Advertisement

ವಿದ್ಯಾರ್ಥಿಗಳೇ, ಮನಸ್ಸಿನ ಮೇಲೆ ಹಿಡಿತ ಸಾಧಿಸಿ

11:29 AM Jul 24, 2018 | |

ಕಾಳಗಿ: ಸದಾ ಚಂಚಲದಿಂದ ಕೂಡಿರುವ ಮನಸ್ಸನ್ನು ವಿದ್ಯಾರ್ಥಿಗಳು ಹಿಡಿತದಲ್ಲಿ ಇಟ್ಟುಕೊಂಡು ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಚಿತ್ತಾಪುರ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ವಿದ್ಯಾಶ್ರೀ ಹೇಳಿದರು.

Advertisement

ಇಲ್ಲಿನ ಶಿವಬಸವೇಶ್ವರ ವಿದ್ಯಾಭಿವೃದ್ಧಿ ಟ್ರಸ್ಟ್‌ ಸಂಚಾಲಿತ ಕಾಳಪ್ಪಗೌಡ ಪೊಲೀಸ್‌ ಪಾಟೀಲ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸ್ವಾಸ್ಥ್ಯ ಸಂಕಲ್ಪ ಮಾಹಿತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಬಾಲ್ಯವಸ್ಥೆಯಿಂದಲೇ ಆರೋಗ್ಯಯುತ ಜೀವನ ವಿಧಾನ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಶರೀರವನ್ನು ಸದೃಢವಾಗಿ ಇಟ್ಟುಕೊಳ್ಳುವುದರ ಜೊತೆಗೆ, ಮನಸ್ಸಿನ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಳಗಿ ವಲಯ ಮೇಲ್ವಿಚಾರಕ ಗುಡದಪ್ಪ ಮಾತನಾಡಿ, ತಮ್ಮ ಸೇವಾ ಸಂಸ್ಥೆಯ ವತಿಯಿಂದ ವಿವಿಧ ಹಳ್ಳಿಗಳಲ್ಲಿ ಮಾಡಲಾಗುತ್ತಿರುವ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಹಾಗೂ ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿನಿ ವರ್ಷ ಜಿಲ್ಲಿ ಮಾತನಾಡಿದರು.

ಶಿವಬಸವೇಶ್ವರ ದಕ್ಷಿಣ ಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್‌ನ ಪ್ರಧಾನ ಸತ್ಯನಾರಾಯಣ ವನಮಾಲಿ, ಮುಖ್ಯಶಿಕ್ಷಕ ಬಾಬುರಾವ ಪೂಜಾರಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತರಬೇತಿ ಮೇಲ್ವಿಚಾರಕ ರಾಹುಲ್‌, ಸೇವಾಪ್ರತಿನಿಧಿ  ಶಿವಪುತ್ರಪ್ಪ, ಶಿಕ್ಷಕರಾದ ದಯಾನಂದ ಹೊಸಮನಿ, ವೀರೇಶ ಸಿಂಪಿ, ನಾಗವೇಣಿ ಹಿರೇಮಠ ಇದ್ದರು. ಮಲ್ಲಿಕಾರ್ಜುನ ಹೆಳವಾರ ಸ್ವಾಗತಿಸಿದರು, ಶರಣಬಸಪ್ಪ ಕೋರವಾರ ನಿರೂಪಿಸಿದರು, ಪ್ರಕಾಶ ಮಠಪತಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next