Advertisement

Dwarka: ಸಮುದ್ರದಡಿಯ ದ್ವಾರಕಾ ನಗರಿ ವೀಕ್ಷಣೆಗೆ ಸಬ್‌ಮರೀನ್‌ ಸೇವೆ?

11:58 PM Dec 27, 2023 | Team Udayavani |

ಗಾಂಧಿನಗರ: ಸಾವಿರಾರು ವರ್ಷಗಳ ಹಿಂದೆ ಭಗವಂತ ಶ್ರೀಕೃಷ್ಣ ನೆಲೆಸಿದ್ದ ದ್ವಾರಕಾ ನಗರವು ಸಮುದ್ರದಲ್ಲಿ ಮುಳುಗಿ ಹೋಯಿತು ಎಂಬುದು ಐತಿಹ್ಯ. ಅಂದಿನ ಅರಮನೆ ಸೇರಿದಂತೆ ನಗರದ ಅವ ಶೇಷಗಳನ್ನು ಪ್ರವಾಸಿಗರು ಕಣ್ಣಾರೆ ಕಾಣುವಂತಾ ಗಲು ಗುಜರಾತ್‌ ಸರ್ಕಾರವು ಜಲಾಂತರ್ಗಾಮಿ ಪ್ರವಾಸೋದ್ಯಮ ಆರಂಭಿಸಲು ಮುಂದಾಗಿದೆ.

Advertisement

ದ್ವಾರಕಾ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಪ್ರವಾಸಿ ಜಲಾಂತರ್ಗಾಮಿ ಕಾರ್ಯಚರಣೆಗಾಗಿ ಗುಜರಾತ್‌ ಪ್ರವಾಸೋದ್ಯಮ ಇಲಾಖೆಯು ಖಾಸಗಿ ಕಂಪೆನಿಯೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದೆ.

ಯಾವಾಗ ಆರಂಭ: ಮುಂದಿನ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ ಅಥವಾ ದೀಪಾವಳಿ ಹಬ್ಬದಂದು ಜಲಾಂತರ್ಗಾಮಿ ಪ್ರವಾಸೋದ್ಯಮ ಆರಂಭವಾಗುವ ಸಾಧ್ಯತೆಯಿದೆ. ಗಾಂಧಿನಗರದಲ್ಲಿ ಜ.10 ರಂದು ನಡೆಯಲಿರುವ ವೈಬ್ರೆಂಟ್‌ ಗುಜರಾತ್‌ ಜಾಗತಿಕ ಸಮಾವೇಶದಲ್ಲಿ ಈ ಕುರಿತು ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ.

ಒಮ್ಮೆಗೆ 24 ಪ್ರವಾಸಿಗರು: ಜಲಾಂತ ರ್ಗಾಮಿ ಯು ಒಮ್ಮೆಗೆ 30 ಜನರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಪೈಕಿ 24 ಪ್ರವಾಸಿ ಗರು, ಇಬ್ಬರು ಪೈಲಟ್‌ಗಳು, ಇಬ್ಬರು ಮುಳುಗು ತಜ್ಞರು, ಒಬ್ಬ ತಂತ್ರಜ್ಞ ಹಾಗೂ ಒಬ್ಬ ಗೈಡ್‌ ಇರಲಿದ್ದಾರೆ.ನೇರವಾಗಿ ಸಮುದ್ರ ಕಾಣುವಂತೆ ಆಸನ ವ್ಯವಸ್ಥೆ ಇರಲಿದೆ. ಪ್ರತಿ ಪ್ರವಾಸಿಗರಿಗೆ ಆಕ್ಸಿಜನ್‌ ಮಾಸ್ಕ್, ಫೇಸ್‌ ಮಾಸ್ಕ್ ಮತ್ತು ಸ್ಕೂಬಾ ಸೂಟ್‌ ಅನ್ನು ಒದಹಿಸಲಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next