Advertisement

ಕರ್ತವ್ಯ ಸ್ಥಳದಲ್ಲಿ ಲೈಂಗಿಕ ಕಿರುಕುಳ ನೀಡಿದ್ರೆ ದೂರು ನೀಡಿ

05:10 PM Oct 08, 2021 | Team Udayavani |

ಕೋಲಾರ: ಮಹಿಳೆಯರು ತಾವು ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯವಾದರೆ ಭಯಪಡದಿರಿ, ಆತ್ಮಸ್ಥೈರ್ಯದಿಂದ ಎದುರಿಸಿ, ಪೊಲೀಸರಿಗೆ ಅಥವಾ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ನೀಡಿ ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶ ಎನ್‌.ಪಿ.ಅನಿತಾ ಸಲಹೆ ನೀಡಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ ಮತ್ತು ವಕೀಲರ ಸಂಘವು ತಾಲೂಕಿನ ಬೆಳ್ಳಂಬರಿ ಸಿಲ್ವರ್‌ ಕ್ರೈಸ್ಟ ಕ್ಲಾತಿಂಗ್‌ ಕಾರ್ಖಾನೆ ಉದ್ಯೋಗಸ್ಥರಿಗೆ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳ ನಡೆದರೆ ಅದರಿಂದ ಪರಿಣಾಮಗಳು ಗಂಭೀರ ಸ್ವರೂಪದ್ದು ಈ ಕಿರುಕುಳ ಮಹಿಳೆಯರ ಕಾರ್ಯಕ್ಷಮತೆ ಕುಂಠಿಗೊಳಿಸುವುದರ ಜೊತೆಗೆ ಮಾನಸಿಕ ಸಮತೋಲನ ಹದೆಗೆಡುತ್ತದೆ ಎಂದು ಹೇಳಿದರು. ವಕೀಲರ ಸಂಘದ ಅಧ್ಯಕ್ಷ ಜಿ.ಶ್ರೀಧರ್‌, ಸಂವಿಧಾನ ಮಹಿಳೆಯರಿಗೂ ಪುರುಷರಿಗೂ ಸಮಾನ ಹಕ್ಕುಗಳನ್ನು ನೀಡಿ ಮಹಿಳೆಯರಿಗೆ ಹೊಸ ದಿಕ್ಸೂಚಿಯನ್ನು ತೋರಿಸಿದೆ. ಆದರೂ, ವಿವಿಧ ಮತಗಳ ವೈಯಕ್ತಿಕ ಕಾನೂನುಗಳಲ್ಲಿ ಸ್ತ್ರೀಪುರುಷರ ಹಕ್ಕುಗಳಲ್ಲಿ ತಾರತಮ್ಯ ಉಳಿದುಕೊಂಡೇ ಬಂದಿದ್ದು, ಇದರಿಂದ ಸ್ತ್ರೀಯರು ಪುರುಷರು ಸಂವಿಧಾನಾತ್ಮಕವಾಗಿ ಸಮಾನರಾದರೂ ಕೆಲವೆಡೆ ಅಸಮಾನತೆ ಇದೆ ಎಂದು ವಿಷಾದಿಸಿದರು.

ಇದನ್ನೂ ಓದಿ;- Breaking news :ಜಾಮೀನು ಅರ್ಜಿ ವಜಾ : ಶಾರುಖ್ ಪುತ್ರನಿಗೆ ಜೈಲುವಾಸವೇ ಗತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ, ಹಿರಿಯ ಸಿವಿಲ್‌ ನ್ಯಾ.ಸಿ.ಎಚ್‌. ಗಂಗಾಧರ್‌ ಮಾತನಾಡಿ, 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಆಯೋಜಿಸಿದ್ದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯ ಜಾಗೃತಿ ಕಾರ್ಯಕ್ರಮವನ್ನು ಮಹಿಳೆಯರು ಸದುಪಯೊಗ ಪಡಿಸಿಕೊಳ್ಳಬೇಕೆಂದು ಕೋರಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಮಿಕರ ಅಧಿಕಾರಿ ಶ್ರೀಕಾಂತ್‌ ಬಿ.ಪಾಟಿಲ್‌, ಮಹಿಳಾ ಕಾರ್ಮಿಕರಿಗೆ ಸಂಬಂಧಿಸಿದಕಾನೂನುಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಹಿರಿಯ ವಕೀಲ ಕೆ.ಆರ್‌.ಧನರಾಜ್‌, ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳ ಬಗ್ಗೆ ಮತ್ತು ವಕೀಲ

ಸೋಮಶೇಖರ್‌, ಕೆಲಸದ ಸ್ಥಳದಲ್ಲಿ ಮಹಿಳೆಯರಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಬಗ್ಗೆ ಉಪನ್ಯಾಸನೀಡಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್‌.ರಘುಪತಿಗೌಡ, ಕೋಲಾರ ವೃತ್ತ ಕಾರ್ಮಿಕ ನಿರೀಕ್ಷಕಿ ರಾಜೇಶ್ವರಿ, ಸಿಲ್ವರ್‌ ಕ್ರಸ್ಟ್‌ನ ಮುಖ್ಯಸ್ಥ ಪವನ್‌ರೆಡ್ಡಿ, ತೇಜ್‌ರಾಜ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next