Advertisement

ಸುಧಾಕರ್‌ ದೂರದೃಷ್ಟಿವುಳ್ಳ ನಾಯಕ: ಸಚಿವ ಮುನಿರತ್ನ

04:41 PM Jan 09, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಗೊಂದು ದೊಡ್ಡ ಕೊಡುಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌. ಬಹುಶಃ ಹತ್ತು ಜನ ಮಾಡುವ ಕೆಲಸ ಅವರು ಇಷ್ಟು ಅದ್ಧೂರಿಯಾಗಿ ಮಾಡುತ್ತಿರುವುದು ನಾನು ಮೊದಲ ಬಾರಿಗೆ ನೋಡುತ್ತಿದ್ದೇನೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ನಗರದ ಹೊರವಲಯದ ಸೋಲಪ್ಪನದಿನ್ನೆಯಲ್ಲಿ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಆಯೋಜಿಸಿರುವ
ಫಲಪುಷ್ಟ ಪ್ರದರ್ಶನ ವೀಕ್ಷಿಸಿ ಮಾತನಾಡಿದ ಅವರು, ಸುಧಾಕರ್‌ ಅವರಂತಹ ಸ್ನೇಹಿತ ನಮಗೆ ಸಿಕ್ಕಿರುವುದು ಭಾಗ್ಯ ಎಂದು ಬಣ್ಣಿಸಿದರು.

ಯಾವುದೇ ಒಂದು ಕೆಲಸ ಇರಲಿ, ಬಹಳ ಶ್ರದ್ಧೆಯಿಂದ ಮಾಡುವಂತಹ ವ್ಯಕ್ತಿ. ಅದಕ್ಕೆ ಸಾಕ್ಷಿ ಇಲ್ಲಿ ನಡೆಯುತ್ತಿರುವ ಚಿಕ್ಕಬಳ್ಳಾಪುರ ಉತ್ಸವ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಮತ್ತು ಜಿಲ್ಲೆಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ನೀಡುತ್ತಿರುವ ಕೊಡುಗೆ ಬಹುಶಃ ಇದುವರೆಗೆ ಯಾವ ರಾಜಕಾರಣಿಯೂಕೊಟ್ಟಿಲ್ಲ ಎಂದು ಹಾಡಿ ಹೊಗಳಿದರು.

ಜನಪರ ಕಾಳಜಿವುಳ್ಳ ನಾಯಕ ಸುಧಾಕರ್‌:
ಅಭಿವೃದ್ಧಿಯಲ್ಲಿ ಆಗಲಿ, ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿಸಿದ್ದಾಗಲಿ, ಚಿಕ್ಕಬಳ್ಳಾಪುರ ಉತ್ಸಹದಂತಹ ಕಾರ್ಯಕ್ರಮಗಳನ್ನು ಅವರಷ್ಟೇ ಮಾಡಲು ಸಾಧ್ಯ. ಜನಸೇವೆ ಮಾಡಲು ಅವರಿಗಿರುವ ಕಾಳಜಿ ಬಹಶಃ ಬಹಳ ಕಮ್ಮಿ ಜನರಲ್ಲಿ ನೋಡಿದ್ದೇನೆ ಎಂದು ಶ್ಲಾಘಿಸಿದರು.

ಹೆಚ್ಚು ಜನರು ಬಂದು ವೀಕ್ಷಣೆ ಮಾಡಿ: ಉತ್ತಮ ಭವಿಷ್ಯ ಹೊಂದಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಅವರಿಗೆ ಒಳ್ಳೆಯದು ಆಗಲಿ. ಚಿಕ್ಕಬಳ್ಳಾಪುರದ ಎಲ್ಲಾ ಮತದಾರರಿಗೆ ಸುಧಾಕರ್‌ ಅಂತಹ ವ್ಯಕ್ತಿ ಸಿಕ್ಕಿರುವುದೇ ಭಾಗ್ಯವೆಂದು ಬಣ್ಣಿಸಿ, ಎಲ್ಲರಿಗೂ ಒಳ್ಳೆಯದು ಆಗಲಿ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಇನ್ನೂ ಹೆಚ್ಚಿನ ಜನರು ಬಂದು ವೀಕ್ಷಣೆ ಮಾಡಿ ಎಂದು ಮನವಿ ಮಾಡಿದರು.

Advertisement

ನಮ್ಮ ತೋಟಗಾರಿಕೆ ಇಲಾಖೆಗೆ 500 ವರ್ಷಗಿಂತಲೂ ಅಧಿಕ ಇತಿಹಾಸ ಇದೆ. ಇಲಾಖೆಯು ಜಿಲ್ಲೆಯ ಪವಿತ್ರ ಮತ್ತು
ಐತಿಹಾಸಿಕ ಧಾರ್ಮಿಕ ಸ್ಥಳ ನಂದಿಯ ಶ್ರೀ ಭೋಗನಂದೀಶ್ವರ ದೇವಾಲಯದ ಮಾದರಿಯನ್ನು ಪುಷ್ಪದಲ್ಲಿ ಮಾಡಿರುವುದು ಬಹಳ ಸಂತೋಷ ಉಂಟು ಮಾಡಿದೆ. ಬೇರೆ ಇಲಾಖೆಯವರು ಸಹ ಚೆನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.

ಇಂತಹ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ತಂದಂತಹ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರಿಗೆ ಅಭಿನಂದನೆ ಸಲ್ಲಿಸಿ ಅವರೊಬ್ಬರು ದೂರದೃಷ್ಟಿಯನ್ನು ಹೊಂದಿರುವ ಒಳ್ಳೆಯ ನಾಯಕ, ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ಅಡಗಿದೆ ಎಂದು ವರ್ಣಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next