Advertisement

Food: ಆಹಾರ ಪ್ಯಾಕ್‌ಗಳಲ್ಲಿ QR ಕೋಡ್‌ ಮುದ್ರಿಸಲು ಸಲಹೆ

08:38 PM Oct 24, 2023 | Team Udayavani |

ನವದೆಹಲಿ: ಆಹಾರ ಉತ್ಪನ್ನಗಳಲ್ಲಿ ದೃಷ್ಟಿ ವಿಕಲ ಚೇತನರ ಅನುಕೂಲಕ್ಕಾಗಿ ವಿಶೇಷ ರೀತಿಯ ಕ್ಯೂಆರ್‌ ಕೋಡ್‌ ಅಳವಡಿಸಬೇಕು ಎಂದು ಆಹಾರ ಕ್ಷೇತ್ರದ ಸಂಸ್ಥೆಗಳಿಗೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ಎಸ್‌ಎಸ್‌ಎಐ) ಸಲಹೆ ನೀಡಿದೆ.

Advertisement

ಎಲ್ಲರಿಗೂ ಸುರಕ್ಷಿತ ಆಹಾರ ನೀಡುವ ನಿಟ್ಟಿನಲ್ಲಿ ಇದು ಅನುಕೂಲವಾಗಲಿದೆ ಎಂದು ಪ್ರಾಧಿಕಾರ ಅಭಿಪ್ರಾಯಪಟ್ಟಿದೆ. ಆಹಾರದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳುವುದು ಪ್ರತಿಯೊಬ್ಬ ಗ್ರಾಹಕನ ಹಕ್ಕು ಎಂದು ಪ್ರತಿಪಾದಿಸಿರುವ ಪ್ರಾಧಿಕಾರದ ವಿಜ್ಞಾನ ಮತ್ತು ಗುಣಮಟ್ಟ ವಿಭಾಗದ ನಿರ್ದೇಶಕರು ಕ್ಯೂಆರ್‌ ಕೋಡ್‌ ಅಳವಡಿಸುವ ಬಗ್ಗೆ ಸುತ್ತೋಲೆ ಹೊರಡಿಸಿದ್ದಾರೆ. 2020ರಲ್ಲಿ ಪ್ರಾಧಿಕಾರ ಅಂಗೀಕರಿಸಿರುವ ಆಹಾರ ನಿಯಮಗಳ ಅನ್ವಯ ಪ್ಯಾಕೆಟ್‌ಗಳಲ್ಲಿ ನಿಗದಿತ ಆಹಾರಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಉತ್ಪಾದಕರು ಮುದ್ರಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next