Advertisement

ರಾಮ ಪಾದಗಳಿಗೆ ರವಿಕಿರಣ! ಅಯೋಧ್ಯೆಯ ಶ್ರೀರಾಮ ಮಂದಿರದ ವೈಶಿಷ್ಟ್ಯ ಬಹಿರಂಗ

01:08 AM Oct 18, 2021 | Team Udayavani |

ಹೊಸದಿಲ್ಲಿ: ಪ್ರತೀ ವರ್ಷ ಸಂಕ್ರಾಂತಿಯಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮುಂಜಾನೆಯ ಸೂರ್ಯನ ಮೊದಲ ಕಿರಣಗಳು ದೇಗುಲದ ಲಿಂಗದ ಮೇಲೆ ಬೀಳುತ್ತವೆ. ಅದೇ ರೀತಿ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀರಾಮ ದೇಗುಲದಲ್ಲಿ ಪ್ರತೀ ವರ್ಷ ರಾಮನವಮಿಯಂದು ಉದಯ ಸೂರ್ಯನ ಕಿರಣಗಳು ರಾಮ ವಿಗ್ರಹದ ಮೇಲೆ ಬೀಳುವಂತೆ ಗರ್ಭಗುಡಿಯ ವಾಸ್ತುಶಿಲ್ಪವನ್ನು ರೂಪಿಸಲಾಗುತ್ತದೆ.

Advertisement

ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಸದಸ್ಯ ಕಾಮೇಶ್ವರ್‌ ಚೌಪಾಲ್‌ ಈ ವಿಷಯ ತಿಳಿಸಿದ್ದಾರೆ. ಒಡಿಶಾ ದಲ್ಲಿರುವ 13ನೇ ಶತಮಾನದ ಕೊನಾರ್ಕ್‌ ಸೂರ್ಯ ದೇಗುಲದ ವಾಸ್ತುಶಿಲ್ಪವನ್ನು ಸ್ಫೂರ್ತಿಯಾಗಿ ಇರಿಸಿ ಕೊಂಡು ರಾಮಮಂದಿರ ನಿರ್ಮಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ವಾಸ್ತುಶಿಲ್ಪದ ಬಗ್ಗೆ ಸಮಾಲೋಚನೆ
ಈ ವಿಶಿಷ್ಟ ತಂತ್ರಜ್ಞಾನವುಳ್ಳ ವಾಸ್ತುಶಿಲ್ಪವನ್ನು ಸಿದ್ಧಪಡಿಸುವ ಪ್ರಸ್ತಾವನೆಯನ್ನು ಈಗಾಗಲೇ ಮಂದಿರ ನಿರ್ಮಾಣ ನಿರತ ವಾಸ್ತುಶಿಲ್ಪ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ. ಅಗತ್ಯ ತಾಂತ್ರಿಕ ಸೌಲಭ್ಯಗಳ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ:ವಿಶ್ವ ಅಂಚೆ ದಿನಾಚರಣೆ : ರಾಜ್ಯಪಾಲರಿಂದ ಡಾಕ್‌ ಸೇವಾ ಪ್ರಶಸ್ತಿ ಪ್ರದಾನ

ಐಐಟಿ ತಜ್ಞರ ಸಹಕಾರ
ಸೂರ್ಯ ಕಿರಣಗಳು ಶ್ರೀರಾಮ ವಿಗ್ರಹ ವನ್ನು ಸ್ಪರ್ಶಿಸುವ ಹೃದಯಂಗಮ ಸನ್ನಿವೇಶವನ್ನು ಪ್ರತೀ ಶ್ರೀರಾಮ ನವಮಿಯಂದು ಸೃಷ್ಟಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ ಎಂದು ಚೌಪಾಲ್‌ ತಿಳಿಸಿ ದ್ದಾರೆ. ರಾಷ್ಟ್ರೀಯ ಕಟ್ಟಡ ನಿರ್ಮಾಣ ಸಂಸ್ಥೆ (ಎನ್‌ಐಬಿಸಿ), ದಿಲ್ಲಿ, ಮುಂಬಯಿ ಮತ್ತು ರೂರ್ಕಿ ಐಐಟಿಯ ವಿಜ್ಞಾನಿಗಳು ಹಾಗೂ ತಜ್ಞರು ಈ ಬಗ್ಗೆ ರೂಪುರೇಷೆ ರೂಪಿಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next