Advertisement

Jigar; ತೆರೆಗೆ ಬಂತು ಪ್ರವೀಣ್ ತೇಜ್ ನಟನೆಯ ಜಿಗರ್

11:30 AM Jul 05, 2024 | Team Udayavani |

ಯು.ಕೆ .ಪ್ರೊಡಕ್ಷನ್ಸ್‌ ಲಾಂಛನದಲ್ಲಿ ಪೂಜಾ ವಸಂತಕುಮಾರ್‌ ನಿರ್ಮಿಸಿರುವ, ಸೂರಿ ಕುಂದರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಹಾಗೂ ಪ್ರವೀಣ್‌ ತೇಜ್‌ ನಾಯಕನಾಗಿ ನಟಿಸಿರುವ “ಜಿಗರ್‌’ ಚಿತ್ರ ಇಂದು ತೆರೆಕಾಣುತ್ತಿದೆ.

Advertisement

ಚಿತ್ರಕ್ಕೆ ಶಿವಸೇನ ಛಾಯಾಗ್ರಹಣ, ಜ್ಞಾನೇಶ್‌ ಮಠದ್‌ ಸಂಕಲನ, ಧನಂಜಯ ಬಿ ನೃತ್ಯ ನಿರ್ದೇಶನ ಹಾಗೂ ಚೇತನ್‌ ಡಿಸೋಜ ಅವರ ಸಾಹಸ ನಿರ್ದೇಶನವಿರುವ ಜಿಗರ್‌ ಚಿತ್ರಕ್ಕೆ ಸುನೀಲ್‌ ಸಂಭಾಷಣೆ ಬರೆದಿದ್ದಾರೆ.

ಅರ್ಜುನ್‌ ಹಾಗೂ ಗಣೇಶ್‌ ಪರಶುರಾಮ್‌ ಹಾಡುಗಳನ್ನು ರಚಿಸಿದ್ದಾರೆ. ಪ್ರವೀಣ್‌ ತೇಜ್‌ ಅವರಿಗೆ ನಾಯಕಿಯಾಗಿ ವಿಜಯ ಶ್ರೀ ನಟಿಸಿದ್ದಾರೆ. ವಿನಯಪ್ರಸಾದ್‌, ಯಶ್ವಂತ್‌ ಶೆಟ್ಟಿ, ಬಲರಾಜ್‌ ವಾಡಿ, ಭವ್ಯ ಪೂಜಾರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next