂತ ಹವಾಮಾನ ಇಲಾಖೆಯವ್ರು ಹೇಳಿದಾರೆ, ನೋಡೋಣ.! ಎಂದು ರೇಡಿಯೋ ಆಲಿಸುತ್ತಾ ಹಿರಿಯರು ಮನೆಯಲ್ಲಿ ಮಾತನಾಡಿಕೊಂಡಿದ್ದು ನೆನಪಿದೆಯಾ.. ? ಈ ವರ್ಷ ಮುಂಗಾರು ಮಾರುತಗಳು ಕ್ಷೀಣ, ಕರಾವಳಿ ತೀರದಲ್ಲಿ ಇನ್ನೂ ಐದು ದಿನ ಅಲೆ ಅಬ್ಬರ ಹೆಚ್ಚು, ಬಂಗಾಳ ಕೊಲ್ಲಿಯಲ್ಲಿ  ವಾಯುಭಾರ ಕುಸಿತ… ಈ ಮಾದರಿಯ ನುಡಿಗಟ್ಟುಗಳು ಪರಿಚಯವಿರಬಹುದು. ಈ ರೀತಿ ಮುಂಚೆಯೇ ವಾತಾವರಣದಲ್ಲಿ ನಡೆಯುವ ಪ್ರಾಕೃತಿಕ ಬದಲಾವಣೆಗಳನ್ನು ತಿಳಿಸುತ್ತಾ ದೇಶದ ಜನರಲ್ಲಿ ಜಾಗೃತಿ ಮೂಡಿಸುವವರೇ ಹವಾಮಾನ ಶಾಸ್ತ್ರಜ್ಞರು (ಮೀಟಿಯೊರಾಲಜಿ…).

ಹವಾಮಾನ ಶಾಸ್ತ್ರಜ್ಞರ ಕಾರ್ಯ ಸಾಮಾನ್ಯದ್ದೇನೂ ಅಲ್ಲ. ಮಾಹಿತಿ ಮತ್ತು ತಂತ್ರಜ್ಞಾನದಲ್ಲಿ ದೇಶ ಮುಂದುವರಿಯುತ್ತಿರುವಂತೆ ಈ ಹು¨ªೆಗಳಿಗೆ ಅನೇಕ ಅವಕಾಶಗಳು ಸೃಷ್ಟಿಯಾಗಿವೆ. ಕೇವಲ ಹವಾಮಾನ ಇಲಾಖೆಯಲ್ಲಿ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಹವಾಮಾನ ತಜ್ಞರಿಗೆ ಉತ್ತಮ ಅವಕಾಶಗಳು ದೊರೆಯುವ ಸಾಧ್ಯತೆಗಳೀಗ ಹೆಚ್ಚಾಗಿವೆ.

ಪ್ರಾಕೃತಿಕ ಅಸಮತೋಲನ ನಿಯಂತ್ರಣ, ಜಾಗತಿಕ ತಾಪಮಾನ ಮಾಹಿತಿ, ಓಝೊನ್‌ ಪದರ, ಅತಿ ನೇರಳೆ ಕಿರಣ ಇತ್ಯಾದಿಗಳ ಬಗ್ಗೆ ಅಧ್ಯಯನ ಮತ್ತು ಸಮಸ್ಯೆಗಳ ಪರಿಹಾರಕ್ಕಾಗಿ ಹವಾಮಾನ ತಜ್ಞರ ಸಲಹೆಗಳೂ ಅತ್ಯವಶ್ಯ. ಇಂತಹ ತಜ್ಞರಾಗಬೇಕಾದರೆ..

ಕಲಿಕೆ ಹೀಗಿರಲಿ:
ಎಸ್ಸೆಸ್ಸೆಲ್ಸಿ ಬಳಿಕ ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಳ್ಳಿ. ಬಳಿಕ ಪದವಿ, ಸ್ನಾತಕೋತ್ತರ ವ್ಯಾಸಂಗಕ್ಕೆ  ಭೌತಶಾಸ್ತ್ರ, ಗಣಕ ವಿಷಯಗಳಿರುವಂತೆ ನೋಡಿಕೊಳ್ಳಿ. ಉದಾಹರಣಗೆ ಜಿಯೋ ಸೈನ್ಸ್‌, ಆಂಥ್ರೋಫಾಲಜಿ ಬಿ.ಎಸ್ಸಿ, ಎನ್ವಿರಾನ್‌ಮೆಂಟಲ… ಬಯೋಲಜಿ ಮಾದರಿಯ ಕೋರ್ಸ್‌ ಗಳನ್ನು ಆರಿಸಿಕೊಳ್ಳಿ. ಜೊತೆಗೆ ಗಣಕ ಜ್ಞಾನವನ್ನು ಪಡೆಯುವುದು ಸೂಕ್ತ. ಅಲ್ಲದೆ ಪ್ರಾಕೃತಿಕ ವಿಷಯಕ್ಕೆ ಸಂಬಂಧಿಸಿದಂತೆ ಪಿಎಚ್‌ಡಿ ಮಾಡಿದರೆ ಒಳಿತು.

Advertisement

ಕೌಶಲ್ಯಗಳು
ವೆದರ್‌ ರಿಪೋರ್ಟ್‌ಗಳು, ಮ್ಯಾಪ್‌, ಡಯಾಗ್ರಾಮಗಳ ಬಗ್ಗೆ ಜ್ಞಾನ ಪ್ರಾಕೃತಿಕ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಚಂಡಮಾರುತ, ಭೂಕಂಪಗಳ ಬಗ್ಗೆ ವಿಮಶಾìತ್ಮಕ ಅರಿವು. ಭೌಗೋಳಿಕ ಪರಿಸರ ಮತ್ತು ಮಾಲಿನ್ಯ ನಿಯಂತ್ರಣದ ಬಗ್ಗೆ ವಿಶೇಷ ಜ್ಞಾನ ಉಪಗ್ರಹ ಆಧಾರಿತ ಹವಾಮಾನ ತಂತ್ರಜ್ಞಾನ ಕುರಿತ ತಿಳಿವಳಿಕೆ ಹವಾಮಾನ ವಿಷಯಾಧಾರಿತ ದತ್ತಾಂಶ ಸಂಗ್ರಹಣೆ, ಸಂಶೋಧನೆ, ವರದಿ ಸಲ್ಲಕೆ ಕೌಶಲ್ಯ.

ಅವಕಾಶ ಎಲ್ಲೆಲ್ಲಿ?
– ಭಾರತೀಯ ಹವಾಮಾನ ಇಲಾಖೆ
– ಸ್ಪೇಸ್‌ ರಿಸರ್ಚ್‌ ಆರ್ಗನೈಸೇಶನ್‌
– ಏರ್‌ಫೋರ್ಸ್‌
– ನೇವಿ
– ಹವಾಮಾನ ಸಾಧನ ವಿನ್ಯಾಸ ಮತ್ತು ತಯಾರಿಕಾ ಸಂಸ್ಥೆ
– ಏರ್‌ಕ್ರಾಫ್ಟ್ ಮತ್ತು ಕ್ಷಿಪಣಿ ತಯಾರಿಕಾ ಘಟಕ
– ಕೃಷಿ ಇಲಾಖೆ, ರಾಜ್ಯ, ಕೇಂದ್ರ ಕೃಷಿ ವಿವಿ.
– ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
– ಕಾರ್ಖಾನೆಗಳ ಮಾಲಿನ್ಯ ನಿಯಂತ್ರಣಾ ಘಟಕ

ಸ್ಯಾಲರಿ ಎಷ್ಟ್ ಸಿಗುತ್ತೆ?
ಭಾರತದಲ್ಲಿ ಹವಾಮಾನ ಶಾಸ್ತ್ರಜ್ಞರಿಗೆ ಸರ್ಕಾರಿ ಮತ್ತು ಖಾಸಗಿ ಕ್ಷೇತ್ರದಲ್ಲಿ ವಿಫ‌ುಲ ಅವಕಾಶಗಳಿವೆ. ವಿಶೇಷ ಪರಿಣತಿ ಹೊಂದಿದವರಿಗೆ ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಮಾನವಿದೆ. ದೇಶದಲ್ಲಿ ಅವರಿಗೆ 25 ಸಾವಿರದಿಂದ 60 ಸಾವಿರದವರೆಗೆ ಸಂಬಳ ದೊರೆಯುತ್ತದೆ. ವಿದೇಶಗಳಲ್ಲಿ 90 ಸಾವಿರ ಡಾಲರ್‌ ವರೆಗೆ ಸಂಬಳ ದೊರಕುವುದುಂಟು.

ಎಲ್ಲಿ ಓದಬೇಕು?
– ಇಂಡಿಯನ್‌ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್  ಸೈನ್ಸ್  ಬೆಂಗಳೂರು
– ಆಂಧ್ರ ಯೂನಿವರ್ಸಿಟಿ, ವಿಶಾಖಪಟ್ಟಣಂ. ಆಂಧ್ರ ಪ್ರದೇಶ
– ಏವಿಯೇಶನ್‌ ಮೀಟಿಯೋರಾಲಜಿಸ್ಟ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ ರೀಸರ್ಚ್‌ ಕೌನ್ಸಿಲ…, ಕೊಯಮತ್ತೂರ್‌
– ಇಂಡಿಯನ್‌ ಇನ್ಸ್‌ ಟಿಟ್ಯೂಟ… ಆಫ್ ಟೆಕ್ನಾಲಜಿ. ಖರಗ್ಪುರ್‌
– ಸಾವಿತ್ರಿ ಭಾಯಿ ಪುಲೆ ಪುಣೆ ಯೂನಿವರ್ಸಿಟಿ. ಪುಣೆ

ಎನ್‌. ಅನಂತನಾಗ್‌
 

Advertisement

Udayavani is now on Telegram. Click here to join our channel and stay updated with the latest news.

Next