Advertisement

ಮಿತ್ರ ರಾಗಕ್ಕೆ ಸುದೀಪ್‌ ಸ್ವರ

11:11 AM Jan 14, 2017 | Team Udayavani |

ರಾಗ ಚಿತ್ರದ ಟ್ರೇಲರ್‌ ಈ ತಿಂಗಳ ಕೊನೆಗೆ ಬಿಡುಗಡೆಯಾಗುತ್ತಿದೆ. ಈ ಟ್ರೇಲರ್‌ಗೆ ಸುದೀಪ್‌ ಧ್ವನಿ ನೀಡಲಿದ್ದಾರೆ. ಈ ಚಿತ್ರವನ್ನು ನಿರ್ಮಿಸುವುದರ ಜೊತೆಗೆ ಮಿತ್ರ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಅಂಧರ ಪಾತ್ರ ಮಾಡಿದ್ದಾರೆ. ಅಂಧರ ಬಗ್ಗೆ ಅಭಿಮಾನವಿರುವ ಸುದೀಪ್‌, ಮಿತ್ರ ಅವರ ಪಾತ್ರದ ಬಗ್ಗೆ ಕೇಳಿದ ಕೂಡಲೇ, ಟ್ರೇಲರ್‌ಗೆ ಧ್ವನಿ ನೀಡುವುದಕ್ಕೆ ಒಪ್ಪಿಕೊಂಡಿದ್ದಾರಂತೆ. ಸದ್ಯದಲ್ಲೇ ಸುದೀಪ್‌, ಈ ಟ್ರೇಲರ್‌ಗೆ ಧ್ವನಿ ನೀಡಲಿದ್ದಾರೆ.

Advertisement

“ರಾಗ’ ಚಿತ್ರವನ್ನು ಮಿತ್ರ ಎಂಟರ್‌ಟೈನರ್‌ ಸಿನಿ ಕ್ರಿಯೇಷನ್ಸ್‌ನಡಿ ನಿರ್ಮಾಣವಾಗುತ್ತಿದ್ದು, ಪಿ.ಸಿ. ಶೇಖರ್‌ ಅವರು ಕಥೆ-ಚಿತ್ರಕಥೆ ಬರೆಯುವುದರ ಜೊತೆಗೆ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನಿತರ ತಾರಾಬಳಗದಲ್ಲಿ ಭಾಮಾ, ಅವಿನಾಶ್‌, ಜೈಜಗದೀಶ್‌, ರಮೇಶ್‌ ಭಟ್‌, ಸಿಹಿಕಹಿ ಚಂದ್ರು, ರೂಪಿಕಾ  ಇತರರು ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next