Advertisement
ವಿದ್ಯಾರ್ಥಿಗಳಲ್ಲಿ ಶಿಕ್ಷಣದೊಂದಿಗೆ ಶೋಧದ ಮನೋಭಾವ ಮೂಡಿಸುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. ಜ. 11ರಂದು ಸಂಜೆ 5ರಿಂದ ರಾತ್ರಿ 10.30ರ ವರೆಗೆ ಹಾಗೂ ಜ. 12ರಂದು ಸಂಜೆ 4ರಿಂದ 10.30ರ ವರೆಗೆ ನಡೆಯಲಿದೆ.
ವಿಶ್ವದ ಹಲವೆಡೆಗಳಿಂದ ತರಲಾದ ಉಲ್ಕಾಶಿಲೆಗಳ ತುಣುಕುಗಳ ಪ್ರದರ್ಶನ ಇದರ ಮುಖ್ಯ ಆಕರ್ಷಣೆಯಾಗಿರಲಿದೆ. ಬಾಹ್ಯಾಕಾಶದಿಂದ ಭೂಮಿಗೆ ಬಿದ್ದುದನ್ನು ಸಂಗ್ರಹಿಸುವ ಅನೇಕರು ಇದ್ದು, ಅವುಗಳ ಪ್ರದರ್ಶನದಿಂದ ಉಲ್ಕೆಗಳ ತುಣುಕು ಹೇಗಿರಬಹುದು ಎನ್ನುವ ಕುತೂಹಲಕ್ಕೆ ಉತ್ತರ ಸಿಗಲಿದೆ. ಖ್ಯಾತ ಖಗೋಳ ಭೌತತಜ್ಞ ಡಾ| ಪಿ.ಎನ್.ಭಟ್, ಇಸ್ರೊ ಸಂಸ್ಥೆಯ ಮಾಜಿ ನಿರ್ದೇಶಕ ಹಾಗೂ ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ ಇದರ ನಿರ್ದೇಶಕ ಡಾ| ಪಿ. ಶ್ರೀಕುಮಾರ್, ಅವರು ಜ. 11, 12ರಂದು ಮಾತನಾಡಲಿದ್ದಾರೆ.
Related Articles
16 ಇಂಚಿನ ಬೃಹತ್ ದೂರದರ್ಶಕ ಸಹಿತ ಹಲವು ದೂರದರ್ಶಕಗಳೊಂದಿಗೆ ಆಗಮಿಸಿದ ಆಸಕ್ತರಿಗೆ ನಕ್ಷತ್ರ ವೀಕ್ಷಣೆ ಚಟು ವಟಿಕೆಯೂ ನಡೆಯಲಿದೆ. ಈ ಮೂಲಕ ಚಂದ್ರನ ಮೇಲಿನ ಕುಳಿಗಳು, ಶನಿಗ್ರಹದ ಮೇಲಿನ ಬಳೆಗಳು, ಗುರುಗ್ರಹದ ಮೋಡ ಹಾಗೂ ಅದರ ಚಂದ್ರಗಳು, ಶುಕ್ರಗ್ರಹ, ಮಂಗಳ ಗ್ರಹ, ಆಂಡ್ರೋಮಿಡಾ ಆಕಾಶ ಗಂಗೆ, ಓರಿಯನ್ ನೆಬುಲಾ ಇತ್ಯಾದಿ ಖಗೋಳ ವಿಸ್ಮಯಗಳನ್ನು ವೀಕ್ಷಿಸಿ ಆನಂದಿಸುವ ಅವಕಾಶ ಇದೆ. ಖಗೋಳಕ್ಕೆ ಸಂಬಂಧಿಸಿದ ಫೋಟೋಗ್ರಫಿ, ಪೋಸ್ಟರ್, ಆಟಗಳನ್ನೂ ಆಯೋಜಿಸಲಾಗಿದೆ.
Advertisement
ಶಿರಸಿಯಿಂದ ಅತೀದೊಡ್ಡ ಟೆಲಿಸ್ಕೋಪ್ಕರಾವಳಿಯಲ್ಲಿ ಅತೀದೊಡ್ಡ ಎಂದರೆ 16 ಇಂಚಿನ ಖಗೋಳವೀಕ್ಷಕವು ಶಿರಸಿಯಲ್ಲಿದ್ದು ಅದನ್ನು ತರಲಾಗುವುದು, ಮಂಗಳೂ ರಿನಲ್ಲಿ ಕೂಡ 10 ಇಂಚಿನ ಕೆಲವು ಟೆಲಿ ಸ್ಕೋಪ್‌ಗ್ಳಿವೆ, ಅವುಗಳನ್ನೂ ವ್ಯವಸ್ಥೆ ಮಾಡಲಾಗುವುದು. ಅಲ್ಲದೆ ಸೀಸ್ಟಾರ್ ಎನ್ನುವ ಅತ್ಯಾಧುನಿಕ ಟೆಲಿಸ್ಕೋಪ್‌ನಲ್ಲಿ ಖಗೋಳ ವೀಕ್ಷಣೆ ಜೊತೆಯಲ್ಲೇ ಅದಕ್ಕೆ ಅಡಾಪ್ಟರ್ ಬಳಸಿ ಕೆಮರಾವನ್ನು ಸೇರ್ಪಡೆ ಮಾಡಿ ಫೋಟೋ ತೆಗೆಯಬಹುದು, ಅಂತಹ ಒಂದು ಫೋಟೋದಲ್ಲಿ ಸ್ಪಷ್ಟತೆ ಇರುವುದಿಲ್ಲ, ಹಲವು ಫೋಟೋಗಳನ್ನು ತೆಗೆದು ಅವುಗಳನ್ನು ಜತೆಯಾಗಿಸಿದಾಗ ಸ್ಪಷ್ಟ ಚಿತ್ರ ಸಿಗುತ್ತದೆ, ಅದಕ್ಕೆ ಬೇಕಾದ ಸಾಫ್ಟ್ ವೇರ್ ಕೂಡ ಸೀಸ್ಟಾರ್ ದೂರದರ್ಶಕದಲ್ಲಿದೆ ಎಂದು ಕಾರ್ಯಕ್ರಮದ ಸಂಘಟಕ ಅಶ್ವಿನ್ ಶೆಣೈ ತಿಳಿಸಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆಸ್ಟ್ರೋ ಫೋಟೋಗ್ರಾಫರುಗಳು ತೆಗೆದಿರುವ ಬಾಹ್ಯಾಕಾಶದ ವಿವಿಧ ಫೋಟೋಗಳನ್ನು ಪ್ರದರ್ಶಿಸ ಲಾಗುವುದು. 1000ಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.