Advertisement

ಹೈದ್ರಾಬಾದ್‌ಗೆ 2ನೇ ಜಯ; ಸೋಲಿನಾಟ ಮುಂದುವರಿಸಿದ ಗುಜರಾತ್‌

11:51 AM Apr 10, 2017 | |

ಹೈದರಾಬಾದ್‌: ಈ ಋತುವಿನಲ್ಲಿ ಹೈದ್ರಾಬಾದ್‌ ತನ್ನ ಭರ್ಜರಿ ಅಭಿಯಾನವನ್ನು ಮುಂದುವರಿಸಿದೆ. ಅದು ಸತತ 2ನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ತನ್ನ ನೆಲದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಲಯನ್ಸ್‌ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದೆ. 

Advertisement

ಹೈದ್ರಾಬಾದ್‌ ನಾಯಕ ಡೇವಿಡ್‌ ವಾರ್ನರ್‌ ಭರ್ಜರಿ 76 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಲಯನ್ಸ್‌ ಬ್ಯಾಟಿಂಗ್‌ನಲ್ಲಿ ತೀವ್ರ ಕುಸಿತ ಅನುಭವಿಸಿತು. 20 ಓವರ್‌ ಆಡಿದ ಅದು ಕೇವಲ 135 ರನ್‌ ಗಳಿಸಿತು. ಇದನ್ನು ಬೆನ್ನಟ್ಟಿದ
ಹೈದರಾಬಾದ್‌ ಕೇವಲ 15.3 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 140 ರನ್‌ ಗಳಿಸಿತು.

ಇದರಲ್ಲಿ ವಾರ್ನರ್‌ರದ್ದು ಸಿಂಹಪಾಲು. ಅವರು 6 ಬೌಂಡರಿ, 4 ಸಿಕ್ಸರ್‌ ಸೇರಿದಂತೆ 45 ಎಸೆತದಲ್ಲಿ 76 ರನ್‌ ಬಾರಿಸಿದರು. ಇವರಿಗೆ ಸಾಥ್‌ ನೀಡಿದ ಹೆನ್ರಿಕ್ಸ್‌ 39 ಎಸೆತದಲ್ಲಿ 52 ರನ್‌ ಗಳಿಸಿದರು.  

ಪಂದ್ಯದ ತಿರುವು
ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ತನ್ನ ಅಗ್ರ ನಾಲ್ಕು ವಿಕೆಟ್‌ಗಳನ್ನು 57 ರನ್‌ ಗಳಾಗುವಾಗ ಕಳೆದುಕೊಂಡಿತು. ಇದರಿಂದ ಅದು ಹೊರಬರದ ಪರಿಣಾಮ ಅದಕ್ಕೆ ಭಾರೀ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ .

ಸ್ಕೋರ್‌ಪಟ್ಟಿ
ಗುಜರಾತ್‌ ಲಯನ್ಸ್‌

ಜಾಸನ್‌ ರಾಯ್‌    ಸಿ ಧವನ್‌ ಬಿ ಭುವನೇಶ್ವರ್‌    31
ಬ್ರೆಂಡನ್‌ ಮೆಕಲಮ್‌    ಎಲ್‌ಬಿಡಬ್ಲ್ಯು ರಶೀದ್‌    5
ಸುರೇಶ್‌ ರೈನಾ    ಎಲ್‌ಬಿಡಬ್ಲ್ಯು ರಶೀದ್‌    5
ಆರನ್‌ ಫಿಂಚ್‌    ಎಲ್‌ಬಿಡಬ್ಲ್ಯು ರಶೀದ್‌    3
ದಿನೇಶ್‌ ಕಾರ್ತಿಕ್‌    ಸಿ ಓಜಾ ಬಿ ನೆಹ್ರಾ    30
ಡ್ವೇನ್‌ ಸ್ಮಿತ್‌    ಸಿ ವಿಜಯ್‌ಶಂಕರ್‌ ಬಿ ಭುವನೇಶ್ವರ್‌    37
ಧವಳ್‌ ಕುಲಕರ್ಣಿ    ರನೌಟ್‌    1
ಪ್ರವೀಣ್‌ ಕುಮಾರ್‌    ಔಟಾಗದೆ    7
ಬಾಸಿಲ್‌ ಥಂಪಿ    ಔಟಾಗದೆ    13
ಇತರ        3
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)        135
ವಿಕೆಟ್‌ ಪತನ: 1-35, 2-37, 3-42, 4-57, 5-113, 6-114, 7-115.
ಬೌಲಿಂಗ್‌:
ಬಿಪುಲ್‌ ಶರ್ಮ        4-0-24-0
ಭುವನೇಶ್ವರ್‌ ಕುಮಾರ್‌        4-0-21-2
ಆಶಿಷ್‌ ನೆಹ್ರಾ        4-0-27-1
ರಶೀದ್‌ ಖಾನ್‌        4-0-19-3
ಬೆನ್‌ ಕಟಿಂಗ್‌        3-0-29-0
ಮೊಸಸ್‌ ಹೆನ್ರಿಕ್ಸ್‌        1-0-12-0

Advertisement

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌    ಔಟಾಗದೆ    76
ಶಿಖರ್‌ ಧವನ್‌    ಸಿ ಮೆಕಲಮ್‌ ಬಿ ಪ್ರವೀಣ್‌    9
ಮೊಸಸ್‌ ಹೆನ್ರಿಕ್ಸ್‌    ಔಟಾಗದೆ    52
ಇತರ        3
ಒಟ್ಟು  (15.3 ಓವರ್‌ಗಳಲ್ಲಿ ಒಂದು ವಿಕೆಟಿಗೆ)        140
ವಿಕೆಟ್‌ ಪತನ: 1-32.
ಬೌಲಿಂಗ್‌:
ಸುರೇಶ್‌ ರೈನಾ        2-0-24-0
ಪ್ರವೀಣ್‌ ಕುಮಾರ್‌        2-0-16-1
ತೇಜಸ್‌ ಬರೋಕಾ        3.3-0-33-0
ಧವಳ್‌ ಕುಲಕರ್ಣಿ        2-0-17-0
ಶಿವಿಲ್‌ ಕೌಶಿಕ್‌        4-0-29-0
ಬಾಸಿಲ್‌ ಥಂಪಿ        2-0-21-0

ಪಂದ್ಯಶ್ರೇಷ್ಠ: ರಶೀದ್‌ ಖಾನ್‌

Advertisement

Udayavani is now on Telegram. Click here to join our channel and stay updated with the latest news.

Next