Advertisement
ಸುಮಿತ್ ನಾಗಲ್ ಒಲಿಂಪಿಕ್ಸ್ ಸಿಂಗಲ್ಸ್‌ನಲ್ಲಿ ಗೆಲುವು ಸಾಧಿಸಿದ ಭಾರತದ ಕೇವಲ 3ನೇ ಟೆನಿಸಿಗ. 1988ರ ಸಿಯೋಲ್ ಗೇಮ್ಸ್‌ನಲ್ಲಿ ಜೀಶನ್ ಅಲಿ ಪರಗ್ವೆಯ ವಿಕ್ಟೊ ಕ್ಯಾಬಲ್ಲೆರೊ ಅವರನ್ನು ಮಣಿಸಿದ್ದರು. ಮುಂದಿನದು ಲೆಜೆಂಡ್ರಿ ಲಿಯಾಂಡರ್ ಪೇಸ್ ಸರದಿ. 1996ರ ಅಟ್ಲಾಂಟಾ ಗೇಮ್ಸ್‌ನಲ್ಲಿ ಬ್ರಝಿಲ್‌ನ ಫೆರ್ನಾಂಡೊ ಮೆಲಿಗೆನಿ ಅವರನ್ನು ಮಣಿಸಿದ ಪೇಸ್ ಕಂಚು ಜಯಿಸಿದ್ದರು. ಪೇಸ್ ಗೆಲುವಿನ ಬಳಿಕ ಸೋಮದೇವ್ ದೇವವರ್ಮನ್, ವಿಷ್ಣುವರ್ಧನ್ 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಆಡಿದರೂ ಮೊದಲ ಸುತ್ತಿನಲ್ಲೇ ಎಡವಿದ್ದರು.
**
ಆರ್ಚರಿ: ಗುರಿ ತಪ್ಪಿದ ಬದಲಿ ಜೋಡಿ
ಟೋಕಿಯೊ: ಆರ್ಚರಿ ಮಿಕ್ಸೆಡ್ ಸ್ಪರ್ಧೆಯಲ್ಲಿ ಭಾರತದ ದೀಪಿಕಾ ಕುಮಾರಿ- ಪ್ರವೀಣ್ ಜಾಧವ್ ಜೋಡಿ ಕೊರಿಯಾ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ನಿರಾಸೆ ಮೂಡಿಸಿದೆ. ಇದೇ ಮೊದಲ ಸಲ ಒಲಿಂಪಿಕ್ಸ್ ಸ್ಪರ್ಧೆಗಿಳಿದಿದ್ದ 17 ವರ್ಷದ ಕಿಮ್ ಜೆ ಡೋಕ್ ಹಾಗೂ 20 ವರ್ಷದ ಅನ್ ಸಾನ್ ಸೇರಿಕೊಂಡು ಭಾರತದ ಭರವಸೆಯನ್ನು 6-2 ಅಂತರದಿಂದ ಚಿವುಟಿ ಹಾಕಿದರು.
ಕೊನೆಯ ಕ್ಷಣದಲ್ಲಿ ಅತನು ದಾಸ್ ಅವರನ್ನು ಹೊರಗಿರಿಸಿ ಪ್ರವೀಣ್ ಜಾಧವ್ ಅವರನ್ನು ದೀಪಿಕಾಗೆ ಜೋಡಿಯಾಗಿ ಕಣಕ್ಕಿಳಿಸಿದ್ದು ಈಗ ಟೀಕೆಗೆ ಗುರಿಯಾಗಿದೆ. ಇದೊಂದು “ಬಿಗ್ ಬ್ಲಿಂಡರ್’ ಎಂದು ಆರ್ಚರಿ ತರಬೇತುದಾರರನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ತಂಡದೊಂದಿಗಿದ್ದ ಎಎಐ ಅಧಿಕಾರಿ ವೀರೇಂದ್ರ ಸಚೆªàವ್ ಈ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ರ್‍ಯಾಂಕಿಂಗ್ ಸುತ್ತಿನಲ್ಲಿ ಅತನು ದಾಸ್‌ಗಿಂತ ಪ್ರವೀಣ್ ಜಾಧವ್ ಉತ್ತಮ ಪ್ರದರ್ಶನ ನೀಡಿದ ಕಾರಣ ಈ ಬದಲಾವಣೆ ಮಾಡಲಾಗಿತ್ತು.
**
Related Articles
Advertisement
ಈಕೆಯ ಹೆಸರು ನಟಾಲಿಯಾ ಪಾರ್ಟಿಕಾ. ದೇಶ ಪೋಲೆಂಡ್. ಆಟ ಟೇಬಲ್ ಟೆನಿಸ್. ವಿಶೇಷ ಹಾಗೂ ಅಚ್ಚರಿಯೆಂದರೆ, ಈಕೆ ಹೊಂದಿರುವುದು ಒಂದೇ ಕೈ!
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾರ್ಟಿಕಾ ಪಾಲ್ಗೊಂಡಿದ್ದು, ಆಸ್ಟ್ರೇಲಿಯದ ಮೈಕಲ್ ಬ್ರೋಮ್ಲಿ ಅವರನ್ನು ಮೊದಲ ಪಂದ್ಯದಲ್ಲಿ ಪರಾಭವಗೊಳಿಸಿದ್ದಾರೆ.
ಹುಟ್ಟುವಾಗಲೇ ಬಲಗೈ ಹೊಂದಿರದ ನಟಾಲಿಯಾ ಪಾರ್ಟಿಕಾ 1999ರಲ್ಲಿ ಮೊದಲ ಅಂತಾರಾಷ್ಟ್ರೀಯ ಪದಕ ಗೆದ್ದರು. ಅದು ವಿಶ್ವ ಚಾಂಪಿಯನ್‌ಶಿಪ್ ಆಗಿತ್ತು. 2000ದ ಸಿಡ್ನಿ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿಗ ಈಕೆಯ ವಯಸ್ಸು ಕೇವಲ 11 ವರ್ಷ. ಇದೊಂದು ದಾಖಲೆ ಎನಿಸಿತು. 2004ರ ಆಥೇನ್ಸ್ ಪ್ಯಾರಾಲಿಂಪಿಕ್ಸ್ ಸಿಂಗಲ್ಸ್‌ನಲ್ಲಿ ಚಿನ್ನ, ತಂಡ ಸ್ಪರ್ಧೆಯಲ್ಲಿ ಬೆಳ್ಳಿಗೆ ಕೊರಳೊಡ್ಡಿದರು. ಪದಕ ಬೇಟೆ ಮುಂದುವರಿಯುತ್ತಲೇ ಹೋಯಿತು. ಟೋಕಿಯೊದಲ್ಲಿ ಈಕೆಯ ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.