ಶಿರಸಿ: ಅಡಕೆ ಬೆಳೆಗಾರರಿಗೆ ಅನಿವಾರ್ಯವಾದ ಒಂದು ಸಾವಿರ ಫೈಬರ್ ದೋಟಿಗಳ ಖರೀದಿಗೆ ಸರಕಾರ ಸಹಾಯಧನ ನೀಡಲು ಬೇಡಿಕೆ ಇದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದರು.
ಅವರು ಮಂಗಳವಾರ ನಗರದ ಮಿನಿ ವಿಧಾನ ಸೌಧದಲ್ಲಿ ನಡೆಸಿದ ಪ್ರಕೃತಿ ವಿಕೋಪ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇವಲ 40-50 ದೋಟಿಗೆ ಸಹಾಯಧನ ನೀಡಿದರೆ ಪ್ರಯೋಜನ ಇಲ್ಲ. ಅಡಕೆ ಬೆಳೆಗಾರರು ಅ ಧಿಕ ಇರುವ ಇಲ್ಲಿಗೆ ಕನಿಷ್ಠ ಒಂದು ಸಾವಿರ ದೋಟಿ ಬೇಕು. ತೋಟಗಾರಿಕಾ ಸಚಿವರ ಜತೆ ಮಾತನಾಡುತ್ತೇನೆ. ಎಲ್ಲ ಸಹಕಾರಿ ಸಂಘಗಳೂ, ಗ್ರಾಮಸ್ಥರೂ ಆಸಕ್ತರಾಗಿದ್ದಾರೆ ಎಂದರು.
ಶಿವಗಂಗಾ ಜಲಪಾತದಲ್ಲಿ ನಾಪತ್ತೆಯಾದ ಯುವತಿ ತ್ರಿವೇಣಿ ಅಂಬಿಗ ಪತ್ತೆಗೆ ವಿಶೇಷ ತಂಡ ತರಿಸಲಾಗಿದೆ ಎಂದ ಡಿಎಸ್ಪಿ ರವಿ ನಾಯ್ಕ, ತೇಲಿ ಹೋದದ್ದು ನೋಡಿದವರಿದ್ದು ಎಂದು ಹೇಳಿದರು. ಇನ್ನೊಂದು ದೃಷ್ಟಿಯಲ್ಲಿ ಕೂಡ ಪರಿಶೀಲನೆ ನಡೆಸಬೇಕು ಎಂದು ಸ್ಪೀಕರ್ ಸೂಚಿಸಿದರು.
ಪಶು ಸಂಗೋಪನಾ ಅಧಿಕಾರಿ ಎ.ಎಚ್. ಸವಣೂರು, 24 ವೈದ್ಯರಲ್ಲಿ ತಾಲೂಕಿನಲ್ಲಿ ಮೂವರಿದ್ದಾರೆ. ಆ್ಯಂಬುಲೆನ್ಸ್ ಇಲಾಖೆಗೆ ಬಂದಿದ್ದು. ನೋಡೆಲ್ ಎಜೆನ್ಸಿ ನಿಗದಿಯಾಗಿಲ್ಲ ಎಂದರು. ಪ್ರಧಾನ ಮಂತ್ರಿ ಫಸಲ ಭಿಮಾ ಯೋಜನೆಯಲ್ಲಿ 9 ಪಂಚಾಯತಿ ಸೇರಿ 80 ಲಕ್ಷ ರೂ. 2765 ಬಂದಿದೆ. ಬಿಸಲಕೊಪ್ಪ ಗ್ರಾಪಂಗೆ 49 ಲಕ್ಷ ರೂ. ಬಂದಿದೆ ಎಂದು ಕೃಷಿ ಅಧಿಕಾರಿ ಮಧುಕರ ನಾಯ್ಕ ತಿಳಿಸಿದರು.
ಮಾರಿಗದ್ದೆ ಲೈನ್ ಪದೇಪದೇ ತೊಂದರೆ ಆಗುತ್ತಿದೆ ಎಂಬ ದೂರಿದೆ. ಹೆಸ್ಕಾಂ ಲೈನ್ ಸಮಸ್ಯೆಗೆ ಮಳೆಗಾಲ ಪೂರ್ವದಲ್ಲಿ ಜಂಗಲ್ ಕ್ಲಿಯರ್ ಆಗಬೇಕಿತ್ತು. ಆಗಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ನಗರಸಭೆ ಹಾಗೂ ಹೆಸ್ಕಾಂ ಸೇರಿ ಲೈನ್ ಸಮಸ್ಯೆ ಇತ್ಯರ್ಥಕ್ಕೆ ಜಂಟಿ ಕಾರ್ಯಾಚರಣೆ ನಡೆಸಬೇಕು ಎಂದು ಕಾಗೇರಿ ಸೂಚಿಸಿದರು.
ಬಾಂದಾರ, ಸೇತುವೆಗೆ ಸಿಲುಕಿಕೊಂಡ ಮರ ದಿಮ್ಮಿ ತೆಗೆಯಬೇಕು. ರಸ್ತೆ ಹೊಂಡ ಬಿದ್ದಿದ್ದು ಸರಿ ಮಾಡಬೇಕು. ರಾಷ್ಟ್ರಿಯ ಹೆದ್ದಾರಿ ಅಭಿವೃದ್ಧಿಗೆ ಅಗಸೆಬಾಗಿಲು, ವಿದ್ಯಾಧಿರಾಜ ಎದುರು ಹಸ್ತಾಂತರ ಆಗಿದ್ದು, ಅವರ ಬಳಿ ದುರಸ್ತಿ ಮಾಡಿಸಬೇಕು. ಕ್ಷೇತ್ರದಲ್ಲಿ 30 ಕ್ಲಾಸ್‌ರೂಮ್ ಬರಲಿದೆ. 16 ಕೊಠಡಿಗೆ ಧಕ್ಕೆ ಆಗಿದ್ದು ಗಮನಕ್ಕಿದೆ ಎಂದರು.
ಸಹಾಯಕ ಆಯುಕ್ತ ಆರ್.ದೇವರಾಜು, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಡಿವೈಎಸ್‌ಪಿ ರವಿ ನಾಯ್ಕ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ತಹಶೀಲ್ದಾರ್ ಶ್ರೀಧರ ಮುಂದಲಮನಿ, ಪೌರಾಯುಕ್ತ ಕೇಶವ ಚೌಗಲೆ, ಆರೋಗ್ಯಾಧಿಕಾರಿ ವಿನಾಯಕ ಕಣ್ಣಿ ಇತರರು ಇದ್ದರು.