ಹುಣಸೂರು: ನಗರದ ಮಹಿಳಾ ಸರ್ಕಾರಿ ಪದವಿ ಕಾಲೇಜಿನ ಭಾರತ್ ಸ್ಕೌಟ್ ಅಂಡ್ ಗೆಡ್ಸ್‌ನ ರೇಂಜರ್ ಘಟಕದ 40 ವಿದ್ಯಾರ್ಥಿನಿಯರಿಗಾಗಿ ಕೊಡಗಿನ ಪುಷ್ಪಗಿರಿ ವನ್ಯಧಾಮಕ್ಕೆ ಚಾರಣ ಆಯೋಜಿಸಲಾಗಿತ್ತು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಸ್ಕೌಟ್ ಅಂಡ್ ಗೈಡ್ಸ್, ಎನ್‌ಎಸ್‌ಎಸ್ ಸಂಚಾಲಕ ಕೆ.ಎಸ್.ಭಾಸ್ಕರ್ ಮುಂದಾಳತ್ವದಲ್ಲಿ ವಿದ್ಯಾರ್ಥಿನಿಯರು ಸುಮಾರು 9 ಕಿ.ಮೀ ಪ್ರಕತಿ ನಡಿಗೆಯಲ್ಲಿ ಪಕ್ಷಿಗಳ ಇಂಚರ, ಹಸಿರು ಪರಿಸರದ ಶುದ್ಧಗಾಳಿ ಸೇವಿಸುತ್ತಾ, ತೊರೆಗಳ ನೀನಾದದೊಂದಿಗೆ ಖುಷಿಯಿಂದಲೇ ಬೆಟ್ಟ ಹತ್ತಿ ಸಂತೃಪ್ತರಾದರು.
ಬೆಟ್ಟದ ಬುಡದಲ್ಲಿನ ಕುಮಾರ ನದಿಯ ಮೆಲ್ಲಹಳ್ಳಿ ಜಲಪಾತಕ್ಕೆ ಕಡಿದಾದ ಇಳಿಜಾರಿನಲ್ಲಿ ಬೆಟ್ಟವಿಳಿದು, ಜಲಪಾತದ ಸೊಬಗನ್ನು ಕಣ್ಣಾರೆಕಂಡು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದರು. ಕುಮಾರ ನದಿಗಿಳಿದು ಜಳಕಮಾಡಿ ಪುಳಕಿತಗೊಂಡರು. ಹಸಿರು ಪರಿಸರದ ಪ್ರಕತ್ತಿಯ ಸೊಬಗನ್ನು ಸವಿಯುತ್ತಾ, ಜಲಧಾರೆಯನ್ನು ಕಣ್ತುಂಬಿಕೊಂಡರು.
ಪ್ರಕತಿ ಉಳಿಸುವ ಪಾಠ: ಚಾರಣದಲ್ಲಿ ಅರಣ್ಯದ ಮಹತ್ವ ಹಾಗೂ ಪ್ರಕೃತಿ ವೈಭವದ ಕುರಿತು ಅರಣ್ಯ ರಕ್ಷಕ ಶಂಕರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಅರಣ್ಯ ಸಂರಕ್ಷಣೆ, ದೈವದತ್ತವಾಗಿರುವ ಪ್ರಕೃತಿ ಸಂಪತ್ತನ್ನು ಪ್ರೀತಿಸುವ ಜೊತೆಗೆ ಉಳಿಸಬೇಕೆಂದರು. ಚಾರಣದ ಕೊನೆಯಲ್ಲಿ ಪಕ್ಕದಲ್ಲಿನ ಮಹಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಪ್ರತಿವರ್ಷ ಅವಕಾಶ ಕಲ್ಪಿಸುವ ಭರವಸೆ: ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಹಾಗೂ ಸ್ಕೌಟ್ ಅಂಡ್ ಗೈಡ್ಸ್, ಎನ್‌ಎಸ್‌ಎಸ್ ಸಂಚಾಲಕ ಕೆ.ಎಸ್.ಭಾಸ್ಕರ್ ಪ್ರತಿವರ್ಷ ಇಂತಹ ಚಾರಣ ಆಯೋಜಿಸುವ ಮೂಲಕ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೆರ್ಯ ಮೂಡಿಸುವುದು, ಪರಿಸರ ಪ್ರೀತಿ ಬೆಳೆಸುವುದು, ಓದಿಗೂ ಪೂರಕ ವಾತಾವರಣ ನಿರ್ಮಿಸಿಕೊಡಲಾಗುವುದೆಂದು ತಿಳಿಸಿದರು. ಸಹ ಸಂಚಾಲಕ ನಂಜುಂಡಸ್ವಾಮಿ ಜೊತೆಗಿದ್ದರು.