Advertisement

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

05:40 AM Nov 01, 2024 | Team Udayavani |

ಗದಗ: ರಾಜ್ಯಾದ್ಯಂತ ರೈತರ ಪಹಣಿಯಲ್ಲಿ “ವಕ್ಫ್ ಆಸ್ತಿ’ ಸಂಚಲನ ಮೂಡಿಸಿದ ಬೆನ್ನಲ್ಲೇ ಗದಗ ಜಿಲ್ಲೆ ರೈತರು 5 ವರ್ಷಗಳ ಹಿಂದೆಯೇ ವಕ್ಫ್ ವಿರುದ್ಧ ಕಾನೂನು ಸಮರ ಸಾರಿ ಗೆಲುವು ಸಾಧಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಕಂದಾಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದ 689 ಆಸ್ತಿಗಳ ಪೈಕಿ 2019ರ ಮಾ. 21ರಂದು ಅಂದಿನ ಜಿಲ್ಲಾಧಿಕಾರಿ ಮಾಡಿದ ಆದೇಶದನ್ವಯ ಜಿಲ್ಲೆಯ ವಿವಿಧ ತಾಲೂಕು ವ್ಯಾಪ್ತಿಯಲ್ಲಿನ 566 ಆಸ್ತಿಗಳ ಖಾತಾ ಬದಲಾವಣೆಯಾಗಿ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ದಾಖಲಾಗಿತ್ತು. ಇದನ್ನು ಗಮನಿಸಿದ ರೈತರು ಅಧಿಕಾರಿಗಳ ಜತೆ ಚರ್ಚೆ, ವಾಗ್ವಾದ ನಡೆಸಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿರಲಿಲ್ಲ. ಜಿಲ್ಲಾಡಳಿತದ ನಿರ್ಧಾರ ಪ್ರಶ್ನಿಸಿ ಜಿಲ್ಲೆಯ ವಿವಿಧ ರೈತರು ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿ ತಮ್ಮ ಆಸ್ತಿಯನ್ನು ವಕ್ಫ್ ಇಲಾಖೆ ಯಾವುದೇ ಮುನ್ಸೂಚನೆ ಇಲ್ಲದೆ ಕಬಳಿಸಿದೆ ಎಂದು ವಾದ ಮಾಡಿದ್ದರು.

ನ್ಯಾಯಾಲಯ ರೈತರ ಪರ ತೀರ್ಪು ನೀಡಿತ್ತು. ಹೀಗಾಗಿ ಗದಗನ 101, ಮುಂಡರಗಿಯ 5, ನರಗುಂದದ 121, ರೋಣದ 44, ಗಜೇಂದ್ರಗಡದ 24, ಶಿರಹಟ್ಟಿಯ 11 ಹಾಗೂ ಲಕ್ಷ್ಮೇ ಶ್ವರ ತಾಲೂಕಿನ 9 ಸೇರಿದಂತೆ ಒಟ್ಟು 315 ರೈತರಿಗೆ ತಮ್ಮ ಭೂಮಿ ವಾಪಸ್‌ ಬಂದಿತ್ತು. ಆದರೆ ಇನ್ನುಳಿದ 123 ಜನ ರೈತರ ಆಸ್ತಿಗಳ ಕಾಲಂ ನಂ.11ರಲ್ಲಿ ಇಂದಿಗೂ ವಕ್ಫ್ ಆಸ್ತಿ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next