Advertisement

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

11:48 PM Apr 28, 2024 | Team Udayavani |

ಚೆನ್ನೈ: ಸನ್ ರೈಸರ್ಸ್ ಹೈದರಾಬಾದ್‌ ಎದುರಿನ ರವಿವಾರದ ಐಪಿಎಲ್‌ ಪಂದ್ಯದಲ್ಲಿ ಆತಿಥೇಯ ಚೆನ್ನೈ 78 ರನ್‌ಗಳ ಅಮೋಘ ಜಯ ಸಾಧಿಸಿತು.

Advertisement

ನಾಯಕ ಋತುರಾಜ್‌ ಗಾಯಕ್ವಾಡ್‌ ಅವರ ಮತ್ತೂಂದು ಅಮೋಘ ಬ್ಯಾಟಿಂಗ್‌ ಪರಾಕ್ರಮದಿಂದ 3 ವಿಕೆಟಿಗೆ 212 ರನ್‌ ಪೇರಿಸಿತು. ಗಾಯಕ್ವಾಡ್‌ ಕೇವಲ 2 ರನ್‌ ಕೊರತೆಯಿಂದ ಸತತ 2ನೇ ಶತಕದಿಂದ ವಂಚಿತರಾದರು. ಲಕ್ನೋ ಎದುರಿನ ಕಳೆದ ಪಂದ್ಯದಲ್ಲಿ ಅವರು 108 ರನ್‌ ಮಾಡಿದ್ದರು. ಅಂತಿಮ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಗಾಯಕ್ವಾಡ್‌ 54 ಎಸೆತಗಳಿಂದ 98 ರನ್‌ ಬಾರಿಸಿದರು (10 ಬೌಂಡರಿ, 3 ಸಿಕ್ಸರ್‌). ಡ್ಯಾರಿಲ್‌ ಮಿಚೆಲ್‌ 52, ಶಿವಂ ದುಬೆ ಔಟಾಗದೆ 39 ರನ್‌ ಮಾಡಿದರು.

ಬೃಹತ್ ಗುರಿ ಬೆನ್ನಟ್ಟಿದ ಹೈದರಾಬಾದ್ ಇಂದು ತೀವ್ರ ವೈಫಲ್ಯ ಅನುಭವಿಸಿತು. ನಿರೀಕ್ಷೆ ಮೂಡಿಸಿದ್ದ ಆಟಗಾರರೆಲ್ಲ ವಿಫಲರಾದರು.18.5 ಓವರ್ ಗಳಲ್ಲಿ 134 ರನ್ ಗಳಿಗೆ ಆಲೌಟಾಗಿ ಭಾರೀ ಸೋಲು ಅನುಭವಿಸಿತು. ಚೆನ್ನೈ ಆಡಿದ 9ನೇ ಪಂದ್ಯದಲ್ಲಿ 5 ನೇ ಜಯ ಸಾಧಿಸಿದರೆ, ಹೈದರಾಬಾದ್ ಆಡಿದ 9 ನೇ ಪಂದ್ಯದಲ್ಲಿ 4 ನೇ ಸೋಲು ಅನುಭವಿಸಿತು.

ಟ್ರಾವಿಸ್ ಹೆಡ್ 13, ಅನ್ಮೋಲ್ಪ್ರೀತ್ ಸಿಂಗ್ 0,ಅಭಿಷೇಕ್ ಶರ್ಮ15,ನಿತೀಶ್ ರೆಡ್ಡಿ 15 ,ಐಡೆನ್ ಮಾರ್ಕ್ರಾಮ್ 32, ಹೆನ್ರಿಕ್ ಕ್ಲಾಸೆನ್ 20, ಅಬ್ದುಲ್ ಸಮದ್ 19, ಪ್ಯಾಟ್ ಕಮ್ಮಿನ್ಸ್ 5, ಶಹಬಾಜ್ ಅಹ್ಮದ್ 7,ಜಯದೇವ್ ಉನದ್ಕತ್ 1 ರನ್ ಗಳಿಸಿ ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಭುವನೇಶ್ವರ್ ಕುಮಾರ್ ಔಟಾಗದೆ 4 ರನ್ ಗಳಿಸಿದರು.

ಚೆನ್ನೈ ಪರ ತುಷಾರ್ ದೇಶಪಾಂಡೆ 4 ವಿಕೆಟ್ ಪಡೆದರು. ಮುಸ್ತಾಫಿಜುರ್ ರೆಹಮಾನ್ ಮತ್ತು ಮಥೀಶ ಪತಿರಣ ತಲಾ 2 ವಿಕೆಟ್ ಕಿತ್ತರು. ಜಡೇಜಾ, ಶಾರ್ದೂಲ್ ಬಿಗಿ ದಾಳಿ ನಡೆಸಿ ತಲಾ 1 ವಿಕೆಟ್ ಪಡೆದರು.

Advertisement

ಅಜಿಂಕ್ಯ ರಹಾನೆ ಮತ್ತೆ ವಿಫ‌ಲ
ಅಜಿಂಕ್ಯ ರಹಾನೆ ಅವರ ಬ್ಯಾಟಿಂಗ್‌ ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು. ಅವರು ಕೇವಲ 9 ರನ್‌ ಮಾಡಿ ಭುವನೇಶ್ವರ್‌ ಕುಮಾರ್‌ಗೆ ವಿಕೆಟ್‌ ಒಪ್ಪಿಸಿದರು. ಆಗ ಚೆನ್ನೈ 19 ರನ್‌ ಮಾಡಿತ್ತು.

ದ್ವಿತೀಯ ವಿಕೆಟಿಗೆ ಜತೆಗೂಡಿದ ಗಾಯಕ್ವಾಡ್‌ ಮತ್ತು ನ್ಯೂಜಿಲ್ಯಾಂಡ್‌ನ‌ ಬಿಗ್‌ ಹಿಟ್ಟರ್‌ ಡ್ಯಾರಿಲ್‌ ಮಿಚೆಲ್‌ ಸೇರಿಕೊಂಡು ಇನ್ನಿಂಗ್ಸ್‌ ಬೆಳೆಸತೊಡಗಿದರು. ಪವರ್‌ ಪ್ಲೇ ಮುಕ್ತಾಯಕ್ಕೆ ಚೆನ್ನೈ ಒಂದು ವಿಕೆಟಿಗೆ 50 ರನ್‌ ಮಾಡಿತ್ತು. ಅರ್ಧ ಹಾದಿ ಕ್ರಮಿಸುವಾಗ ಈ ಮೊತ್ತ 92ಕ್ಕೆ ಏರಿತು.

ಸತತ 2ನೇ ಶತಕದ ಜತೆಯಾಟ
ಹೈದರಾಬಾದ್‌ ಬೌಲರ್‌ಗಳನ್ನು ಎಚ್ಚರಿಕೆಯಿಂದ ನಿಭಾಯಿಸಿದ ಗಾಯಕ್ವಾಡ್‌, ಮಿಚೆಲ್‌ ಇಬ್ಬರೂ ಅರ್ಧ ಶತಕ ದಾಖಲಿಸಿದರು. ಇವರಿಂದ 10.4 ಓವರ್‌ಗಳಲ್ಲಿ 107 ರನ್‌ ಒಟ್ಟುಗೂಡಿತು. ಇದು ಈ ಸೀಸನ್‌ನಲ್ಲಿ ಗಾಯಕ್ವಾಡ್‌ ಪಾಲ್ಗೊಂಡ ಸತತ 2ನೇ ಶತಕದ ಜತೆಯಾಟ. ಲಕ್ನೋ ಎದುರಿನ ಕಳೆದ ಪಂದ್ಯದಲ್ಲಿ ಗಾಯಕ್ವಾಡ್‌-ದುಬೆ 4ನೇ ವಿಕೆಟಿಗೆ 104 ರನ್‌ ಪೇರಿಸಿದ್ದರು.

14ನೇ ಓವರ್‌ನಲ್ಲಿ ಜೈದೇವ್‌ ಉನಾದ್ಕತ್‌ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಯಶಸ್ವಿಯಾದರು. 32 ಎಸೆತಗಳಿಂದ 52 ರನ್‌ ಮಾಡಿದ ಮಿಚೆಲ್‌ ಪೆವಿಲಿಯನ್‌ ಸೇರಿಕೊಂಡರು (7 ಬೌಂಡರಿ, 1 ಸಿಕ್ಸರ್‌).

ಗಾಯಕ್ವಾಡ್‌-ದುಬೆ ಸೇರಿಕೊಂಡು ಮತ್ತೂಂದು ಸುತ್ತಿನ ಬ್ಯಾಟಿಂಗ್‌ ಹೋರಾಟಕ್ಕೆ ಮುಂದಾದರು. ಡೆತ್‌ ಓವರ್‌ಗಳಲ್ಲಿ ರನ್‌ಮಳೆ ಆಯಿತು. ಈ ಜೋಡಿಯಿಂದ 3ನೇ ವಿಕೆಟಿಗೆ 35 ಎಸೆತಗಳಿಂದ 74 ರನ್‌ ಒಟ್ಟುಗೂಡಿತು. ದುಬೆ ಅವರ 39 ರನ್‌ 20 ಎಸೆತಗಳಿಂದ ಬಂತು. ಸಿಡಿಸಿದ್ದು 4 ಸಿಕ್ಸರ್‌, ಒಂದು ಬೌಂಡರಿ.

Advertisement

Udayavani is now on Telegram. Click here to join our channel and stay updated with the latest news.

Next