Advertisement

IPL 2024; ಲಕ್ನೋ, ಹೈದ್ರಾಬಾದ್‌ ಸೆಣಸು; ಗೆಲ್ಲುವ ತಂಡಕ್ಕೆ ಪ್ಲೇಆಫ್ ಸ್ಥಾನ ಬಹುತೇಕ ಖಚಿತ

10:42 PM May 07, 2024 | Team Udayavani |

ಹೈದರಾಬಾದ್‌: ಸನ್‌ರೈಸರ್ ಹೈದರಾಬಾದ್‌ ತಂಡವು ಬುಧವಾರದ ಐಪಿಎಲ್‌ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವನ್ನು ಎದುರಿಸಲಿದೆ. ಎರಡೂ ತಂಡಗಳು ಪ್ಲೇ ಆಫ್ ತೇರ್ಗಡೆಯ ನಿರೀಕ್ಷೆಯಲ್ಲಿರುವ ಕಾರಣ ಈ ಪಂದ್ಯ ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ.

Advertisement

ಹೈದರಾಬಾದ್‌ ಮತ್ತು ಲಕ್ನೋ ಒಟ್ಟಾರೆ 12 ಅಂಕ ಪಡೆದಿದ್ದು ಸದ್ಯ ಅಂಕಪಟ್ಟಿಯಲ್ಲಿ ಅನುಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿವೆ. ಹೈದರಾಬಾದ್‌ ಮತ್ತು ಲಕ್ನೋ ನಡುವಣ ಈ ಪಂದ್ಯದ ವಿಜೇತ ತಂಡವು ಪ್ಲೇ ಆಫ್ ತೇರ್ಗಡೆಗೆ ಇನ್ನಷ್ಟು ಹತ್ತಿರವಾಗಲಿದೆ. ಇದಕ್ಕಾಗಿ ಎರಡೂ ತಂಡಗಳು ಶತ ಪ್ರಯತ್ನ ಮಾಡುವುದು ನಿಶ್ಚಿತವಾಗಿದೆ. ಎರಡೂ ತಂಡಗಳು ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ಕಾರಣ ಪಂದ್ಯ ಹೇಗೆ ಸಾಗಬಹುದೆಂದು ಊಹಿಸಲು ಕಷ್ಟ.

ಪ್ಯಾಟ್‌ ಕಮಿನ್ಸ್‌ ನೇತೃತ್ವದ ಹೈದರಾಬಾದ್‌ ತಂಡ ಬಹಳಷ್ಟು ಅನುಭವ ಹೊಂದಿದ ತಂಡವಾಗಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಗೆಲುವಿನ ದಾರಿಯಲ್ಲಿ ಸಾಗುತ್ತಿಲ್ಲ. ಹೈದರಾಬಾದ್‌ ತಂಡವು ಕಳೆದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋತಿದೆ. ತಂಡದ ಬ್ಯಾಟಿಂಗ್‌ ವೈಫ‌ಲ್ಯವೇ ಸೋಲಿಗೆ ಪ್ರಮುಖ ಕಾರಣವಾಗಿದೆ. ಯುವ ಆರಂಭಿಕ ಅಭಿಷೇಕ್‌ ಶರ್ಮ, ಹೆನ್ರಿಚ್‌ ಕ್ಲಾಸೆನ್‌, ನಿತೀಶ್‌ ಕುಮಾರ್‌ ರೆಡ್ಡಿ ಅವರು ಬ್ಯಾಟಿಂಗ್‌ನಲ್ಲಿ ನಿರಾಸೆ ಮೂಡಿಸಿದ್ದರು.

ಬ್ಯಾಟಿಂಗ್‌ ವೈಫ‌ಲ್ಯ

ಹೈದರಾಬಾದ್‌ನಂತೆ ಲಕ್ನೋ ತಂಡದ ಬ್ಯಾಟಿಂಗ್‌ ಈ ಹಿಂದಿನ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ನೀರಸವಾಗಿತ್ತು. ಇದರಿಂದಾಗಿ ಕೆಕೆಆರ್‌ ನೀಡಿದ 200 ಪ್ಲಸ್‌ ಗುರಿಯೆದುರು ಲಕ್ನೋ ಕೇವಲ 137 ರನ್ನಿಗೆ ಆಲೌಟಾಗಿ ಶರಣಾಗಿತ್ತು. ನಾಯಕ ಕೆಎಲ್‌ ರಾಹುಲ್‌ ಇನಿಂಗ್ಸ್‌ ಕಟ್ಟಲು ವಿಫ‌ಲರಾಗಿದ್ದರೆ ಮಾರ್ಕಸ್‌ ಸ್ಟೋಯಿನಿಸ್‌, ನಿಕೋಲಾಸ್‌ ಪೂರನ್‌ ಅವರಿಂದ ದೊಡ್ಡ ಆಟ ಬರಲೇ ಇಲ್ಲ. ತಂಡದ ಬೌಲಿಂಗ್‌ ವಿಭಾಗವೂ ತೀಕ್ಷ್ಣವಾಗಿರಲಿಲ್ಲ.

Advertisement

ಅಂಕಣಗುಟ್ಟು:

ರಾಜೀವ್‌ ಗಾಂಧಿ ಮೈದಾನದ ಪಿಚ್‌ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ಒದಗಿಸಲಿದೆ. ಪಂದ್ಯ ನಡೆಯಲಿರುವ ಪಿಚ್‌ ಫ್ಲಾಟ್‌ ಅಗಿದ್ದು, ಮತ್ತೂಂದು ಬೃಹತ್‌ ಮೊತ್ತ ದಾಖಲಾಗುವ ಸಾಧ್ಯತೆ ಇದೆ. ಟಾಸ್‌ ಗೆಲ್ಲುವ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಂಡು ಬೃಹತ್‌ ಮೊತ್ತ ದಾಖಲಿಸಿ ಎದುರಾಳಿಯ ಮೇಲೆ ಒತ್ತಡ ಹೇರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗಿದೆ.

ಸಂಭ್ಯಾವ್ಯ ತಂಡಗಳು:

ಲಕ್ನೋ: ರಾಹುಲ್‌ (ನಾಯಕ), ಸ್ಟಾಯಿನಸ್‌, ಹೂಡಾ, ಪೂರನ್‌, ಟರ್ನರ್‌, ಬದೋನಿ, ಕೃಣಾಲ್‌, ಬಿಷ್ಣೋಯಿ, ನವೀನ್‌, ಮೌಸಿನ್‌, ಯಶ್‌ ಠಾಕೂರ್‌

ಹೈದ್ರಾಬಾದ್‌: ಅಭಿಷೇಕ್‌, ಹೆಡ್‌, ನಿತೀಶ್‌, ಕ್ಲಾಸೆನ್‌, ಸಮದ್‌, ಶೆಹಭಾಜ್‌, ಯಾನ್ಸನ್‌, ಕಮಿನ್ಸ್‌ (ನಾಯಕ), ಭುವನೇಶ್ವರ್‌, ಮರ್ಕಂಡೆ, ಜಯದೇವ್‌

Advertisement

Udayavani is now on Telegram. Click here to join our channel and stay updated with the latest news.

Next