ನವದೆಹಲಿ: ನಾನು ಸಮನ್ಸ್ ನಿಂದ ಪರಾಗಬೇಕಾದರೆ ಬಿಜೆಪಿ ಸೇರಬೇಕು… ಇಲ್ಲದಿದ್ದರೆ ಜಾರಿ ನಿರ್ದೇಶನಾಲಯದಿಂದ ನಿರಂತರ ಸಮನ್ಸ್ ಬರುತ್ತಲೇ ಇರುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ‘X’ ನಲ್ಲಿ ಕಿಡಿಕಾರಿದ ಕೇಜ್ರಿವಾಲ್ ನಾನು ಚುನಾವಣೆಯಲ್ಲಿ ಭಾಗವಹಿಸಬಾರದು ಎಂಬ ಉದ್ದೇಶ ಇಟ್ಟುಕೊಂಡೆ ಬಿಜೆಪಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ತನ್ನ ಕೈಗೊಂಬೆಯಂತೆ ಕುಣಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಇದರೊಂದಿಗೆ ಇಡಿ ಮತ್ತು ಮೋದಿ ಸರ್ಕಾರದ ಸತ್ಯ ಜನರಿಗೆ ಗೊತ್ತಾಗುತ್ತಿದೆ. ಇಡಿಯಿಂದ ಕಿರುಕುಳ ಪಡೆದು ಅಂಡೆಕ ಮಂದಿ ಬಿಜೆಪಿಗೆ ಹೇಗೆ ಸೇರ್ಪಡೆಯಾಗಿದ್ದಾರೆ. ಇಡಿ ರೇಡ್ ಮಾಡಿದ ನಂತರ ಅಧಿಕಾರಿಗಳಿಗೆ ನೀವು ಎಲ್ಲಿಗೆ ಹೋಗುತ್ತೀರಿ – ಬಿಜೆಪಿ ಅಥವಾ ಜೈಲಿಗೆ? ಪ್ರಶ್ನೆ ಕೇಳಲಾಗುತ್ತದೆ, ಒಂದು ವೇಳೆ ಬಿಜೆಪಿಗೆ ಹೋಗಲು ಒಪ್ಪದವರನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.
ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಇಂದು ಬಿಜೆಪಿ ಸೇರಿದರೆ ನಾಳೆಯೇ ಅವರಿಗೆ ಜಾಮೀನು ಸಿಗಲಿದೆ. ಈ ಮೂವರೂ ಯಾವುದೇ ಅಪರಾಧ ಮಾಡಿಲ್ಲ, ಬಿಜೆಪಿ ಸೇರಲು ನಿರಾಕರಿಸಿದ್ದಾರೆ ಈ ಕಾರಣಕೋಸ್ಕರ ಅವರು ಜೈಲಿನಲ್ಲಿ ಇದ್ದಾರೆ. ನಾನು ಇಂದು ಬಿಜೆಪಿ ಸೇರಿದರೆ ನನಗೆ ಇಡಿಯಿಂದ ಸಮನ್ಸ್ ಬರುವುದು ನಿಲ್ಲುತ್ತದೆ ಎಂದು ಹೇಳಿದ ಅವರು.
ಪ್ರಧಾನಮಂತ್ರಿಗಳೇ ದೇವರು ಎಲ್ಲವನ್ನೂ ನೋಡುತ್ತಾನೆ ಹಾಗಾಗಿ ನೀವು ಮಾಡುವ ಅನ್ಯಾಯಕ್ಕೆ ತಕ್ಕ ಶಿಕ್ಷೆ ದೇವರು ಕೊಡುತ್ತಾರೆ ಸ್ವಲ್ಪ ವಿಳಂಭವಾಗಬಹುದು, ಸಮಯ ಯಾವಾಗಲೂ ಒಂದೇ ರೀತಿ ಇರುವುದಿಲ್ಲ ಹಾಗಾಗಿ ದೇವರಿಗಾದರೂ ಭಯ ಪಡಿ ಎಂದು ಬರೆದುಕೊಂಡಿದ್ದಾರೆ.