Advertisement

ಸುಲ್ತಾನ್‌ ಅಜ್ಲಾನ್‌ ಶಾ: ಇಂದು ಭಾರತಕ್ಕೆ  ಮಲೇಷ್ಯಾ ಸವಾಲು

12:51 PM May 05, 2017 | |

ಇಪೋ(ಮಲೇಷ್ಯಾ): ಹಾಲಿ ರನ್ನರ್‌ ಅಪ್‌ ಭಾರತ ತಂಡ ಅಜ್ಲಾನ್‌ ಶಾ ಹಾಕಿ ಟೂರ್ನಿಯಲ್ಲಿ ಶುಕ್ರವಾರ ಆತಿಥೇಯ ಮಲೇಷ್ಯಾ ತಂಡವನ್ನು ಎದುರಿಸಲಿದೆ. ಭಾರತಕ್ಕೆ ಇದು ಲೀಗ್‌ನ ಕೊನೆಯ ಪಂದ್ಯವಾಗಿದ್ದು, ಫೈನಲ್‌ ಪ್ರವೇಶಕ್ಕೆ ಮಹತ್ವದ ಪಂದ್ಯವಾಗಿದೆ. ಕೂಟದಲ್ಲಿ ಭಾರತ, ನ್ಯೂಜಿಲೆಂಡ್‌, ಬ್ರಿಟನ್‌ ತಲಾ 7 ಅಂಕವನ್ನು ಸಂಪಾದಿಸಿವೆ. ಆದರೆ ಹೆಚ್ಚಿನ ಗೋಲು ದಾಖಲಿಸಿರುವ ಆಧಾರದ ಮೇಲೆ ಭಾರತ 2ನೇ ಸ್ಥಾನದಲ್ಲಿದ್ದರೆ, ಬ್ರಿಟನ್‌ ಮತ್ತು ನ್ಯೂಜಿಲೆಂಡ್‌ ಕ್ರಮವಾಗಿ 3 ಮತ್ತು 4ನೇ ಸ್ಥಾನದಲ್ಲಿವೆ. 10 ಅಂಕ ಸಂಪಾದಿಸಿರುವ ಆಸ್ಟ್ರೇಲಿಯಾ ಅಗ್ರ ಸ್ಥಾನದಲ್ಲಿದೆ.

Advertisement

ಶುಕ್ರವಾರದ ಪಂದ್ಯದಲ್ಲಿ ಭಾರತ ಮಲೇಷ್ಯಾವನ್ನು ಎದುರಿಸಲಿದ್ದರೆ, ಬ್ರಿಟನ್‌ ಮತ್ತು ನ್ಯೂಜಿಲೆಂಡ್‌ ಮುಖಾಮುಖೀಯಾಗಲಿವೆ. ಹೀಗಾಗಿ ಭಾರತ ಗೆಲುವು ಸಾಧಿಸಬೇಕಾಗಿದೆ. ಗೋಲುಗಳ ಸಂಖ್ಯೆಯಲ್ಲಿ ಭಾರತ ಬ್ರಿಟನ್‌ ಮತ್ತು ನ್ಯೂಜಿಲೆಂಡ್‌ಗಿಂತ ಹೆಚ್ಚಿಗೆ ಇರುವುದರಿಂದ ಫೈನಲ್‌ ಪ್ರವೇಶಿಸಲು ಸದ್ಯದ ಮಟ್ಟಿಗೆ ಹಾದಿ ಸುಗಮವಿದೆ. ಕೂಟದಲ್ಲಿ ಭಾರತ ಇದಕ್ಕೂ ಮುನ್ನ ಬ್ರಿಟನ್‌ ವಿರುದ್ಧ 2-2ರಿಂದ ಡ್ರಾ ಸಾಧಿಸಿದೆ.

ನ್ಯೂಜಿಲೆಂಡ್‌ ವಿರುದ್ಧ 3-0ಯಿಂದ ಜಯ, ಜಪಾನ್‌ ವಿರುದ್ಧ 4-3ರಿಂದ ಜಯ ಸಾಧಿಸಿದೆ. ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ 3-1ರಿಂದ ಸೋಲುಂಡಿದೆ

Advertisement

Udayavani is now on Telegram. Click here to join our channel and stay updated with the latest news.

Next