ಜೈಪುರ್ ಪರ ನಾಯಕ ಅರ್ಜುನ್ ದೇಶ್ವಾಲ್ (9), ರೈಡರ್ ಅಭಿಜೀತ್ ಮಲಿಕ್ (7) ಉತ್ತಮ ಪ್ರದರ್ಶನ ನೀಡಿದರು. ಬೆಂಗಾಲ್ ತಂಡದ ಪ್ರಣಯ್ ರಾಣೆ (8) ಮತ್ತು ಅರ್ಜುನ್ ರಾಥಿ (7) ಹೋರಾಟ ನೀಡಿದರೂ ತಂಡವನ್ನು ದಡ ಸೇರಿಸುವಲ್ಲಿ ವಿಫಲರಾದರು.
Advertisement
ಟೈಟಾನ್ಸ್‌ಗೂ 12ನೇ ಜಯ: ಇನ್ನೊಂದು ಪಂದ್ಯದಲ್ಲಿ ತೆಲುಗು ಟೈಟಾನ್ಸ್ ಕೂಡ ತನ್ನ 12ನೇ ಗೆಲುವನ್ನು ಆಚರಿಸಿತು. ಅದು 48-36ರಿಂದ ಆತಿ ಥೇಯ ಪುಣೇರಿ ಪಲ್ಟಾನ್‌ಗೆ ಸೋಲುಣಿಸಿತು. ಪವನ್ ಶೆಹ್ರಾವತ್ (15 ಅಂಕ) ಮತ್ತು ಆಶಿಷ್ ನರ್ವಾಲ್ (12 ಅಂಕ) ಟೈಟಾನ್ಸ್ ಗೆಲುವಿನ ಹೀರೋಗಳಾಗಿ ಮೂಡಿಬಂದರು.