ರಬಕವಿ-ಬನಹಟ್ಟಿ: ಕೆಎಚ್‌ಡಿಸಿ ನಿಗಮದ ನೇಕಾರರಿಗೆ ನಿರಂತರ ಉದ್ಯೋಗ ನೀಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಅಗಸ್ಟ್ ಕೊನೆಯವರೆಗೆ ಕಚ್ಚಾ ನೂಲಿನ ಪೂರೈಕೆ ಮಾಡಲಾಗಿದೆ. ಇನ್ನೂ ಮುಂದಿನ ಆರು ತಿಂಗಳ ಕಾಲಾವಾ ಯವರಿಗೆ ಕಚ್ಚಾ ನೂಲು ಖರೀದಿಗೂ ಟೆಂಡರ್ ಕರೆಯಲಾಗಿದೆ ಎಂದು ಕೆಎಚ್‌ಡಿಸಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ನೇಗಿ ಹೇಳಿದರು.
Advertisement
ನಗರದ ಕೆಎಚ್‌ಡಿ ಸಿ ನಿಗಮಕ್ಕೆ ಭೇಟಿ ನೀಡಿ ನೇಕಾರ ಮುಖಂಡರೊಂದಿಗೆ ನಿಗಮದ ಸಮಸ್ಯೆಗಳ ಕುರಿತು ಚರ್ಚಿಸಿ ಅವರುಮಾತನಾಡಿದರು.
ಬದ್ಧವಾಗಿದೆ ಎಂದು ನೇಗಿ ತಿಳಿಸಿದರು. ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ಅಧ್ಯಕ್ಷ ಶಿವಲಿಂಗ ಟಿರಕಿ ಮಾತನಾಡಿ, ಇಲ್ಲಿಯ ಕಾರ್ಮಿಕರು ತಮ್ಮ ಅಳಿವು ಮತ್ತು ಉಳಿವೆಗಾಗಿ ಹಲವಾರು ಹೋರಾಟಗಳನ್ನು ಮಾಡಿದರೂ ಯಾವುದೆ ಪ್ರಯೋಜನವಾಗಿಲ್ಲ. ಇಲ್ಲಿಯ ನೇಕಾರರು ವಾಸ ಮಾಡಲು ಆರಂಭಿಸಿ 37 ವರ್ಷಗಳು ಆದರೂ ಇದುವರೆಗೆ ಅವರಿಗೆ ಹಕ್ಕು ಪತ್ರ ದೊರೆತಿಲ್ಲ. ಇದರಿಂದಾಗಿ ಅವರಿಗೆ ಬಹಳಷ್ಟು ಸಮಸ್ಯೆಯಾಗಿದೆ.
Related Articles
Advertisement
ಮತ್ತೋರ್ವ ನೇಕಾರ ಮುಖಂಡ ಸದಾಶಿವ ಗೊಂದಕರ್ ಮಾತನಾಡಿದರು. ನಿಗಮದ ಅ ಧಿಕಾರಿ ವಿಜಯಕುಮಾರಚಲವಾದಿ, ಬಸಪ್ಪ ಅಮಟಿ, ವಸಂತ ಪೋರೆ, ಶಂಕರ ಬಾಡಗಿ, ಶ್ರೀಶೈಲ ಮುಗಳೊಳ್ಳಿ, ಮಲ್ಲಿಕ್ ಜಮಾದರ, ಮಲ್ಲಿಕಾರ್ಜುನ ಜೋತಾವರ ಹಾಜರಿದ್ದರು.