Advertisement
ಲೌಕಿಕ ಬದುಕಿನಲ್ಲಿ ಮುಕ್ತಿ ಪಡೆಯುವ ಜೀವನವಿಧಾನವನ್ನು ನಿರ್ದೇಶಿಸಿಕೊಳ್ಳುವಾಗ ಚಂದ್ರನಿಂದ ಸಂಪಾದಿಸಬೇಕಾದ ಜ್ಞಾನಗಳೂ ಸಾಕಷ್ಟಿವೆ. ಮೊತ್ತ ಮೊದಲು ಈ ಜಗತ್ತಿನಲ್ಲಿ ಯಾವುದೂ ನನ್ನದಲ್ಲ, ನಾನು ಎಂಬುದೂ ನನ್ನದಲ್ಲ ಎಂದು ಅರಿತುಕೊಳ್ಳಬೇಕು. ಚಂದ್ರನೇ ಇದಕ್ಕೆ ಸ್ಪಷ್ಟ ಉದಾಹರಣೆ. ಚಂದ್ರನ ಬೆಳದಿಂಗಳು ಅವನ ಸ್ವಂತದ್ದಲ್ಲ. ಅದು ಸೂರ್ಯನಿಂದ ಪ್ರತಿಬಿಂಬಿತವಾದ ಬೆಳಕು. ಅದರೆ ಎಳೆಯ ಮಗುವೂ ಚಂದ್ರನನ್ನು ಗುರುತಿಸುವುದು ಮಾತ್ರ ಆ ಬೆಳದಿಂಗಳಿನಿಂದಾಗಿಯೇ. ಇಲ್ಲವಾದಲ್ಲಿ ಚಂದ್ರನಿರುವುದು ಬರಿಗಣ್ಣಿಗೆ ನಮಗೆ ಕಾಣದು. ನಾವು ಇದ್ದೇವೆ ಎಂಬುದು ನಮಗೆ ಗೊತ್ತಿರುತ್ತದೆ. ಆದರೆ ನಾವು ಏನಾಗಿದ್ದೇವೆ? ಎಂಬುದನ್ನು ಪರರೇ ಹೇಳಬೇಕು. ನಮ್ಮ ಇರುವಿಕೆ ಎಂಬುದು ಪ್ರಸ್ತುತವಾಗಿರಬೇಕು. ಅದಕ್ಕೆ ನಾನು-ನನ್ನದು ಎಂಬ ಮೋಹವನ್ನು ಸಂಪೂರ್ಣವಾಗಿ ಬಿಡಬೇಕು.
Related Articles
ಸೂರ್ಯನನ್ನು ಕಣ್ಣಿಗೆ ಕಾಣುವ ದೇವರು ಎಂದು ಈ ಮೊದಲೇ ಹೇಳಿ¨ªೆ. ಸೂರ್ಯನು ಬಾರದೇ ಹೋದರೆ ಏನೆಲ್ಲ ಆಗಬಹುದು? ಜೀವನವು ನಿಂತೇ ಹೋಗುತ್ತದೆ. ಇವತ್ತೂ ಇಲ್ಲ; ನಾಳೆಯೂ ಇಲ್ಲ. ಸಕಲಜೀವಿಗಳ ಬದುಕೂ ಸೂರ್ಯನ ಉದಯಾಸ್ತವನ್ನು ಅವಲಂಬಿಸಿವೆ. ಹಗಲು ಬೇಕು, ರಾತ್ರಿಯೂ ಬೇಕು. ಆಗ ಮಾತ್ರ ಜೀವನವು ಸರಿಯಾದ ಕ್ರಮದಲ್ಲಿ ಸಾಗುತ್ತದೆ. ಅಂದರೆ ಅÇÉೊಂದು ಚಲನೆ ಇರಬೇಕು; ಬದಲಾವಣೆ ಇರಬೇಕು. ಪೂರ್ವದಲ್ಲಿ ಉದಯಿಸಿ, ಪಶ್ಚಿಮದಲ್ಲಿ ಅಸ್ತಂಗತನಾಗುವ, ಸರಿಸುಮಾರು ಹನ್ನೆರಡು ಗಂಟೆಗಳ ಕಾಲ ಭೂಮಿಯು ಬೆಳಕನ್ನು ಪಡೆಯಲು ಕಾರಣವಾಗುವ ಸೂರ್ಯ ಎಲ್ಲ ಆಗುಹೋಗುಗಳಿಗೆ ಕಾರಣನಾಗಿ¨ªಾನೆ. ಹಾಗಾಗಿ, ಆತನನ್ನು ನಾವು ನಮಸ್ಕರಿಸುತ್ತೇವೆ. ಮದ್ಭಾಗವತವು ಸೂರ್ಯನಿಂದ ಕಲಿತುಕೊಳ್ಳಬೇಕಾದ ಜ್ಞಾನದ ಬಗ್ಗೆ ಹೇಳುತ್ತದೆ.
Advertisement
ಗುಣೈರ್ಗುಣಾನುಪಾದತ್ತೇ ಯಥಾಕಾಲಂ ವಿಮುಂಚತಿ |ನ ತೇಷು ಯುಜ್ಯತೇ ಯೋಗೀ ಗೋಭಿರ್ಗಾ ಇವ ಗೋಪತಿಃ ||
ಸೂರ್ಯನು ಸಮಯಕ್ಕೆ ಸರಿಯಾಗಿ ತನ್ನ ಕಿರಣಗಳಿಂದ ಸಮುದ್ರದ ನೀರನ್ನು ಸಂಗ್ರಹಿಸಿ, ಅದು ಆಗಸದಲ್ಲಿ ಮೋಡವಾಗುವಂತಿ ಮಾಡಿ, ಆಮೇಲೆ ಅದನ್ನು ಮಳೆಯಾಗಿ ಸುರಿಸುತ್ತಾನೆ. ಆದರೆ ಈ ಸಂಗ್ರಹಿಸಿದ ನೀರಿನಲ್ಲಿ ಆತ ಆಸಕ್ತಿಯನ್ನು ಹೊಂದಿರುವುದಿಲ್ಲ ಮತ್ತು ಅದನ್ನು ಭೂಮಿಗೆ ಸುರಿಯುವಾಗ ತ್ಯಾಗದ ಭಾವನೆಯನ್ನೇ ಹೊಂದಿರುತ್ತಾನೆ. ಯೋಗಿಯಾದವನೂ ಈ ಸೂರ್ಯನಂತೆ ಗ್ರಹಿಸುವಾಗ ಮತ್ತು ಅದನ್ನು ತ್ಯಜಿಸುವಾಗ ಎಲ್ಲಿಯೂ ಆಸಕ್ತನಾಗಿರಬಾರದು ಎಂಬುದು ಇದರ ಅರ್ಥ. ಸೂರ್ಯನಿಂದ ಮುಖ್ಯವಾಗಿ ತಿಳಿಯಬೇಕಾದ ಜ್ಞಾನವೆಂದರೆ ಸಂಗ್ರಹ ಮತ್ತು ತ್ಯಾಗ. ಇಲ್ಲಿ ಸೂರ್ಯ ಪರರಿಗಾಗಿ, ಅಂದರೆ ಭೂಮಿಗಾಗಿ ನೀರನ್ನು ತನ್ನಲ್ಲಿ ಸಂಗ್ರಹಿಸುತ್ತಾನೆ. ಆದರೆ ಆ ನೀರು ತನ್ನದ್ದಲ್ಲ ಎಂಬಂತೆ ಮತ್ತೆ ಭೂಮಿಗೆ ಮಳೆಯ ರೂಪದಲ್ಲಿ ಸುರಿಸುತ್ತಾನೆ. ಇದು ಅವನ ಗುಣ. ಇಂಥ ಗುಣವನ್ನು ನಾವುಕೂಡ ಬೆಳಸಿಕೊಳ್ಳಬೇಕು. ಸಂಪತ್ತು, ಧನ ಕನಕ, ಜ್ಞಾನವನ್ನು ಸಂಪಾದಿಸುವಾಗಲೇ ಅವು ನನ್ನದಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಅಂತೆಯೇ ಅವುಗಳನ್ನು ಪರರಿಗೆ ಹಂಚುವ ಬುದ್ಧಿಯನ್ನೂ ಬೆಳಸಿಕೊಳ್ಳಬೇಕು. ಎಲ್ಲಿ ನಾವು ಸಂಗ್ರಹಿಸಿದ್ದು ನಮ್ಮದಲ್ಲ ಎಂದುಕೊಳ್ಳುತ್ತೇವೆಯೋ ಅಲ್ಲಿ ನಾವು ಏನನ್ನೂ ತ್ಯಜಿಸಲು ಸಿದ್ಧರಿರುತ್ತೇವೆ. ಹೂವೊಂದು ಅರಳುತ್ತಿದೆ ಎಂದರೆ ಅದಕ್ಕೆ ಸೂರ್ಯನ ಬೆಳಕು ಬಿದ್ದಿದೇ ಅಂತಲೇ ಅರ್ಥ. ಆತ್ಮವನ್ನು ಅರಿತುಕೊಳ್ಳುವಲ್ಲಿ ಸೂರ್ಯನು ಅತ್ಯುತ್ತಮ ಉದಾಹರಣೆ. ಹಲವಾರು ಪಾತ್ರೆಗಳಲ್ಲಿ ನೀರನ್ನು ತುಂಬಿಸಿಟ್ಟು ಸೂರ್ಯನ ಪ್ರತಿಬಿಂಬವನ್ನು ನೋಡಿದಾಗ ಎಷ್ಟು ಪಾತ್ರೆಗಳಿವೆಯೋ ಅಷ್ಟು ಸಂಖ್ಯೆಯ ಸೂರ್ಯನು ಕಾಣಿಸಿಕೊಳ್ಳುತ್ತಾನೆ. ಆದರೆ, ನಿಜವಾಗಿ ಇರುವುದು ಒಂದೇ ಸೂರ್ಯ. ಆತ್ಮವೂ ಇದೇ ರೀತಿ ಒಂದೇ ಆಗಿದ್ದು ನಮ್ಮ ಸ್ಥೂಲಬುದ್ಧಿಯಿಂದಾಗಿ ಒಂದೇ ಆತ್ಮದ ಸತ್ಯವನ್ನು ಅರಿಯಲಾರೆವು. ಸೂರ್ಯನ ಈ ದೃಷ್ಟಾಂತದಿಂದ ಆತ್ಮದ ಅಖಂಡತೆಯನ್ನು ಅರಿತುಕೊಳಬೇಕು.
ಬೆಳಕು ಎಂಬುದು ಸತ್ಯವನ್ನು ತೋರು ಎಂದೂ ಅರ್ಥೈಸಬಹುದಾದ ಪದ. ನಮ್ಮಲ್ಲಿ ಸೂರ್ಯನಂತಹ ಬೆಳಕಿರಬೇಕು. ಅಂದರೆ ಸತ್ಯವನ್ನು ಪಾಲಿಸುವ, ಸತ್ಯವನ್ನು ತೋರಿಸುವ ಪಾರದರ್ಶಕವಾದ ಜೀವನ ಪದ್ಧತಿ ನಮ್ಮದಾಗಬೇಕು. ..ಮುಂದುವರಿಯುವುದು. ವಿಷ್ಣು ಭಟ್ ಹೊಸ್ಮನೆ