Advertisement

ಆ ಒಂದು ಕಾರಣದಿಂದ ಭಾರತ 2019ರ ವಿಶ್ವಕಪ್ ಗೆಲ್ಲಲಾಗಲಿಲ್ಲ: ಸುನೀಲ್ ಗಾವಸ್ಕರ್

03:53 PM Aug 23, 2020 | keerthan |

ಮುಂಬೈ: ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲಾ ತಂಡಗಳನ್ನು ಮಣಿಸಿ 2019ರ ವಿಶ್ವಕಪ್ ಸೆಮಿ ಫೈನಲ್ ಗೆ ಕಾಲಿರಿಸಿದ್ದ ಭಾರತ, ಉಪಾಂತ್ಯ ಪಂದ್ಯದಲ್ಲಿ ಸೋಲನುಭವಿಸಿದ್ದು ಇನ್ನೂ ಭಾರತೀಯರ ಪಾಲಿಗೆ ಇನ್ನೂ ಮರೆಯಲಾಗಿಲ್ಲ. 2015ರ ವಿಶ್ವಕಪ್ ಗೆಲ್ಲುವ ಫೇವರೇಟ್ ಆಗಿದ್ದ ಭಾರತ ಯಾವ ಕಾರಣಕ್ಕೆ ಸೋಲನುಭವಿಸಿತ್ತು ಎನ್ನುವುದರ ಬಗ್ಗೆ ಇನ್ನೂ ಚರ್ಚೆಗಳಾಗುತ್ತಿದೆ.

Advertisement

ಭಾರತದ ಮಾಜಿ ನಾಯಕ ಸುನೀಲ್ ಗಾವಸ್ಕರ್ ವಿಶ್ವಕಪ್ ಸೋಲಿಗೆ ಕಾರಣವೇನೆಂದು ಹೇಳಿದ್ದಾರೆ.

ಭಾರತದ ನಾಲ್ಕನೇ ಕ್ರಮಾಂಕದಲ್ಲಿ ಪರಿಪೂರ್ಣ ಬ್ಯಾಟ್ಸಮನ್ ಓರ್ವನನ್ನು ಆಡಿಸಬೇಕಿತ್ತು. ಭಾರತದ ಅಗ್ರ ಮೂರು ಆಟಗಾರರು ಅದ್ಭುತವಾಗಿ ಆಡುತ್ತಾರೆ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಸರಿಯಾದ ಬ್ಯಾಟ್ಸಮನ್ ಇರದೆ ಅಗತ್ಯ ಸಮಯದಲ್ಲಿ ಸಂಕಷ್ಟಕ್ಕೆ ಒಳಗಾಗಬೇಕಾಯಿತು ಎಂದು ಗಾವಸ್ಕರ್ ಹೇಳಿದ್ದಾರೆ.

ಇದೇ ಸಮಯದಲ್ಲಿ ವಿರಾಟ್ ಕೊಹ್ಲಿ ಓರ್ವ ನಾಯಕನಾಗಿ ಜನಮಾನಸದಲ್ಲಿ ಉಳಿಯಬೇಕಾದರೆ ಅವರು ಟ್ರೋಫಿ ಗೆಲ್ಲಬೇಕು ಎಂದೂ ಲಿಟಲ್ ಮಾಸ್ಟರ್ ಸುನೀಲ್ ಗಾವಸ್ಕರ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next