Advertisement
ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಪರ ರಮಣ್‌ದೀಪ್ ಸಿಂಗ್ (10ನೇ ನಿ.), ಅಮಿತ್ ರೋಹಿದಾಸ್ (26ನೇ) ತಲಾ ಒಂದು ಗೋಲು ಸಿಡಿಸಿದರು. ಅಯರ್‌ಲ್ಯಾಂಡ್ ಪರ ಶಾನೆ ಒಡೊನೊಗೆ (24ನೇ), ಸೀನ್ ಮರ್ರೆ (36ನೇ), ಕೂಲೆ (42ನೇ) ತಲಾ ಒಂದು ಗೋಲು ದಾಖಲಿಸಿದರು.
ಮೊದಲ ಅವಧಿಯಲ್ಲಿ ಮುನ್ನಡೆ ಸಾಧಿಸಿದ್ದ ಭಾರತಕ್ಕೆ 2ನೇ ಅವಧಿಯಲ್ಲಿ ಅಯರ್‌ಲ್ಯಾಂಡ್ ತಿರುಗೇಟು ನೀಡಿತು. 36 ಮತ್ತು 42ನೇ ನಿಮಿಷದಲ್ಲಿ ಅಯರ್‌ಲ್ಯಾಂಡ್ ಆಟಗಾರರು ಗೋಲು ದಾಖಲಿಸಿದರು. ಆದರೆ 2ನೇ ಅವಧಿಯಲ್ಲಿ ಭಾರತಕ್ಕೆ ಒಂದು ಗೋಲು ಸಿಡಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಭಾರತಕ್ಕೆ ಸೋಲು ಎದುರಾಯಿತು.
Related Articles
ಭಾರತ ಕೂಟದಲ್ಲಿ 5 ಪಂದ್ಯವನ್ನು ಆಡಿದೆ. ಅದರಲ್ಲಿ ಮಲೇಶ್ಯ ವಿರುದ್ಧ ಮಾತ್ರ 5-1 ರಿಂದ ಗೆಲುವು ಸಾಧಿಸಿದೆ. ಇದು ಭಾರತಕ್ಕೆ ಕೂಟದಲ್ಲಿ ಸಿಕ್ಕ ಏಕೈಕ ಗೆಲುವಾಗಿದೆ. ಉಳಿದಂತೆ ಇಂಗ್ಲೆಂಡ್ ವಿರುದ್ಧ 1-1 ಗೋಲುಗಳಿಂದ ಡ್ರಾ ಸಾಧಿಸಿದೆ.
Advertisement
ಇಂದು 5ನೇ ಸ್ಥಾನಕ್ಕೆ ಹೋರಾಟಶನಿವಾರ ಕೂಟದಲ್ಲಿನ 5ನೇ ಸ್ಥಾನಕ್ಕಾಗಿ ಭಾರತ ಮತ್ತು ಅಯರ್‌ಲ್ಯಾಂಡ್ ತಂಡಗಳು ಮುಖಾ ಮುಖೀಯಾಗಲಿವೆ. ಲೀಗ್ ಹಂತದಲ್ಲಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಭಾರತಕ್ಕೆ ಒಂದೇ ದಿನದಲ್ಲಿ ಸಿಕ್ಕಿದೆ.