ಚಿತ್ರದುರ್ಗ: ಸದ್ಯ ನೂತನ ವಟು ಸ್ವೀಕರಿಸಲಾಗಿದ್ದು, ಅವರ ಶಿಕ್ಷಣದ ಜವಾಬ್ದಾರಿ ಮಠದಿಂದ ವಹಿಸಿಕೊಳ್ಳಲಾಗುತ್ತದೆ. ಆದಿಚುಂಚನಗಿರಿ ಗುರುಕುಲದಲ್ಲಿ ಅಧ್ಯಯನಕ್ಕೆ ಕಳಿಸುತ್ತೇವೆ. ನಿರ್ಮಲಾನಂದನಾಥ ಸ್ವಾಮೀಜಿ ಮಾರ್ಗದರ್ಶನ ಹಾಗೂ ಆಶೀರ್ವಾದ ನೀಡುತ್ತಾರೆ. ಉನ್ನತ ಶಿಕ್ಷಣದ ನಂತರ ಮಠಕ್ಕೆ ಉತ್ತರಾಧಿಕಾರಿ ಆಯ್ಕೆಯನ್ನು ಟ್ರಸ್ಟ್ ಹಾಗೂ ಸಮಾಜದ ಹಿರಿಯರು ನೆರವೇರಿಸಲಿದ್ದಾರೆ. ಅದು ಅವರ ಜವಾಬ್ದಾರಿ ಎಂದು ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.
Advertisement
ವಟು ಸ್ವೀಕಾರ ಸಮಾರಂಭದ ನಂತರ ಮಾತನಾಡಿದ ಶ್ರೀಗಳು, ವಿಶ್ವಗುರು ಬಸವಣ್ಣನವರ ಜಯಂತಿಯಂದು ಸರ್ವ ಸಮುದಾಯಗಳಿಗೆ ಸಮಾನತೆ, ಶೋಷಿತ ಸಮುದಾಯಗಳಿಗೆ ಧ್ವನಿ ಕೊಟ್ಟವರ ಜಯಂತಿ ಸಂದರ್ಭದಲ್ಲಿ ವಟು ಸ್ವೀಕಾರ ಮಾಡಲಾಗಿದೆ. ಮಾದಾರ ಚನ್ನಯ್ಯ ಗುರುಪೀಠದ ಎರಡು ದಶಕಗಳ ನಡಿಗೆಯಲ್ಲಿ ಇದೊಂದು ಮಹತ್ತರ ಹಾಗೂ ಸ್ಮರಣೀಯ ದಿನವಾಗಿದೆ. ಜಯಬಸವ ದೇವರು ಎನ್ನುವ ಹೆಸರಿನಲ್ಲಿ ವಟು ಸ್ವೀಕಾರ ಮಾಡಿದ್ದೇವೆ ಎಂದರು.
ಗುರುಪೀಠದ ನಂದ ಮಸಂದ ಸ್ವಾಮೀಜಿ, ಕೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಕೊರಟಗೆರೆಯ ಮಹಾಲಿಂಗ ಸ್ವಾಮೀಜಿ,
ರಾಣಿಬೆನ್ನೂರಿನ ಗಜದಂಡ ಸ್ವಾಮೀಜಿ, ಸಿದ್ಧಾರೂಢ ಆಶ್ರಮದ ಜಯದೇವ ಸ್ವಾಮೀಜಿ, ನಿರಂಜನಾನಂದ ಸ್ವಾಮೀಜಿ, ಪೂರ್ಣಾನಂದ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಸತ್ಯಕ್ಕ, ಜಯದೇವಿ ತಾಯಿ ಭಾಗವಹಿಸಿದ್ದರು.