Advertisement

Jigar movie review; ಆ್ಯಕನ್‌ ಡ್ರಾಮಾದಲ್ಲೊಂದು ಪ್ರೇಮ್‌ ಕಹಾನಿ

12:21 PM Jul 06, 2024 | Team Udayavani |

ಪಕ್ಕಾ ಲೋಕಲ್‌ ಆಗಿ, ಊರಲ್ಲಿ ಒಂದಷ್ಟು ಹುಡುಗರನ್ನು ಜೊತೆಗಿಟ್ಟುಕೊಂಡು ನಮ್ದೇ ಹವಾ ಎಂದು ಓಡಾಡಿಕೊಂಡಿರುವ ನಾಯಕ ಆ್ಯಂಡ್‌ ಗ್ಯಾಂಗ್‌ ಒಂದು ಕಡೆಯಾದರೆ, ಆತನಿಗೆ ಎದುರಾಳಿಯಾಗಿರುವ ತಂಡ ಮತ್ತೂಂದು ಕಡೆ. ಈ ನಡುವೆಯೇ ಒಂದು ಕೊಲೆ. ಈ ಗ್ಯಾಪಲ್ಲಿ ಬದಲಾಗುವ ನಾಯಕನ ಮನಸ್ಥಿತಿ. ಇನ್ನೇನು ಎಲ್ಲವೂ ಸರಿಹೋಯಿತು ಎಂದು ಕುಟುಂಬ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೂಂದು ಘಟನೆ..  ಹೀಗೆ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ ಕೊಡುತ್ತಾ ಸಾಗುವ ಚಿತ್ರ “ಜಿಗರ್‌’.

Advertisement

ಚಿತ್ರದ ಹೆಸರಿಗೆ ತಕ್ಕಂತೆ ಇದೊಂದು ಆ್ಯಕ್ಷನ್‌ ಡ್ರಾಮಾ. ಖಡಕ್‌ ಕತ್ತಿಯಂತಹ ನಾಯಕ ಹಾಗೂ ಆತನ ಸುತ್ತ ನಡೆಯುವ ಘಟನೆಗಳೇ ಈ ಸಿನಿಮಾದ ಜೀವಾಳ. ಕರಾವಳಿ ಕುಂದಾಪುರದಲ್ಲಿ ಸಿನಿಮಾದ ಕಥೆ ನಡೆಯುತ್ತದೆ. ಅಲ್ಲಿನ ಲೋಕಲ್‌ ರೌಡಿಸಂ, ಬೋಟ್‌, ಟೆಂಡರ್‌… ಇಂತಹ ಅಂಶಗಳ ಜೊತೆ ಸಿನಿಮಾ ಸಾಗುತ್ತದೆ. ನಿರ್ದೇಶಕರು ಸಿನಿಮಾದಲ್ಲಿ ಆ್ಯಕ್ಷನ್‌ ಜೊತೆಗೆ ಲವ್‌, ಸೆಂಟಿಮೆಂಟ್‌ ಅನ್ನು ಸೇರಿಸಿದ್ದಾರೆ. ಇದೊಂದು ಆ್ಯಕ್ಷನ್‌ ಸಿನಿಮಾವಾದರೂ ಅತಿಯಾದ ಅಬ್ಬರವಿಲ್ಲದೇ ಸಾಗುವುದು ಚಿತ್ರದ ಪ್ಲಸ್‌. ಒಂದೂರಿನ ವಾತಾವರಣವನ್ನು ನೀಟಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಒಂದಷ್ಟು ಏರಿಳಿತಗಳ ಮೂಲಕ ಸಾಗುವ ಸಿನಿಮಾ, ಅಲ್ಲಲ್ಲಿ ಕುತೂಹಲಗಳನ್ನು ಪ್ರೇಕ್ಷಕರ ಮಡಿಲಿಗೆ ಹಾಕುತ್ತದೆ. ನಿರ್ದೇಶಕರಿಗೆ ಆ್ಯಕ್ಷನ್‌ ಜೊತೆಗೊಂದು ಲವ್‌ಸ್ಟೋರಿಯನ್ನು ಹೇಳುವ ತವಕ. ಅದನ್ನು ಕಥೆಗೆ ಹೊಂದಿಸುವಲ್ಲಿ ಅವರ “ಪ್ರಯತ್ನ’ ಎದ್ದು ಕಾಣುತ್ತದೆ.

ನಾಯಕ ಪ್ರವೀಣ್‌ ತೇಜ್‌ಗೆ ಇದು ಹೊಸ ಪಾತ್ರ. ಈ ಹಿಂದೆ ಲವರ್‌ಬಾಯ್‌ ಸೇರಿದಂತೆ ಮೃದು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಪ್ರವೀಣ್‌ ಈ ಬಾರಿ ಆ್ಯಕ್ಷನ್‌ ಇಮೇಜ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ವಿಜಯ ಶ್ರೀ, ವಿನಯಪ್ರಸಾದ್‌, ಯಶ್ವಂತ್‌ ಶೆಟ್ಟಿ , ಬಲರಾಜ್‌ ವಾಡಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next