Advertisement
”ಯಾವುದೇ ಜೈಲು ನನ್ನನ್ನು ಒಳಗೆ ಇಡಲು ಸಾಧ್ಯವಿಲ್ಲ ಮತ್ತು ನಾನು ಹೊರಗೆ ಬಂದು ನನ್ನ ಭರವಸೆಗಳನ್ನು ಪೂರೈಸುತ್ತೇನೆ” ಎಂದು ಕೇಜ್ರಿವಾಲ್ ಅವರು ನೀಡಿದ ಸಂದೇಶವನ್ನು ಓದಿ ಹೇಳಿದರು.
Related Articles
Advertisement
ಆ ವೀಡಿಯೋವನ್ನು ಎಲ್ಲರೂ ನೋಡಿದ್ದಾರೆ: ಬಾನ್ಸುರಿ ಸ್ವರಾಜ್ ತಿರುಗೇಟು
ಬಿಜೆಪಿ ನಾಯಕಿ ಬಾನ್ಸುರಿ ಸ್ವರಾಜ್ ಪ್ರತಿಕ್ರಿಯಿಸಿ “ಅವರು ಇಂದು ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಅರಿತುಕೊಳ್ಳಬಲ್ಲೆ. ಅದಕ್ಕೆ ನಾನು ಹೇಳುವ ಏಕೈಕ ವ್ಯಕ್ತಿ ಅರವಿಂದ್ ಕೇಜ್ರಿವಾಲ್. ಈ ಮದ್ಯದ ನೀತಿ ಕಾರಣಕ್ಕಾಗಿ ಅಳುವ ಎಲ್ಲಾ ಮಹಿಳೆಯರಿಗೆ ಅವರು ಉತ್ತರಿಸಬೇಕು” ಎಂದಿದ್ದಾರೆ.
ಎಎಪಿ-ಕಾಂಗ್ರೆಸ್ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿದ ಬಾನ್ಸುರಿ “ಕಾಂಗ್ರೆಸ್ ತನ್ನ ರಾಗವನ್ನು ಬದಲಾಯಿಸುತ್ತಿದೆ. ಅರವಿಂದ್ ಕೇಜ್ರಿವಾಲ್, ಅವರ ಪಕ್ಷ ಮತ್ತು ಕ್ಯಾಬಿನೆಟ್ ಮದ್ಯ ಹಗರಣದಲ್ಲಿ 100 ಕೋಟಿ ಕಿಕ್‌ಬ್ಯಾಕ್ ತೆಗೆದುಕೊಂಡಿದ್ದಾರೆ ಎಂದು ಅಜಯ್ ಮಾಕನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಆ ವೀಡಿಯೋವನ್ನು ಎಲ್ಲರೂ ನೋಡಿದ್ದಾರೆ. ಗೋವಾ ಚುನಾವಣೆಯಲ್ಲಿ ಹಗರಣ ನಡೆದಿದೆ, ಕಾಂಗ್ರೆಸ್ ವಿರುದ್ಧ ಹಣ ಬಳಸಲಾಗಿದೆ ಎಂದು ಅಜಯ್ ಮಾಕನ್ ಆರೋಪಿಸಿದ್ದಾರೆ. ಇಂದು ಕಾಂಗ್ರೆಸ್ ರಾಜಕೀಯ ಲಾಭಕ್ಕಾಗಿ ತನ್ನ ರಾಗವನ್ನು ಬದಲಾಯಿಸುತ್ತಿದೆ” ಎಂದಿದ್ದಾರೆ.