Advertisement
ಶನಿವಾರ ಮಧ್ಯಾಹ್ನ ಅವಘಡ ಸಂಭವಿಸಿ ದರೂ ಬಾರ್ಜ್‌ನ ಮುಖ್ಯಸ್ಥರು ಸಂಜೆ 5 ಗಂಟೆ ಬಳಿಕ ನಮಗೆ ಮಾಹಿತಿ ನೀಡಿದರು. ಪ್ರತಿಕೂಲ ಹವಾಮಾನದಿಂದಾಗಿ ಆ ಹೊತ್ತಿನಲ್ಲಿ ನಾಲ್ವರನ್ನು ಮಾತ್ರ ದಡಕ್ಕೆ ತರಲು ಸಾಧ್ಯವಾಯಿತು. ರವಿವಾರ ಬೆಳಗ್ಗೆ 5 ಗಂಟೆಗೆ ಕಾರ್ಯಾಚರಣೆ ಮರು ಪ್ರಾರಂಭಿಸಿ 12 ಗಂಟೆ ಒಳಗೆ ಎಲ್ಲರನ್ನೂ ತರಲು ಸಾಧ್ಯವಾಯಿತು. ಯಾವುದೇ ಅಹಿತಕರ ಘಟನೆ ನಡೆಯದ ಹಾಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅಗತ್ಯ ಬಿದ್ದರೆ ಗೋವಾದಿಂದ ಹೆಲಿಕಾಪ್ಟರ್ ಕೂಡ ತರಿಸುವ ಉದ್ದೇಶ ಇತ್ತು. ಯಶಸ್ವೀ ಕಾರ್ಯಾ ಚರಣೆಯಲ್ಲಿ ಸಹಕರಿಸಿದ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ಸಚಿವರು ಹೇಳಿದರು.
ಇಲಾಖಾ ತನಿಖೆ: ಕಡಲ್ಕೊರೆತ ತಡೆ ಕಾಮಗಾರಿ ನಡೆಸುತ್ತಿದ್ದ ದರ್ತಿ ಸಂಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಸಚಿವ ಯು.ಟಿ. ಖಾದರ್ ಅವರು ಘಟನೆ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಬಂದರು ಇಲಾಖೆಗೆ ಪ್ರತ್ಯೇಕ ತನಿಖೆ ನಡೆಸಿ ವರದಿ ನೀಡಲಿದೆ ಎಂದರು.