Advertisement

ಸುಳ್ಯ: ಮೊಸರು ಕುಡಿಕೆ, ವೈಭವದ ಶೋಭಾಯಾತ್ರೆ

06:55 AM Aug 22, 2017 | Team Udayavani |

ಸುಳ್ಯ : ಇಲ್ಲಿನ ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ  ಮತ್ತು  ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ಸುಳ್ಯ ಮೊಸರು ಕುಡಿಕೆ ಉತ್ಸವ  ಮತ್ತು  ಶೋಭಾಯಾತ್ರೆ ಸೋಮವಾರ ಸುಳ್ಯ ನಗರದಲ್ಲಿ  ನಡೆಯಿತು.

Advertisement

ಸ್ಪರ್ಧೆಯಿಂದ ಜೀವನೋತ್ಸಹ
ಶೋಭಾಯಾತ್ರೆಯನ್ನು ನಗರದ ಶ್ರೀ ಚೆನ್ನಕೇಶವ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಡಾ| ಹರಪ್ರಸಾದ್‌ ತುದಿ ಯಡ್ಕ ಅವರು ಉದ್ಘಾಟಿಸಿ, ಹಬ್ಬ ಹರಿದಿನ ಆಚರಣೆ ಈ ಸಂದರ್ಭ ನಡೆಯುವ ಆಟೋಟ ಸ್ಪರ್ಧೆಗಳು ಜೀವನೋತ್ಸಾಹ ಹೆಚ್ಚಿಸುತ್ತದೆ. ಯುವ ಕರು ಸಾಹಸ ಪ್ರವೃತ್ತಿಯನ್ನು ಬೆಳೆಸಿಕೊಳ್ಳಿ ಎಂದು ಹೇಳಿದರು.

ವಿಶ್ವ ಹಿಂದೂ ಪರಿಷತ್‌ ಸುಳ್ಯ ಪ್ರಖಂಡದ ಅಧ್ಯಕ್ಷ ಗಣಪತಿ ಭಟ್‌ ಮಜಿಗುಂಡಿ, ಬಜರಂಗ ದಳದ ಸಂಯೋಜಕ ರಾಜೇಶ್‌ ರೈ ಉಬರಡ್ಕ, ಉತ್ಸವ ಸಮಿತಿಯ ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ಸಂಚಾಲಕ ರಾಜೇಶ್‌ ಭಟ್‌, ಪ್ರಧಾನ ಕಾರ್ಯದರ್ಶಿ ದಿನೇಶ್‌ ಬೈತಡ್ಕ, ಕೋಶಾಧಿಕಾರಿ ಪಿ.ಜಿ. ಜಯರಾಮ, ಆಚರಣೆ ಸಮಿತಿ ಅಧ್ಯಕ್ಷ ಅಜಿತ್‌ ಪೇರಾಲು, ಕಾರ್ಯದರ್ಶಿ ಪ್ರಕಾಶ್‌ ಯಾದವ, ಖಜಾಂಚಿ ಮಧು ಸೂದನ ಪ್ರಜ್ಯೋತಿ, ನ.ಪಂ. ಸದಸ್ಯ ಗಿರೀಶ್‌ ಕಲ್ಲುಗದ್ದೆ, ರಾಜೇಶ್‌ ಮೇನಾಲ, ಗಿರೀಶ ಕುಂಟಿನಿ, ರಂಜಿತ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಶೋಭಾಯಾತ್ರೆಯ ಪಥ
ಶ್ರೀಕೃಷ್ಣನ ಸುಂದರ ರಥದೊಂದಿಗೆ ವೀರಯುವಕರ ಸಾಹಸಮಯ ಅಟ್ಟಿ ಮಡಕೆ ಒಡೆಯುವುದು,  ಎ.ಪಿ.ಎಂ.ಸಿ., ಕುರುಂಜಿಭಾಗ್‌, ವಿವೇಕಾನಂದ ಸರ್ಕಲ್‌, ಜೂನಿಯರ್‌ ಕಾಲೇಜು ರಸ್ತೆ, ರಾಮ ಭಜನ ಮಂದಿರ, ಜ್ಯೋತಿ ಸರ್ಕಲ್‌, ವೆಂಕಟ್ರಮಣ ಟವರ್‌ ಬಳಿ,  ಹಳೆಗೇಟು, ಓಡಬಾಯಿ, ಜಟ್ಟಿಪಳ್ಳ, ಶ್ರೀಹರಿ ಕಾಂಪ್ಲೆಕ್ಸ್‌, ದ್ವಾರಕಾ ಹೊಟೇಲ್‌ ಬಳಿ,  ಹಳೆ ಬಸ್‌ ಸ್ಟಾ éಂಡ್‌,  ಶ್ರೀ ಮಿತ್ತೂರುಕಟ್ಟೆ ಗಾಂಧಿನಗರ, ರಥಬೀದಿ, ಶ್ರೀ ಚೆನ್ನಕೇಶವ ದೇವಸ್ಥಾನದ ಎದುರು ಸಮಾಪನ ಗೊಂಡಿತು. ಬಳಿಕ ಧಾರ್ಮಿಕ  ಉಪನ್ಯಾಸ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next