Advertisement
ಜಯ ಕರ್ನಾಟಕ ಸಂಘಟನೆಯ ಗ್ರಾಮ ಘಟಕದ ಅಧ್ಯಕ್ಷ ಆರ್ ಪ್ರಕಾಶ್ ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, ಜೆಸ್ಕಾಂ ಇಲಾಖೆಯ ಸೆಕ್ಷನ್ ಆಫೀಸರ್ ಗೆ ಸೇರಿದಂತೆ ಕಚೇರಿಯಲ್ಲಿ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಯಾವುದೇ ಪ್ರಯೋಜನವಾಗಿಲ್ಲ. ಶೀಘ್ರ ಸಮಸ್ಯೆಯನ್ನು ಬಗೆಹರಿಸಲು ತಿಳಿಸಿದರೆ ಇಲ್ಲಿನ ಸೆಕ್ಷನ್ ಆಫೀಸರ್ ಯಮುನಪ್ಪ ಇವರು ನಮ್ಮ ಬಳಿ ಮಾತನಾಡಿ ಜಸ್ಕಾಂ ಇಲಾಖೆ ಬಡತನದಲ್ಲಿದೆ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ದುರಸ್ಥಿ ಕಾರ್ಯ ಮಾಡಲಾಗುವುದಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ.ಸಾರ್ವಜನಿಕರ ಅಧಿಕಾರಿಗಳು ಇಂತಹ ಉತ್ತರದಿಂದ ಬೇಸರವಾಗಿದೆ ವಿದ್ಯುತ್ ಕಂಬಗಳಲ್ಲಿ 11 ಕೆ ವಿ ಇರುತ್ತದೆ ನಾಲ್ಕರಿಂದ ಐದು ವಿದ್ಯುತ್ ತಂತಿಗಳಿರುವ ಸುಮಾರು ಹನ್ನೊಂದು ಸಾವಿರ ವೋಲ್ಟೇಜ್ ವಿದ್ಯುತ್ ಹರಿಯುತ್ತಿರುವುದು ಕಾಣಬಹುದು, ಮುಂದಾಗುವ ದುಷ್ಪರಿಣಾಮಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ.ಮಳೆಗಾಲವಿದೆ ಅಲ್ಲಲ್ಲಿ ಕಂಬಗಳು ಬಾಗಿವೆ ಜೊತೆಗೆ ಟಿಸಿಗಳ ಸ್ವಚ್ಛತೆ ಇಲ್ಲದಿರುವುದು ಕಾಣಬಹುದಾಗಿದೆ. ವಿದ್ಯುತ್ ಪರಿವರ್ತಕಗಳಿಗೆ ಗಿಡಗಂಟೆಗಳು ಮುತ್ತಿಕ್ಕಿವೆ ನಿರ್ವಹಣೆಯನ್ನು ಸರಿಯಾಗಿ ಮಾಡಿ ಎಂದು ಮನವಿ ಮಾಡಿದ್ದೇವೆ ಕೂಡಲೇ ಅಧಿಕಾರಿಗಳು ಶೀಘ್ರ ದುರಸ್ಥಿ ಮಾಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.