Advertisement

ಏಕ್ರಾಗತೆಯಿಂದ ಅಧ್ಯಯನ ಮಾಡಿ

03:23 PM Feb 27, 2018 | |

ಹೂವಿನಹಿಪ್ಪರಗಿ: ವಿದ್ಯಾರ್ಥಿಗಳು ಏಕಾಗ್ರತೆಯಿಂದ ಅಧ್ಯಯನ ಮಾಡಿದ್ದಲ್ಲಿ ಉಜ್ವಲ ಬದುಕು ನಿಮ್ಮದಾಗುತ್ತದೆ ಎಂದು ಕರಿಭಂಟನಾಳ ಹಿರೇಮಠದ ಶಿವಕುಮಾರ ಸ್ವಾಮೀಜಿ ಹೇಳಿದರು.

Advertisement

ಉತ್ನಾಳದ ಮಹಾಲಕ್ಷ್ಮೀದೇವಿ ಪೂರ್ವ ಹಾಗೂ ಕಿರಿಯ ಪ್ರಾಥಮಿಕ ಶಾಲೆ ಐದನೇ ವಾರ್ಷಿಕೋತ್ಸವ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಆಲಿಸುವಿಕೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇಂದು ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವಲ್ಲಿ ಮುತುವರ್ಜಿ ವಹಿಸಬೇಕು ಎಂದರು.

ಜಿಪಂ ಮುಖ್ಯ ಯೋಜನಾಧಿಕಾರಿ ಗೋವಿಂದ ದಶವಂತ ಮಾತನಾಡಿ, ಉತ್ನಾಳದ ಮಹಾಲಕ್ಷ್ಮೀದೇವಿ ಶಾಲೆ ಬಡ ಮಕ್ಕಳಿಗೆ ಉಚಿತ ಶಿಕ್ಷಣದೊಂದಿಗೆ ವಸತಿ ಹಾಗೂ ದಾಸೋಹ ನೀಡಿ ಸಂರಕ್ಷಿಸುತ್ತಿದೆ. ಈ ಬಾರಿ ನವೋದಯ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 18 ಮಕ್ಕಳು ಆಯ್ಕೆಯಾಗಿ ಕೀರ್ತಿ ತಂದಿದ್ದು ಶ್ಲಾಘನೀಯ ಎಂದರು.

ವಿಜಯಪುರದ ಪ್ರಾಥಮಿಕ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ಮುಂದಾಳು ಡಾ| ರವೀಂದ್ರ ಬೆಳ್ಳಿ ಮಾತನಾಡಿ, ಮಹಾಲಕ್ಷ್ಮೀ ದೇವಿ ನಂಬಿದವರ ಪಾಲಿಗೆ ಕಾಮಧೇನು ಆಗಿದ್ದಾರೆ. ಈ ಸಂಸ್ಥೆಯಲ್ಲಿ ಕಲಿತ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಸಂಗಮೇಶ ಹಿರೇಮಠ ಪ್ರಸ್ತಾವಿಕ ಮಾತನಾಡಿ, ಶಿಕ್ಷಣದಿಂದ ವಂಚಿತರಾದ ಹಾಗೂ ಬಡ ಮಕಳಿಗೆ ಉಚಿತವಾಗಿ
ಶಿಕ್ಷಣ, ವಸತಿ ಹಾಗೂ ಪ್ರಸಾದ ನೀಡಲು ಶ್ರೀಮಠ ಯಾವಾಗಲೂ ಸೇವೆಗೆ ಸಿದ್ಧವಾಗಿ ನಿಂತಿದೆ. ಅರ್ಹರು ಇದರ ಸದುಪಯೋಗ ಪಡೆಯಬೇಕೆಂದರು.

Advertisement

ಮುದ್ದೇಬಿಹಾಳದ ಕ್ಷೇತ್ರ ಸಮನ್ವಯಾಧಿಕಾರಿ ಮಲ್ಲಿಕಾರ್ಜುನ ಬೆಳಗಲ್‌ ಮಾತನಾಡಿದರು. ಮಹಾಲಕ್ಷ್ಮೀದೇವಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶಿವಪುತ್ರಯ್ಯ ಸ್ವಾಮೀಜಿ, ಶಶಿಕಲಾ ಹಿರೇಮಠ, ಹಿರಿಯ ಸಾಹಿತಿ ವಿ.ಡಿ.ವಸ್ತ್ರದ, ಹೆಸ್ಕಾಂ ಶಾಖಾಧಿಕಾರಿ ಚನ್ನಗೌಡ ಪಾಟೀಲ, ಸಿಆರ್‌ಪಿ ಎಸ್‌.ಬಿ. ಅವಟಿ, ರಾಜಶೇಖರ ಪಾಟೀಲ, ನ್ಯಾಯವಾದಿ ಗುರುರಾಜ ಕನ್ನೂರ, ಅಪ್ಪು ಸಾಸನೂರ, ಶಿವಾನಂದ ಎಚ್‌.ಎನ್‌, ರೇಷ್ಮಾ ಶಿವಾನಮದ, ಗುರುಬಸಯ್ಯ ಹಿರೇಮಠ, ಎಚ್‌.ಎಂ. ಮಡಿವಾಳರ, ಎಸ್‌.ಎಸ್‌.ಪಾಟೀಲ ಸೇರಿದಂತೆ ಅನೇಕರಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಸೆಳೆದವು 

Advertisement

Udayavani is now on Telegram. Click here to join our channel and stay updated with the latest news.

Next