Advertisement

ತಮ್ಮಣ್ಣ , ಸುಮಲತಾ ನೀರೆರಚಾಟ 

12:30 AM Mar 08, 2019 | Team Udayavani |

ಸುಮಲತಾ ರಂಗಪ್ರವೇಶದಿಂದ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರಿದ್ದು, ಮೈತ್ರಿ ಪಕ್ಷಗಳಾದ ಕಾಂಗ್ರೆಸ್‌-ಜೆಡಿಎಸ್‌ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಈ ಮಧ್ಯೆ, ಇದೇ ಮೊದಲ ಬಾರಿಗೆ ಸಚಿವ ತಮ್ಮಣ್ಣ ಅವರು ಬಹಿರಂಗವಾಗಿ ಸುಮಲತಾ ವಿರುದ್ಧ  ಹರಿಹಾಯ್ದಿದ್ದು, ಇದಕ್ಕೆ ಅಷ್ಟೇ ತೀಕ್ಷ್ಣ ಮಾತುಗಳಲ್ಲಿ ಸುಮಲತಾ ಕೂಡಾ ತಿರುಗೇಟು ನೀಡಿದ್ದಾರೆ. ಇವರಿಬ್ಬರ ನಡುವಿನ ವಾಕ್ಸಮರದ ಝಲಕ್‌ ಇಲ್ಲಿದೆ.

Advertisement

ಅಂಬರೀಶ್‌ ಬದುಕಿದ್ದಾಗ ಲೋಟ ನೀರಾದರೂ ಕೊಟ್ಟಿದ್ದಾಳಾ?
ಅಂಬರೀಶ್‌ ಶಾಸಕ, ಸಚಿವರಾಗಿದ್ದ ವೇಳೆ ಅವರ ಮನೆಗೆ ಹೋದ ಎಷ್ಟು ಜನರನ್ನು ಈಯಮ್ಮ (ಸುಮಲತಾ)
ಮಾತನಾಡಿಸಿದ್ದಾರೆ. ಎಷ್ಟು ಜನಕ್ಕೆ ಕುಡಿಯಲು ನೀರು ಕೊಟ್ಟು, ನೀನು ಯಾವೂರಪ್ಪ, ಏನಪ್ಪ ನಿನ್ನ ಎಂದು ಕೇಳಿದ್ದಾರೆ?. ಅಂದು ಜನರ ಕಷ್ಟ-ಸುಖಗಳಿಗೆ ಸ್ಪಂದಿಸದವರು ಇವತ್ತು ಅಂಬರೀಶ್‌ ಹೆಸರೇಳಿಕೊಂಡು ಬಂದು, ನಾನೇನೋ ಉದ್ಧಾ ರ ಮಾಡ್ತೀನಿ ಅಂತಿದ್ದಾರೆ.

 ಮಂಡ್ಯ ಜಿಲ್ಲೆಯ ಜನರು ಬಣ್ಣದವರ ಮಾತಿಗೆ ಮರುಳಾಗಬಾರದು. ಮೋಜು ಮಾಡಿಕೊಂಡು ಮಲೇಷ್ಯಾ, ಸಿಂಗಾಪುರ ಅಂತ ತಿರುಗಿಕೊಂಡು ಬಣ್ಣದ ಬದುಕು ಮಾಡುವ ಜನರು ನಮಗೆ ಬೇಡ. ಯಾರಿಗೆ ರೈತರ ಬಗ್ಗೆ ಕಾಳಜಿ ಇದೆಯೋ ಅವರನ್ನು ಬೆಂಬಲಿಸಬೇಕು.

ಚುನಾವಣಾ ಕಣದಿಂದ ಹಿಂದೆ ಸರಿಯುವಂತೆ ನಾವೇನು ಸುಮಲತಾ ಮನವೊಲಿಸುವುದಿಲ್ಲ.

ಯಾರೋ ನೂರು ಜನ ನಾಲ್ಕು ಬಸ್‌ನಲ್ಲಿ ಬೆಂಗಳೂರಿಗೆ ಹೋಗಿ ನೀವೆ ಚುನಾವಣೆಗೆ ನಿಲ್ಲಿ ಎಂದು ಕರೆದ ಮಾತ್ರಕ್ಕೆ ಅವರನ್ನು ಉದ್ಧಾರ ಮಾಡಲು ಸಾಧ್ಯವೇ?.

Advertisement

ನಿಖೀಲ್‌ಕುಮಾರಸ್ವಾಮಿಗೆ ರಕ್ತದಿಂದಲೇ ರಾಜಕೀಯ ಹುಟ್ಟು ಬೆಳೆದು ಬಂದಿದೆ. ನಿಖೀಲ್‌ರನ್ನು ಲೋಕಸಭೆಗೆ ಆಯ್ಕೆ ಮಾಡಿದರೆ ಜಿಲ್ಲೆಗೆ ಮತ್ತಷ್ಟು ಅನುದಾನಗಳು ಹರಿದು ಬರಲಿವೆ.

ಇಂದು ಸಿದ್ಧರಾಮಯ್ಯ, ಕುಮಾರಸ್ವಾಮಿ ಜೊತೆಗೂಡಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಹಾಗಾಗಿ, ಸಿದ್ದರಾಮಯ್ಯಗೆ ಗೌರವ ನೀಡುವ ಕೆಲಸ ಮಾಡಬೇಕು.

ತಮ್ಮಣ್ಣ ನಮ್ಮನೇಲಿ ನೀರು ಕುಡಿದದ್ದನ್ನು ನೆನಪಿಸಿಕೊಳ್ಳಲಿ

ಅತಿಥಿ ಸತ್ಕಾರ ಏನು ಅಂತ ಅಂಬಿ ಕುಟುಂಬಕ್ಕೆ ಯಾರೂ ಹೇಳಿಕೊಡಬೇಕಿಲ್ಲ. ತಮ್ಮಣ್ಣನವರು ನಮ್ಮ ಮನೆಗೆ ಎಷ್ಟು ಬಂದಿದ್ದಾರೆ, ಎಷ್ಟು ಸಲ ನೀರು ಕುಡಿದಿದ್ದಾರೆ, ಊಟ ದ್ದಾರೆ. ಅವರ ಮನೆಗೆ ನಾವೆಷ್ಟು ಸಲ ಹೋಗಿದ್ದೇವೆ.ಇದೆಲ್ಲವನ್ನೂ ಅವರ ಕುಟುಂಬದವರೇ ಹೇಳಲಿ.

 ಬಣ್ಣ ಹಚ್ಚಿರುವವರು ಇನ್ಯಾರೂ ಸ್ಪರ್ಧೆ ಯಲ್ಲಿ ಇಲ್ಲವೇ?. ನಿಖೀಲ್‌ ಕೂಡಾ ಸಿನಿಮಾ ದವರು. ತಮ್ಮಣ್ಣನವರ ಹೇಳಿಕೆ ನಿಖೀಲ್‌ಗ‌ೂ ಅನ್ವಯಿಸಬಹುದು. ದರ್ಶನ್‌ ಹಾಗೂ ಯಶ್‌ ಇಬ್ಬರೂ ನನ್ನ ಮನೆಯ ಮಕ್ಕಳು. ದರ್ಶನ್‌ ನನ್ನ ದೊಡ್ಡ ಮಗ ಇದ್ದಂತೆ. ಯಾರು ಏನೇ ಹೇಳಿದರೂ ದರ್ಶನ್‌ ನನ್ನ ಜೊತೆ ಇರುತ್ತಾರೆ.

ಕಾಂಗ್ರೆಸ್‌ ನಾಯಕರು ನನಗೆ ಟಿಕೆಟ್‌ ನೀಡದಿದ್ದರೂ ಸ್ಥಳೀಯವಾಗಿ ಕಾಂಗ್ರೆಸ್‌ ಕಾರ್ಯಕರ್ತರು ನಮಗೆ ಬೆಂಬಲ ನೀಡುತ್ತಿದ್ದಾರೆ. ನನ್ನ ಹಿಂದೆ ಯಾವ ಪಕ್ಷವೂ ಇಲ್ಲ, ಅಧಿಕಾರವೂ ಇಲ್ಲ. ಜನರ ಬೆಂಬಲ ಇಟ್ಟುಕೊಂಡು ಮುಂದೆ ಹೋಗುತ್ತೇನೆ. ಬಿಜೆಪಿಯಿಂದ ಆಫ‌ರ್‌ ಬಂದಿಲ್ಲ. ಬಂದರೆ ಜನರನ್ನು ಕೇಳಿ ನಿರ್ಧಾರ ಮಾಡುವೆ

 ನಾನು ಅಂಬರೀಶ್‌ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇನೆ. ಅಂಬರೀಶ್‌ಅಧಿಕಾರದಲ್ಲಿದ್ದ  ಸಮಯದಲ್ಲಿ ಭ್ರಷ್ಟಾಚಾರ ಮಾಡಲಿಲ್ಲ. ಒಂದು ರೂ.ಲಂಚ ತಿಂದಿಲ್ಲ. ಪ್ರತಿಯೊಬ್ಬರಿಗೂ ಸಹಾಯ ಮಾಡಿದ ಕೈ ಅದು. ಅಂಬರೀಶ್‌ ಹೆಸರೇಳಿ ರಾಜಕಾರಣದಲ್ಲಿ ಯಾರ್ಯಾರು ಏನೇನಾಗಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತು. ಆ ವಿಚಾರ ಇಲ್ಲಿ ಮಾತನಾಡಲ್ಲ. ಮಾತನಾಡದೆ ಸುಮ್ಮನಿರೋದು ನನ್ನ ಸಂಸ್ಕಾರ.
 

Advertisement

Udayavani is now on Telegram. Click here to join our channel and stay updated with the latest news.

Next