Advertisement

ಹಾಲಿವುಡ್‌ಗೆ ಸುದೀಪ್‌!

11:12 AM Jul 07, 2017 | Team Udayavani |

ಬೆಂಗಳೂರು: ಕನ್ನಡವಲ್ಲದೆ ಹಿಂದಿ, ತೆಲುಗು ಮತ್ತು ತುಳು  ಚಿತ್ರಗಳಲ್ಲಿ ನಟಿಸಿದ್ದ ಸುದೀಪ್‌, ಇದೀಗ ಹಾಲಿವುಡ್‌ಗೆ ಹಾರಲಿದ್ದಾರೆ. “ರೀಸನ್‌’ ಎಂಬ ಸೈನ್ಸ್‌ ಫಿಕ್ಷನ್‌ ಚಿತ್ರದಲ್ಲಿ ಅವರು ನಟಿಸುವುದಕ್ಕೆ ಒಪ್ಪಿಕೊಂಡಿದ್ದು, ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಚಿತ್ರೀಕರಣದಲ್ಲಿಭಾಗವಸಲಿದ್ದಾರೆ.

Advertisement

“ರೀಸನ್‌’ ಚಿತ್ರವನ್ನು ಎಡ್ಡಿ ಎನ್ನುವವರು ನಿರ್ದೇಶಿಸಲಿದ್ದಾರೆ. ಇದಕ್ಕೂ ಮುನ್ನ ಸಾಕಷ್ಟು ಚಿತ್ರಗಳಿಗೆ ಕೆಲಸ ಮಾಡಿರುವ ಎಡ್ಡಿ, ಸುದೀಪ್‌ ಅವರೊಂದಿಗೆ ಚಿತ್ರ ಮಾಡಬೇಕೆಂದು ಸುಮಾರು ಒಂದೂವರೆ ತಿಂಗಳಿನಿಂದ ಸಂಪರ್ಕದಲ್ಲಿದ್ದರು. ಇದೀಗ ಮಾತುಕತೆ ಫಲಿಸಿದ್ದು, ಚಿತ್ರದಲ್ಲಿ ನಟಿಸುವುದಕ್ಕೆ ಸುದೀಪ್‌ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಈ ಚಿತ್ರ ದಲ್ಲಿ ಆರ್ಮಿ ಮಾರ್ಷಲ್‌ ಆಗಿ ಸುದೀಪ್‌ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಚಿತ್ರೀಕರಣ ಮಂಜಿನ ವಾತಾವರಣದಲ್ಲೇ ನಡೆಯಲಿದೆ . ಆಸ್ಟ್ರೇಲಿಯಾ ಮತ್ತು ಅಮೆರಿಕಗಳಲ್ಲಿ ಚಿತ್ರೀಕರಲಿಸಲಾಗುತ್ತದೆ. ಅದಕ್ಕೂ ಮುನ್ನ ಸುದೀಪ್‌, “ದಿ ವಿಲನ್‌’ ಚಿತ್ರದಲ್ಲಿ ತಮ್ಮ ಭಾಗದ ಚಿತ್ರೀಕರಣ ಮುಗಿಸುವ ಸಾಧ್ಯತೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next