Advertisement

8 ತಿಂಗಳ ಬಳಿಕ ಬಾಗಿಲು ತೆರೆದರೂ ಬರುತ್ತಿಲ್ಲ

03:45 PM Nov 24, 2020 | Suhan S |

ಚಾಮರಾಜನಗರ: ಸ್ನಾತಕೋತ್ತರ ಪದವಿ ಹಾಗೂ ಅಂತಿಮ ಪದವಿ ತರಗತಿಗಳ ವಿದ್ಯಾರ್ಥಿಗಳಿಗೆ 8 ತಿಂಗಳ ಬಳಿಕ ಕಾಲೇಜು ಬಾಗಿಲು ತೆರೆದು ವಾರವಾದರೂ ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಹಾಜರಾತಿ ಬಲು ಕ್ಷೀಣವಾಗಿದೆ. ಬಹುತೇಕ ಕಾಲೇಜುಗಳಲ್ಲಿ 5-6 ವಿದ್ಯಾರ್ಥಿಗಳಷ್ಟೇ ಹಾಜರಾಗುತ್ತಿದ್ದಾರೆ.

Advertisement

ಜಿಲ್ಲೆಯಲ್ಲಿ ಇದುವರೆಗೆಕೋವಿಡ್‌ ಫ‌ಲಿತಾಂಶ ಬಂದಿರುವವರ ಪೈಕಿ9ವಿದ್ಯಾರ್ಥಿಗಳಿಗೆಕೋವಿಡ್‌ ಪಾಸಿಟಿವ್‌ ಆಗಿದೆ. ಓರ್ವ ಉಪನ್ಯಾಸಕರು ಹಾಗೂ ಓರ್ವ ನೌಕರರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ವರ್ಷದಲ್ಲಿ 215 ವಿದ್ಯಾರ್ಥಿಗಳಿದ್ದಾರೆ. ಕಾಲೇಜಿನಿಂದ ಕೋವಿಡ್‌ ಪರೀಕ್ಷೆ ಮಾಡಿಸಿಲ್ಲ. 40 ವಿದ್ಯಾರ್ಥಿಗಳೇ ಕೋವಿಡ್‌ ಟೆಸ್ಟ್‌ ಮಾಡಿಸಿದ್ದಾರೆ. ಇವರಲ್ಲಿ ಫ‌ಲಿ ತಾಂಶ ತಂದವರು 15 ಮಂದಿ ಮಾತ್ರ. ಈ ಪೈಕಿ ಇಬ್ಬರು ಮಾತ್ರ ತರಗತಿಗೆ ಬರುತ್ತಿದ್ದಾರೆ. ನಗರದ ಜೆಎಸ್‌ಎಸ್‌ ಮಹಿಳಾ ಪದವಿ ಕಾಲೇಜಿನಲ್ಲಿ ಒಟ್ಟು332 ಮಂದಿ ವಿದ್ಯಾರ್ಥಿ ನಿಯರಿದ್ದು, ಇವರಲ್ಲಿ ಶೇ. 50ಕ್ಕೂ ಹೆಚ್ಚು ವಿದ್ಯಾರ್ಥಿನಿ ಯರು ಕೋವಿಡ್‌ ಪರೀಕ್ಷೆ ಮಾಡಿಸಿದ್ದಾರೆ. ಕಳೆದ ಒಂದು ವಾರದಲ್ಲಿ ನೂರರ ಆಸುಪಾಸು ತರಗತಿಗೆ ಹಾಜರಾಗಿದ್ದರು. ಸೋಮವಾರ 167 ಮಂದಿ ಹಾಜರಾಗಿದ್ದರು.

ಗುಂಡ್ಲುಪೇಟೆ: ಜಿಲ್ಲೆಯ ಗುಂಡ್ಲುಪೇಟೆ ಜೆಎಸ್‌ಎಸ್‌ ಪದವಿ ಕಾಲೇಜಿನ ಅಂತಿಮ ವರ್ಷದಲ್ಲಿ 155 ಮಂದಿ ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ 104 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದೆ. ಉಳಿದ ವಿದ್ಯಾರ್ಥಿಗಳು ಪರೀಕ್ಷೆ ಮಾಡಿಸಿಕೊಂಡಿಲ್ಲ. ಒಟ್ಟು 28 ಮಂದಿ ಉಪನ್ಯಾಸಕರು ಮತ್ತು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಪರೀಕ್ಷೆ ಮಾಡಿಸಿಕೊಂಡಿರುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಯಾರಿಗೂ ಪಾಸಿಟಿವ್‌ ಇಲ್ಲ. 155 ವಿದ್ಯಾರ್ಥಿಗಳ ಪೈಕಿ ಒಂದೊಂದು ದಿನ 25 ಮಂದಿ ಬಂದರೆ, ಸೋಮವಾರ 52 ಮಂದಿ ಹಾಜರಾಗಿದ್ದರು. ಗುಂಡ್ಲು ಪೇಟೆ ಸರ್ಕಾರಿ ಪದವಿ ಕಾಲೇಜಿನಲ್ಲಿ 200 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ 100 ವಿದ್ಯಾರ್ಥಿಗಳಿಗೆ ಕೋವಿಡ್‌ ಪರೀಕ್ಷೆ ಮಾಡಿಸಲಾಗಿದೆ. ಅನೇಕರ ಫ‌ಲಿ ತಾಂಶ ಬಂದಿಲ್ಲ.16 ಮಂದಿ ತರಗತಿಗೆ ಹಾಜರಾಗಿದ್ದಾರೆ.

ಹನೂರು: ಹನೂರು ಜಿ.ವಿ. ಗೌಡ ಪದವಿ ಕಾಲೇಜಿ ನಲ್ಲಿ ಒಟ್ಟು 99 ವಿದ್ಯಾರ್ಥಿಗಳಿದ್ದು, 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೋವಿಡ್‌ ಪರೀಕ್ಷೆ ಮಾಡಿಸಿದ್ದಾರೆ. ಅದರ ಫ‌ಲಿತಾಂಶ ಬಂದಿಲ್ಲ.

ಕೊಳ್ಳೇಗಾಲ: ಕೊಳ್ಳೇಗಾಲ ಸರ್ಕಾರಿ ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ಪದವಿಯಲ್ಲಿ 102 ಮಂದಿ ವಿದ್ಯಾರ್ಥಿಗಳಿದ್ದು, ಮೂರೇ ಮಂದಿಬರುತ್ತಿದ್ದಾರೆ.84 ಮಂದಿಗೆ ಕೋವಿಡ್‌ ಟೆಸ್ಟ್‌ ಮಾಡಿಸ ಲಾಗಿದೆ. ಎಲ್ಲರ ಫ‌ಲಿತಾಂಶ ನೆಗೆಟಿವ್‌ ಬಂದಿದೆ. ಕೊಳ್ಳೇಗಾಲದ ಜೆಎಸ್‌ಎಸ್‌ ಮಹಿಳಾ ಕಾಲೇಜಿನಲ್ಲಿ 138 ವಿದ್ಯಾರ್ಥಿನಿಯರಿದ್ದು, 30-35 ತರಗತಿಗೆ ಬರುತ್ತಿದ್ದಾರೆ. 94 ಮಂದಿಗೆ ಕೋವಿಡ್‌ ಟೆಸ್ಟ್‌ ಮಾಡಿಸಲಾಗಿದೆ. ಎಲ್ಲರ ಫ‌ಲಿತಾಂಶ ನೆಗೆಟಿವ್‌ ಬಂದಿದೆ.

Advertisement

ಕೊಳ್ಳೇಗಾಲ 3 ವಿದ್ಯಾರ್ಥಿಗಳಿಗೆ ಪಾಸಿಟಿವ್‌ : ಕೊಳ್ಳೇಗಾಲದ ಮಾನಸ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಪದವಿಯಲ್ಲಿ ಒಟ್ಟು212 ವಿದ್ಯಾರ್ಥಿಗಳಿದ್ದಾರೆ. ಇವರಲ್ಲಿ16 ಮಂದಿ ಕಾಲೇಜಿಗೆ ಬಂದಿದ್ದಾರೆ.142 ಮಂದಿಗೆಕೋವಿಡ್‌ ಪರೀಕ್ಷೆ ಮಾಡಿಸಲಾಗಿದ್ದು, ಇವರಲ್ಲಿ3 ಜನರಿಗೆ ಪಾಸಿಟಿವ್‌ ಬಂದಿದೆ. ಬಿಎಡ್‌ಕಾಲೇಜಿನಲ್ಲಿ42 ವಿದ್ಯಾರ್ಥಿಗಳಿದ್ದು, 13 ಜನ ಬಂದಿದ್ದಾರೆ. ಚಾಮರಾಜನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಸ್ನಾತಕೋತ್ತರಕೇಂದ್ರದಲ್ಲಿ ಓರ್ವ ಉಪನ್ಯಾಸಕರು ಹಾಗೂ ಓರ್ವ ಡಿ ಗ್ರೂಪ್‌ ನೌಕರರಿಗೆ ಪಾಸಿಟಿವ್‌ ಬಂದಿದೆ. ಒಟ್ಟು 280 ವಿದ್ಯಾರ್ಥಿಗಳಿದ್ದು, 100 ಮಂದಿ ಸಿಬ್ಬಂದಿ ಇದ್ದಾರೆ. ಇನ್ನೂ ಹಲವರ ಪರೀಕ್ಷಾ ವರದಿ ಬಂದಿಲ್ಲ.ಕೋವಿಡ್‌ ಫ‌ಲಿತಾಂಶ ಬಂದ ಬಳಿಕ ತರಗತಿ ಆರಂಭಿಸಲಾಗುವುದ ಎಂದು ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ ತಿಳಿಸಿದರು.

 

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next