Advertisement

SSLC Exam: ವಿದ್ಯಾರ್ಥಿಗಳಿಗೆ ಬೇಕಿದೆ ಮನೋಸ್ಥೈರ್ಯದ ಟಾನಿಕ್‌

12:12 AM Apr 08, 2023 | Team Udayavani |

ಮಂಗಳೂರು: ವಿದ್ಯಾರ್ಥಿಗಳೇ ಕೆಲವು ಪರೀಕ್ಷೆಗಳು ನಡೆಯತ್ತಿವೆ. ಇನ್ನು ಕೆಲವದರ ಫಲಿತಾಂಶ ಬಾಕಿ ಇದೆ. ಈ ಹಂತದಲ್ಲಿ ಒಂದಷ್ಟು ಒತ್ತಡ ಸಹಜ. ಹಾಗೆಂದು ಇದೇನೂ ಬದುಕನ್ನೇ ಬದಲಾಯಿಸುವ ಪರೀಕ್ಷೆಯಲ್ಲ, ಅತಿಯಾದ ಒತ್ತಡ, ಆತಂಕ ಬೇಡ.

Advertisement

ಸ್ಪರ್ಧೆ ಇರಲಿ, ಆದರೆ ಅದು ಒಂದು ಹಂತಕ್ಕೆ ಸೀಮಿತವಾಗಿರಲಿ. ಪ್ರಯತ್ನ ಗರಿಷ್ಠವಿರಲಿ, ನಿರೀಕ್ಷೆಯೂ ಬೇಕು. ಆದರೆ ನಿರೀಕ್ಷಿತ ಫಲಿತಾಂಶ ಸಿಗದಾಗ ನಿರಾಶೆಗೊಳ್ಳುವ ಅಗತ್ಯವಿಲ್ಲ. ಯಾಕೆಂದರೆ ಇದೊಂದು ತರಗತಿ ಪರೀಕ್ಷೆಯಷ್ಟೆ. ಸಾಧನೆಗೆ ಮತ್ತಷ್ಟು ಅವಕಾಶಗಳ ಹೆಬ್ಟಾಗಿಲು ತೆರೆದಿದೆ.

ಯಾರೂ ಹಂಗಿಸುವುದಿಲ್ಲ
ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂತೆಂದು ಯಾರ್ಯಾರೋ ಹಂಗಿಸುತ್ತಾರೆ, ಅದರಿಂದ ಅವ ಮಾನವಾಗುತ್ತದೆ ಎಂಬುದೊಂದು ಭ್ರಮೆ. ಅವ ಕಾಶಗಳು ಕೇವಲ ಅಂಕವನ್ನೇ ಆಧರಿಸಿಲ್ಲ. ನಿಮ್ಮಲ್ಲಿರುವ ವಿವಿಧ ಕೌಶಲ, ಆತ್ಮಸ್ಥೈರ್ಯ ಕೂಡ ಪರಿಗಣಿಸಲ್ಪಡುತ್ತದೆ. ನೀವು ಈಗ ತರಗತಿಯ ಪರೀಕ್ಷೆಯ ಮೂಲಕ ಸುಂದರ ಬದುಕಿನತ್ತ ಪುಟ್ಟ ಹೆಜ್ಜೆ ಇಡಲು ಪ್ರಯತ್ನಿಸುತ್ತಿದ್ದೀರಿ. ಇಲ್ಲಿ ಎಡವುವುದು, ಎದ್ದು ನಿಲ್ಲುವುದು ನಿರಂತರ. ಹಾಗಾಗಿ ಅನಗತ್ಯ ಮಾನಸಿಕ ಒತ್ತಡ, ಕ್ಷೋಭೆ, ದುಡುಕಿನ ವರ್ತನೆ ಬೇಡ. ಸಹಜ ಪ್ರೌಢಿಮೆಯಿಂದ ಸವಾಲುಗಳನ್ನು ಸ್ವೀಕರಿಸಿ ಮುನ್ನಡೆದಾಗ ಮಾತ್ರ ಯಶಸ್ಸು ಸಾಧ್ಯ. ನೀವು ಹೊಸ ಜಗತ್ತಿನ ಸಸಿಗಳು. ನೀವು ಬೆಳೆದು ಹೆಮ್ಮರವಾದಾಗಲೇ ಎಲ್ಲರಿಗೂ ನೆರಳು, ಹಣ್ಣು. ಹಾಗಾದರೆ ಭಯ ಬಿಟ್ಟು ಬೆಳೆಯುತ್ತೀರಿ. ಅಲ್ಲವೆ?

ದ.ಕ., ಉಡುಪಿ: 29 ಮಂದಿ ಆತ್ಮಹತ್ಯೆ
ಕಳೆದೊಂದು ವರ್ಷದಲ್ಲಿ ನಡೆದಿರುವ 18 ವರ್ಷಕ್ಕಿಂತ ಕೆಳಗಿನವರ ಆತ್ಮಹತ್ಯೆಯ ಪ್ರಕರಣಗಳು ಆತಂಕ ಮೂಡಿಸುತ್ತಿವೆ. 2022ರ ಜನವರಿಯಿಂದ 2023ರ ಮಾರ್ಚ್‌ ವರೆಗೆ ಉಡುಪಿ ಜಿಲ್ಲೆಯಲ್ಲಿ 10 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಈ ಸಂಖ್ಯೆ 19. ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಮೂರು ತಿಂಗಳಲ್ಲಿ 7 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವಾರು ಆತ್ಮಹತ್ಯೆಗೆ ಯತ್ನ ಪ್ರಕರಣಗಳು ನಡೆದಿವೆ.

ಸಾಮಾನ್ಯ ಕಾರಣಗಳೇನು?
ಮನೆಯಲ್ಲಿ ತಂದೆ/ ತಾಯಿ ಬೈದರೆಂದು ಆತ್ಮಹತ್ಯೆಗೆ ಮುಂದಾದವರಿದ್ದಾರೆ. ಹಿಂದೆ ಫೇಲ್‌ ಆದವರಲ್ಲಿ ಕೆಲವರು ಆಪ್ತ ಸಮಾಲೋಚನೆಗೆ ಬರುತ್ತಿದ್ದರು. ಆದರೆ ಈಗ 90+ ಅಂಕ ಪಡೆದ ಕೆಲವರು ಕೂಡ ಬರುತ್ತಾರೆ. ನಿರೀಕ್ಷೆಗಿಂತ ಒಂದು ಅಂಕ ಕಡಿಮೆಯಾದರೂ ನಾನು ನಿಷ್ಪ್ರಯೋಜಕ ಎಂದುಕೊಳ್ಳುವ ಮಕ್ಕಳಿದ್ದಾರೆ. ರಿಲೇಶನ್‌ಶಿಪ್‌ ವಿಷಯಗಳೂ ಒತ್ತಡಕ್ಕೆ ಕಾರಣವಾಗುತ್ತವೆ. ಇದು ಸರಿಯಲ್ಲ. ಒತ್ತಡ, ಸಮಸ್ಯೆಗಳಿಗೆ ಆತ್ಮಹತ್ಯೆ ಪರಿ ಹಾರವೇ ಅಲ್ಲ. ಅತ್ಮಹತ್ಯೆಯನ್ನು ತಡೆಯಲು ಸಾಧ್ಯ ವಿದೆ. ಮಕ್ಕಳಲ್ಲಿ ಕೋಪಿಂಗ್‌ ಸ್ಟ್ರಾéಟಜಿ (ಒತ್ತಡ ನಿವಾರಿಸುವ ಕೌಶಲ) ಕಡಿಮೆಯಾಗುತ್ತಿದೆ. ಪರೀಕ್ಷೆಯ ಆತಂಕ ಸ್ವಲ್ಪ ಇರಬೇಕು, ಆದರೆ ಒತ್ತಡ ಮಾಡಿಕೊಳ್ಳ ಬಾರದು ಎನ್ನುತ್ತಾರೆ ಮಂಗಳೂರಿನ ಮಾನಸಿಕ ಆರೋಗ್ಯ ತಜ್ಞೆ ಡಾ| ರಮಿಳಾ ಶೇಖರ್‌.

Advertisement

ಮನೋಸ್ಥೆ „ರ್ಯ ಮುಂದುವರಿಕೆ
ದ.ಕ. ಜಿ.ಪಂ.ನಿಂದ ಶಾಲೆಗಳಲ್ಲಿ ಆರಂಭಿಸಿರುವ ಮನೋಸ್ಥೈರ್ಯ ಕಾರ್ಯಕ್ರಮವನ್ನು ಪರೀಕ್ಷೆಯ ಅನಂತರವೂ ಮುಂದುವರಿಸಲಾಗುವುದು. ಆನ್‌ಲೈನ್‌ ಮೂಲಕವೂ ನಡೆಸಲಾಗುವುದು ಎಂದು ಸಿಇಒ ಡಾ| ಕುಮಾರ್‌ ತಿಳಿಸಿದ್ದಾರೆ.

ನಿಮ್ಹಾನ್ಸ್‌, ಫಾದರ್‌ ಮುಲ್ಲರ್, ಆತ್ಮಹತ್ಯೆ ಸಹಾಯವಾಣಿ ಮತ್ತು ಮನಶಾಂತಿ ಸಂಸ್ಥೆಯಿಂದ ಈಗಾಗಲೇ ಮಂಗಳೂರಿನ 18 ಕಾಲೇಜುಗಳಲ್ಲಿ ಡಬ್ಲ್ಯುಎಚ್‌ಒ ಮಾಡ್ನೂಲ್‌ನಂತೆ ಗೇಟ್‌ಕೀಪರ್‌ ತರಬೇತಿ ಕಾರ್ಯಕ್ರಮ ನಡೆಸಿ ತಲಾ 50 ವಿದ್ಯಾರ್ಥಿಗಳನ್ನು ಆತ್ಮಹತ್ಯೆ ತಡೆ ಚಟುವಟಿಕೆಗೆ ಪೂರಕವಾಗಿ ತರಬೇತಿಗೊಳಿಸಲಾಗಿದೆ.
– ಡಾ| ರಮಿಳಾ ಶೇಖರ್‌ ಮಾನಸಿಕ ಆರೋಗ್ಯ ತಜ್ಞೆ, ಮನಶಾಂತಿ, ಮಂಗಳೂರು

ಜೀವನದಲ್ಲಿ ಯಶಸ್ಸಿನಂತೆ ವೈಫ‌ಲ್ಯ ಕೂಡ ಇದೆ ಎಂಬುದನ್ನು ಯುವಜನತೆ ಅರಿತುಕೊಳ್ಳಬೇಕು. ಪರೀಕ್ಷೆಗಳಲ್ಲಿ ಅಂಕಗಳ ವಿಚಾರದಲ್ಲಿ ಹೆತ್ತವರು ಅಷ್ಟಾಗಿ ಒತ್ತಡ ಹಾಕದಿದ್ದರೂ ಮಕ್ಕಳು ತಾವೇ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡು ಒತ್ತಡಕ್ಕೊಳಗಾಗುತ್ತಾರೆ. ಯುವಜನತೆ ಮದ್ಯಪಾನ, ಡ್ರಗ್ಸ್‌ ಚಟಕ್ಕೆ ಒಳಗಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಹಣ ಕಳೆದುಕೊಂಡು ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
– ಡಾ| ಸುಪ್ರಿತಾ, ಮಾನಸಿಕ ಆರೋಗ್ಯ ತಜ್ಞೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ, ಮಂಗಳೂರು

ಸಹಾಯವಾಣೆ
ಕೇಂದ್ರ ಸರಕಾರದ ಟೆಲಿ ಮಾನಸ್‌ ಸಹಾಯವಾಣಿ 14416 ಅಥವಾ 18008914416ಕ್ಕೆ ಕರೆ ಮಾಡಬಹುದು. ಮಂಗಳೂರಿನ ಸುಸೈಡ್‌ ಲೈಫ್ಲೈನ್‌ 2983444ಗೆ ಕೂಡ ಕರೆ ಮಾಡಬಹುದಾಗಿದೆ.

 ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next