ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
Advertisement
ವಿಶೇಷ ಪ್ಯಾಕೇಜ್‌ಗೆ ಮನವಿಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಯ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಗಮನಕ್ಕೆ ತಂದಿದ್ದೇವೆ. ಅಲ್ಲದೆ ಸುಬ್ರಹ್ಮಣ್ಯ ಸಹಿತ ಹಲವು ಪ್ರದೇಶಕ್ಕೆ ಖುದ್ದು ಭೇಟಿ ನೀಡಿದ್ದೇನೆ. ಇಡೀ ಕರಾ ವಳಿಗೆ ಅನ್ವಯವಾಗುವಂತೆ ವಿಶೇಷ ಪ್ಯಾಕೇಜ್ ಘೋಷಣೆಗೆ ಮನವಿ ಮಾಡಿದ್ದೇವೆ. ಆಗಸ್ಟ್ 15ರ ಕಾರ್ಯ ಕ್ರಮದಲ್ಲಿ ಪ್ಯಾಕೇಜ್ ಘೋಷಣೆ ನಿರೀಕ್ಷೆಯಿದೆ ಎಂದರು.
ಬೆಳ್ಳಾರೆಯ ಬಿಜೆಪಿ ಯುವಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆಗೆ ಸಂಬಂಧಿಸಿದಂತೆ ಕೊಲೆ ಮಾಡಿದವರು ಕೇರಳದವರಲ್ಲ, ಸ್ಥಳೀಯರೆಂದು ಗೃಹ ಸಚಿವರು ಸ್ಪಷ್ಟ ಪಡಿಸಿದ್ದಾರೆ. ಪೊಲೀಸ್ ಇಲಾಖೆಗೆ ಮುಕ್ತ ಅವಕಾಶ ನೀಡಿದ್ದೇವೆ. ಒಂದೆ ರಡು ದಿನದಲ್ಲಿ ಪ್ರಮುಖ ಆರೋಪಿಯ ಬಂಧನವಾಗಲಿದೆ ಎಂದರು. ಇದನ್ನೂ ಓದಿ : ಬಂಗಾಲಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ : ಕರಾವಳಿಯಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆ
Related Articles
ಜನಪ್ರತಿನಿಧಿಗಳು, ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಉಡುಪಿ ಜಿಲ್ಲೆಯಲ್ಲಿ 4 ಲಕ್ಷ, ದ.ಕ. ಜಿಲ್ಲೆಯಲ್ಲಿ 6 ಲಕ್ಷ ಮನೆ ಹಾಗೂ ಕಟ್ಟಡಗಳ ಮೇಲೆ ಆ. 13ರಿಂದ 15ರ ವರೆಗೆ ರಾಷ್ಟ್ರ ಧ್ವಜವನ್ನು ಹಾರಿಸಲು ನಿರ್ಧರಿ ಸಲಾಗಿದೆ. ಆ. 9ರಿಂದ ರಾಷ್ಟ್ರಧ್ವಜ ವಿತರಿಸಲಾಗುತ್ತದೆ ಎಂದರು.
Advertisement
ಗೊಂದಲ ಇಲ್ಲರಾಷ್ಟ್ರಧ್ವಜ ಮಾರಾಟವನ್ನು ಸರಕಾರ ಮಾಡುತ್ತಿಲ್ಲ. ಸ್ತ್ರೀ ಶಕ್ತಿ, ಸ್ವ ಸಹಾಯ ಗುಂಪುಗಳಿಗೆ ಬಿಟ್ಟಿ ದ್ದೇವೆ. ಅಂಗಡಿ ಮಾಲಕರು ಖಾಸಗಿಯಾಗಿಯೂ ಮಾರು ತ್ತಿದ್ದಾರೆ. ಒಂದೇ ರೀತಿಯ ಬೆಲೆ ಕಾಪಾಡಿಕೊಳ್ಳಲು ಸ್ತ್ರೀ ಶಕ್ತಿ ಗುಂಪುಗಳಿಗೆ ಮನವಿ ಮಾಡಿದ್ದೇವೆ. ಇದರಲ್ಲಿ ಯಾವುದೇ ಗೊಂದಲ ಅಥವಾ ಅವ್ಯವಹಾರ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಹರ್ ಘರ್ ತಿರಂಗಾ ಎಂಬುದನ್ನು ಹಿಂದಿಯಲ್ಲಿ ಬರೆದಿರುವುದಕ್ಕೆ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.