Advertisement

Sullia; ಕೇಬಲ್‌ ಕಳವು; ನೆಟ್‌ವರ್ಕ್‌ನಲ್ಲಿ ವ್ಯತ್ಯಯ

05:52 PM Aug 25, 2023 | Team Udayavani |

ಸುಳ್ಯ: ಒಎಫ್ ಸಿ ಕೇಬಲ್‌ ಕಳ್ಳತನವಾದ ಹಿನ್ನಲೆಯಲ್ಲಿ ಬಿಎಸ್‌ಎಲ್‌ ನೆಟ್‌ವರ್ಕ್‌ನಲ್ಲಿ ವ್ಯತ್ಯಯ ಉಂಟಾದ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ನಡೆದಿದೆ.

Advertisement

ಹರಿಹರ ಪಲ್ಲತಡ್ಕ ಪಾಲ್ತಾಡು ಎಂಬಲ್ಲಿ ಗುವಾರ ಒ.ಎಫ್.ಸಿ ಕೇಬಲ್‌ನ ಕಳವು ನಡೆಸಲಾಗಿದೆ ಎನ್ನಲಾಗಿದ್ದು, ಪರಿಣಾಮ ಗಂಟೆಗಟ್ಟಲೆ ಬಿ.ಎಸ್‌.ಎನ್‌.ಎಲ್‌ ನೆಟ್‌ವರ್ಕ್‌ ಸ್ಥಗಿತಗೊಂಡಿತ್ತು. ಸುಮಾರು 20 ಮೀ ಕೇಬಲ್‌ನ್ನು ವರ್ಷದ ಹಿಂದೆ ರಸ್ತೆ ದುರಸ್ತಿ ಸಂದರ್ಭ ಕೇಬಲ್‌ ಕಣಿಯಿಂದ ತೆಗೆದು ರಸ್ತೆ ಮೇಲೆ ಬಿಡಲಾಗಿತ್ತು. ಅದನ್ನು ಯಾರೋ ತುಂಡರಿಸಿ ಕದ್ದೊಯ್ದಿದ್ದಾರೆ. ಈ ಹಿನ್ನಲೆಯಲ್ಲಿ ಹರಿಹರದ ಸುಮಾರು 350 ಆಧಿಕ ಗ್ರಾಹಕರು ನೆಟ್‌ವರ್ಕ್‌ ಕಳೆದುಕೊಂಡಿದ್ದರು.

ತಿಳಿದ ಒ.ಎಫ್.ಸಿ ವಿಭಾಗದ ಜೂನಿಯರ್‌ ಅಫೀಸರ್‌ ಹೇಮಂತ್‌, ಟೆಕ್ನಿಶಿಯನ್‌ ಅಶೋಕ್‌, ವಿನಯ್‌ ದುರಸ್ತಿ ಮಾಡಿ ನೆಟ್‌ವರ್ಕ ಸಮಸ್ಯೆ ಸರಿಪಡಿಸಿದರು. ಜಯಪ್ರಕಾಶ್‌ ಕಜ್ಜೋಡಿ ಸಹಕರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next