ಸಮೂಹ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಮೀರಾ ಸಲಹೆ ನೀಡಿದರು.
Advertisement
ನಗರದ ಮಾಂಡವ್ಯ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಜ್ಯ ವಿಜ್ಞಾನ ಪರಿಷತ್ತು, ಕಾಲೇಜು ಶಿಕ್ಷಣ ಇಲಾಖೆ, ಎಸ್.ಬಿ.ಸಮೂಹ ಶಿಕ್ಷಣ ಸಂಸ್ಥೆಗಳು,ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಪದವಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜ್ಞಾನ ವೃದ್ಧಿಯಾಗಲಿದೆ. ಜೀವನದಲ್ಲಿ ಸಾಧನೆಯ ಕಡೆ ಹೆಜ್ಜೆ ಇಡುವಾಗ ಗುರುಗಳ ಮಾರ್ಗದರ್ಶನ ಅಗತ್ಯ. ಅದರ ಜೊತೆ ಸ್ವಂತ ಬುದ್ಧಿ, ಸಹಚರರ ಸಲಹೆ ಹಾಗೂ ಅನುಭಾವದೊಂದಿಗೆ ಕಲಿಯುವ ಶಿಕ್ಷಣದಿಂದ ಸಾಧನೆ ಮಾಡಿದಲ್ಲಿ ಎಲ್ಲವನ್ನೂ ಸಿದ್ಧಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪ್ರಯತ್ನ ನಿರಂತರವಾಗಿಬೇಕು ಎಂದು ಸಲಹೆ ನೀಡಿದರು. ಗುರಿಯತ್ತ ಹೆಜ್ಜೆ ಹಾಕಿ: ನಮ್ಮನ್ನು ನಾವು ಅರಿತುಕೊಳ್ಳುವ ಪ್ರಯತ್ನವನ್ನು ಮಾಡಬೇಕು. ನಮ್ಮ ಅಂತರಂಗವನ್ನು ನಾವು ವೀಕ್ಷಣೆ ಮಾಡಿಕೊಂಡು ಆತ್ಮಸಾಕ್ಷಾತ್ಕಾರದಿಂದ ಹೆಚ್ಚಿನ ಜ್ಞಾನ
ಪಡೆದುಕೊಳ್ಳುವತ್ತ ಮುಖ ಮಾಡಬೇಕು. ಕಲಿಯುವ ವಯಸ್ಸಿನಲ್ಲಿ ಮೋಜಿನ ಜೀವನದತ್ತ ಗಮನಹರಿಸಬಾರದು. ಶೈಕ್ಷಣಿಕ ಸಾಧನೆಯ ಗುರಿಯತ್ತ ಹೆಜ್ಜೆ ಹಾಕಬೇಕು ಎಂದು ಹೇಳಿದರು.
Related Articles
ಇಟ್ಟುಕೊಂಡು ಸತತ ಅಭ್ಯಾಸ ನಡೆಸಿದಾಗ ಉತ್ತಮ ಸಂಶೋಧಕನಾಗಿ ಹೊರಹೊಮ್ಮಲು
ಸಾಧ್ಯ ಎಂದು ಅಭಿಪ್ರಾಯಿಸಿದರು. ಸಮಾರಂಭದಲ್ಲಿ ನಿವೃತ್ತ ಪ್ರಾಂಶುಪಾಲ ಡಾ.ರಾಮಲಿಂಗಯ್ಯ, ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾಧ್ಯಕ್ಷ ಚಿಕ್ಕಸ್ವಾಮಿ, ಇಸ್ರೋ ವಿಜ್ಞಾನ ಪ್ರೊ. ಸಿ.ಡಿ. ಪ್ರಸಾದ್, ವಿಜ್ಞಾನ
ಪರಿಷತ್ ರಾಜ್ಯ ಸಮಿತಿ ಸದಸ್ಯ ಸಿ. ಕೃಷ್ಣೇಗೌಡ, ಜಿಲ್ಲಾ ಸಮಿತಿ ಖಜಾಂಚಿ ಡಾ. ಬಿ.ಪಿ. ಶಿವಶಂಕರ್, ರಮೇಶ್, ರಾಮಚಂದ್ರು ಇತರರು ಭಾಗವಹಿಸಿದ್ದರು.
Advertisement
ಬಹುಮಾನ ವಿಜೇತರು: ಉತ್ತಮ ಪ್ರದರ್ಶನ ನೀಡಿದ ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಸಂಚಿತ್ ಜೈನ್ ಪ್ರಥಮ ಬಹುಮಾನ, ಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸರಸ್ವತಿ ಕೆಂಚಿನಗೌಡರ್ ದ್ವಿತೀಯ ಬಹುಮಾನ, ಹಗರಿಬೊಮ್ಮನಹಳ್ಳಿ ಎಂ.ಜಿ.ವಿ.ಪಿ.ಪಿ. ಕಾಲೇಜಿನ ಕೆ.ನಿತೀಶ್ ಕುಮಾರ್ ತೃತೀಯ ಬಹುಮಾನ, ದಾವಣಗೆರೆ ಡಿಆರ್‌ಎಂ ವಿಜ್ಞಾನ ಕಾಲೇಜಿನಅಂಚಲ್ ಜೈನ್, ಪುತ್ತೂರಿನ ಸಂತ ಪೀಲೋಮಿನ ಕಾಲೇಜಿನ ಜೀವನ್ ಶೈಲೇಶ್ ಲೋಬೊ ಸಮಾಧಾನಕರ ಬಹುಮಾನ ಪಡೆದುಕೊಂಡರು.