ಮನಿಲಾ:ಕೆಲ ವಿದ್ಯಾರ್ಥಿಗಳು ಎಕ್ಸಾಂ ಬರೆಯುವಾಗ ಇನ್ನೊಬ್ಬರ ಪೇಪರ್ ಕಡೆ ಕಣ್ಣಾಡಿಸುವುದಿದೆ. ಇನ್ನು ಕೆಲವರು ಕಾಪಿ ಮಾಡುವ ಸಲುವಾಗಿ ಚೀಟಿಗಳನ್ನು ಕಿಸೆಯಲ್ಲಿ ಇಟ್ಟು ತರುವುದುಂಟು. ಆದರೆ ಇಲ್ಲೊಂದು ಕಾಲೇಜು ಪರೀಕ್ಷೆಯಲ್ಲಿ ನಕಲು ಮಾಡುವುದನ್ನು ತಡೆಯುವುದಕ್ಕಾಗಿ ವಿಭಿನ್ನವಾದ ಯೋಜನೆಯನ್ನು ಮಾಡಿದೆ.
ಫಿಲಿಪೈನ್ಸ್ ನ ಬಿಕೋಲ್ ಯೂನಿವರ್ಸಿಟಿ ಕಾಲೇಜ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಕಲು ಮಾಡಬಾರದೆನ್ನುವ ನಿಟ್ಟಿನಲ್ಲಿ ಉಪನ್ಯಾಸಕಿರೊಬ್ಬರು ಭಿನ್ನವಾದ ಐಡಿಯಾವನ್ನು ಮಾಡಿದ್ದಾರೆ.
ಉಪನ್ಯಾಸಕಿ ಮೇರಿ ಜಾಯ್ ಮಂಡೇನ್-ಒರ್ಟಿಜ್ ಎನ್ನುವವರು ನೀವು ಮಧ್ಯಂತರ ಪರೀಕ್ಷೆಯಲ್ಲಿ ನಕಲು ಮಾಡಬಾರದು ಆ ಕಾರಣಕ್ಕಾಗಿ ಮುಖ ಕವಚವನ್ನು ಹಾಕಿಕೊಂಡು ಬರಬೇಕು ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ, ಮನೆಯಲ್ಲಿ ತಾವೇ ತಯಾರಿಸಿ ವಿವಿಧ ಬಗೆಯ ಮುಖ ಕವಚ, ಟೋಪಿಗಳನ್ನು ಹಾಕಿಕೊಂಡು ಬಂದಿದ್ದಾರೆ. ಈ ಚಿತ್ರ ವಿಚಿತ್ರ ಮುಖ ಕವಚ, ಟೋಪಿಗಳನ್ನು ಹಾಕಿಕೊಂಡು ಬಂದ ವಿದ್ಯಾರ್ಥಿಗಳ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಮೇರಿ ಜಾಯ್ ಮಂಡೇನ್ -ಒರ್ಟಿಜ್ ಹಂಚಿಕೊಂಡಿದ್ದಾರೆ.
ಕೆಲವರು ಕಾಗದಗಳಿಂದ ಮಾಡಿ ಸೂಪರ್ ಮ್ಯಾನ್ ಟೋಪಿ, ಕೆಲವರು ಕಾಗದವನ್ನೇ ಮುಖಕ್ಕೆ ಅಡ್ಡ ಕಟ್ಟಿಕೊಂಡಿದ್ದು, ಇನ್ನು ಕೆಲವರು ರಟ್ಟಿನ ಬಾಕ್ಸ್ ಗಳಿಂದ ವಿವಿಧ ಕವಚವನ್ನು ಧರಿಸಿದ್ದಾರೆ. ಸದ್ಯ ಈ ಫೋಟೋಗಳು ವೈರಲ್ ಆಗಿವೆ.
ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಹಾಗೂ ಪ್ರಾಮಾಣಿಕತೆಯಿಂದ ಪರೀಕ್ಷೆಯನ್ನು ಬರೆಯಲು ನಾನು ಇಂಥಹ ತಮಾಷೆ ಮಾರ್ಗವನ್ನು ಹುಡುಕಿದೆ ಇದು ನಿಜಕ್ಕೂ ಪರಿಣಾಮಕಾರಿ ಆಗಿ ಅನುಕರಣೆ ಆಗಿದೆ. ಇದನ್ನು ಕೆಲವು ವರ್ಷಗಳ ಹಿಂದೆ ಥೈಲ್ಯಾಂಡ್‌ನಲ್ಲಿ ಬಳಸಿದ ತಂತ್ರದಿಂದ ತಾನು ಸ್ಫೂರ್ತಿ ಪಡೆದು ಈ ಮಾರ್ಗವನ್ನು ಅನುಸರಿಸಿದೆ ಎಂದು ಉಪನ್ಯಾಸಕಿ ಹೇಳಿದ್ದಾರೆ.
ಈ ತಂತ್ರ ಎಲ್ಲರೂ ತುಂಬಾ ಚೆನ್ನಾಗಿ ಎಕ್ಸಾಂ ಬರೆದಿದ್ದಾರೆ. ಯಾರೂ ಕೂಡ ಕಾಪಿ ಮಾಡಿಲ್ಲ ಎಂದು ಹೇಳಿದ್ದಾರೆ.