Advertisement
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ರಂಗಧಾಮಯ್ಯ (37) ಮೃತ ಆರೋಪಿ. ಲಕ್ಷ್ಮೀ ಹಾಗೂ ಆರೋಪಿ ನಡುವೆ ಅಕ್ರಮ ಸಂಬಂಧವಿದ್ದು, ಅದೇ ಕಾರಣಕ್ಕೆ ಕೃತ್ಯ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಶಿವರಾಜ್ ಮತ್ತು ಲಕ್ಷ್ಮೀ ದಂಪತಿ ಪುತ್ರಿ ಚೈತ್ರಾ ಮತ್ತು ಪುತ್ರನ ಜತೆ ಹೆಗ್ಗನಹಳ್ಳಿಯ ಎಂಟನೇ ಕ್ರಾಸ್‌ನಲ್ಲಿ ವಾಸವಾಗಿದ್ದು, ಎರಡು ಅಂತಸ್ತಿನ ಸ್ವಂತ ಕಟ್ಟಡ ಹೊಂದಿದ್ದಾರೆ. ಪುತ್ರ ಹಾಸ್ಟೆಲ್‌ನಲ್ಲಿ ಓದುತ್ತಿದ್ದಾನೆ. ಪುತ್ರಿ ಖಾಸಗಿ ಕಾಲೇಜಿನಲ್ಲಿ ಪಿಯು ಮಾಡುತ್ತಿದ್ದಾಳೆ.
Related Articles
Advertisement
ಆಕೆಯ ಚೀರಾಟ ಕೇಳಿದ ಪತಿ ಶಿವರಾಜ್ ಮತ್ತು ಪುತ್ರಿ ಚೈತ್ರಾ ಕೊಣೆಯಿಂದ ಹೊರಬಂದು ಆರೋಪಿಯನ್ನು ತಡೆಯಲು ಯತ್ನಿಸಿದ್ದಾರೆ. ಆಗ ಚೈತ್ರಾಳ ತಲೆಗೆ ಹೊಡೆದು, ಗೋಡೆಗೆ ಗುದ್ದಿದ್ದಾನೆ. ಆಕೆಯೂ ಪ್ರಜ್ಞೆ ತಪ್ಪಿದ್ದಾಳೆ. ಇನ್ನು ಶಿವರಾಜ್ ಅವರ ಕುತ್ತಿಗೆಗೆ 2-3 ಬಾರಿ ಚಾಕುವಿನಿಂದ ಇರಿದು ಹತ್ಯೆಗೈಯಲು ಯತ್ನಿಸಿ, ಅವರು ಕೆಳಗೆ ಬಿದ್ದರಿಂದ ಸ್ಥಳದಿಂದ ಆತ ಪರಾರಿಯಾಗಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಹೇಳಿದರು.
ಸಹೋದ್ಯೋಗಿಯಿಂದ ಘಟನೆ ಬೆಳಕಿಗೆ: ಬೆಳಗ್ಗೆ ಸಹೋದ್ಯೋಗಿಯೊಬ್ಬರು ಲಕ್ಷ್ಮೀಗೆ ಹತ್ತಾರು ಬಾರಿ ಕರೆ ಮಾಡಿದ್ದಾರೆ. ಪ್ರತಿಕ್ರಿಯೆ ನೀಡದೇ ಇದ್ದ ಕಾರಣ ನೇರವಾಗಿ 11 ಗಂಟೆ ಸುಮಾರಿಗೆ ಮನೆ ಬಳಿ ಬಂದು ನೋಡಿದಾಗ ಲಕ್ಷ್ಮೀ, ಶಿವರಾಜ್ ಮತ್ತು ದಂಪತಿ ಪುತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅದರಿಂದ ಗಾಬರಿಗೊಂಡು ಜೋರಾಗಿ ಕೂಗಿಕೊಂಡಿದ್ದಾರೆ. ಬಳಿಕ 11.15ರ ಸುಮಾರಿಗೆ ಸ್ಥಳೀಯರು ಪೊಲೀಸ್ ಸಹಾಯವಾಣಿಗೆ ಮಾಹಿತಿ ನೀಡಿದ್ದಾರೆ.
ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಶಿವರಾಜ್ ಮತ್ತು ಪುತ್ರಿ ಚೈತ್ರಾರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಇಬ್ಬರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು. ವಿಷಯ ತಿಳಿಯುತ್ತಿದ್ದಂತೆ ಉತ್ತರ ವಿಭಾಗ ಡಿಸಿಪಿ ಎನ್.ಶಶಿಕುಮಾರ್, ಎಸಿಪಿ ವಿ.ಧನಂಜಯ್ ಭೇಟಿ ನೀಡಿ ಮಾಹಿತಿ ಸಂಗ್ರಹಸಿದರು.
ಪತಿ, ಪುತ್ರಿಯಿಂದ ಬುದ್ಧಿವಾದ: ರಂಗಧಾಮಯ್ಯ ಮತ್ತು ಪತ್ನಿ ನಡುವಿನ ಅಕ್ರಮ ಸಂಬಂಧ ಮಾಹಿತಿ ತಿಳಿದ ಪತಿ ಶಿವರಾಜ್ ಮತ್ತು ಪುತ್ರಿ ಚೈತ್ರಾ, ಲಕ್ಷ್ಮೀಗೆ ಬುದ್ಧಿವಾದ ಹೇಳಿದ್ದಾರೆ. ಆತನಿಂದ ದೂರ ಇರುವಂತೆ ಮನವಿ ಮಾಡಿದ್ದಾರೆ. ಆದರೆ, ಅದರಿಂದ ಲಕ್ಷ್ಮೀ ಬೇಸರಗೊಂಡಿದ್ದರು.
ಲಕ್ಷ್ಮೀ ಅವರು ರಂಗಧಾಮಯ್ಯನಿಗೆ ಪತಿ ಮತ್ತು ಪುತ್ರಿಯ ಬುದ್ಧಿವಾದದ ಬಗ್ಗೆ ಹೇಳಿರುವ ಸಾಧ್ಯತೆಯಿದೆ. ಅಲ್ಲದೆ, ಫೆ.10ರಂದು ತಡರಾತ್ರಿ 12 ಗಂಟೆಗೆ ಲಕ್ಷ್ಮೀ ಮನೆಗೆ ಬಂದಿದ್ದ ರಂಗಧಾಮಯ್ಯ ಮುಂಜಾನೆ ನಾಲ್ಕು ಗಂಟೆವರೆಗೆ ಅಲ್ಲಿಯೇ ಕಾಲ ಕಳೆದಿದ್ದಾನೆ. ಬಳಿಕ ತಮ್ಮ ಮನೆಗೆ ಹೋಗಿ ಆರೂವರೆ ವೇಳೆಗೆ ಮತ್ತೆ ಮನೆಗೆ ಬಂದು ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.