Advertisement

Sirsi: ಅರಣ್ಯ ಇಲಾಖೆಯಲ್ಲಿ ನೇರ ನೇಮಕಾತಿಗೆ ವಿದ್ಯಾರ್ಥಿಗಳ ಪ್ರತಿಭಟನೆ

12:51 PM Feb 10, 2024 | Team Udayavani |

ಶಿರಸಿ: ಅರಣ್ಯ ಪದವಿ ಪಡೆದ ವಿದ್ಯಾರ್ಥಿಗಳಿಗೆ ಅರಣ್ಯ‌ ಉದ್ಯೋಗದಲ್ಲಿ ನೇರವಾಗಿ ಅವಕಾಶ‌ ಒದಗಿಸಬೇಕು. ಮುಂಬಡ್ತಿ ಕೈ ಬಿಟ್ಟು ಅರ್ಹ ವಿದ್ಯಾರ್ಥಿಗಳಿಗೆ ನೇಮಕಾತಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಅರಣ್ಯ ಕಾಲೇಜಿನಲ್ಲಿ ಅನಿರ್ಧಿಷ್ಟ ಅವಧಿಯ ಪ್ರತಿಭಟನೆ ನಡೆಸಲಾಗುತ್ತಿದೆ.

Advertisement

ಉಳಿದ ಇಲಾಖೆಯಲ್ಲಿ ಆಯಾ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಅವಕಾಶ‌ ಇದೆ. ಆದರೆ ಅರಣ್ಯ ಇಲಾಖೆಯಲ್ಲಿ ಕಳೆದ ಐದು ವರ್ಷದಿಂದ ನೇಮಕಾತಿ ಆಗಿಲ್ಲ. ಈಗ ವಿಜಯ ಭಾಸ್ಕರ ಅವರ ವರದಿ ಪ್ರಕಾರ ಪೂರ್ಣ ಪ್ರಮಾಣದಲ್ಲಿ ಮುಂಬಡ್ತಿ ಪಡೆಯಲು ಸೂಚಿಸಿದ್ದಾರೆ. ಇದನ್ನು ಕೈ ಬಿಡಬೇಕು ಎಂದು ಒತ್ತಾಯಿಸಿ ಹಕ್ಕು ಸಿಗುವ ತನಕ ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಆಗ್ರಹಿಸಿದರು.

ಪೆ. 10ರ ಶನಿವಾರ ‌ನಗರದ ಅರಣ್ಯ ಮಹಾವಿದ್ಯಾಲಯದಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ ಅವರಿಗೆ ಈ ಬಗ್ಗೆ ಮನವಿ ನೀಡಿದರು. ಉಪ ವಲಯ, ವಲಯ, ಸಹಾಯಕ ಅರಣ್ಯಾಧಿಕಾರಿಗಳಲ್ಲಿ ನೇಮಕಾತಿ ಆಗಬೇಕು. 1500ಕ್ಕೂ ಅಧಿಕ ವಿದ್ಯಾರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಅರಣ್ಯ ಇಲಾಖೆಯ ವಿದ್ಯಾರ್ಥಿಗಳಿಗೆ ಸರಕಾರ ‌ಮಲತಾಯಿ ಧೋರಣೆ ಮಾಡುತ್ತಿದ್ದು, ಇದನ್ನು ಸರಿಪಡಿಸಬೇಕು ಎಂದು‌ ಮನವಿಯಲ್ಲಿ ಒತ್ತಾಯಿಸಿದರು.

ಈ ವೇಳೆ ವಿದ್ಯಾರ್ಥಿಗಳಾದ ವೈಷ್ಣವಿ ಪಾಟೀಲ, ಯಶಸ್ ಟಿ.ಎನ್, ವಿನಾಯಕ ಎಸ್, ಶಿವಾನಂದ‌ ಕಾನಟ್ಟಿ, ಶಕೀಲ ಅಹಮದ್, ವಂದನಾ ಚಿಕ್ಕಮಠ, ನಮೃತಾ ಕೊಳ್ಳಿ, ನಯನಾ ಹಾಗೂ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next