Advertisement

ಕೂಲಿ ಕಾರ್ಮಿಕರ ನೆರವಿಗೆ ಬಂದ ಐಐಟಿ, ಐಐಎಂ ಸಂಸ್ಥೆಗಳ ವಿದ್ಯಾರ್ಥಿಗಳು

12:38 AM Jun 22, 2020 | Hari Prasad |

ಹೊಸದಿಲ್ಲಿ: ಕೋವಿಡ್‌-19 ಲಕ್ಷಾಂತರ ಮಂದಿ ತಮ್ಮ ಕೆಲಸವನ್ನು ಕಳೆದುಕೊಂಡಿದ್ದಾರೆ.

Advertisement

ಆದರಲ್ಲೂ ಕೂಲಿ ಕಾರ್ಮಿಕರ ಜೀವನ ಸಂಪೂರ್ಣವಾಗಿ ಅತಂತ್ರವಾಗಿದ್ದು, ಅವರ ಕಷ್ಟಗಳನ್ನು ಹೇಳತೀರದಾಗಿದೆ.

ಇಂತಹ ಪರಿಸ್ಥಿತಿಯಲ್ಲಿ ಸಮಸ್ಯೆಯ ತೀವ್ರತೆಯನ್ನು ಅರಿತುಕೊಂಡು ಕೆಲ ವಿದ್ಯಾರ್ಥಿಗಳ ತಂಡ ವಿನೂತನ ಆನ್ವೇಷಣೆಯಲ್ಲಿ ನಿರತವಾಗಿದ್ದು, ಲಾಕ್‌ ಡೌನ್‌ ಸಮಯದಲ್ಲಿ ಮತ್ತೊಬ್ಬರಿಗೆ ನೆರವಾಗುವಂತಹ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದೀಗ ಅಂತಹುದೇ ಕಾರ್ಯಕ್ಕೆ ಐಐಟಿ, ಐಐಎಂ ಮತ್ತು ಇತರ ಹೆಸರಾಂತ ಸಂಸ್ಥೆಗಳ ವಿದ್ಯಾರ್ಥಿಗಳು ಮುಂದಾಗಿದ್ದು, ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಸಹಾಯ ಮಾಡುವ ಸಲುವಾಗಿ ವಿಭಿನ್ನ ಯೋಜನೆಯೊಂದು ಆರಂಭಿಸಿದ್ದಾರೆ.

ಥಿಂಕ್‌ – ಟ್ಯಾಂಕ್‌ ಸಹಾಯವಾಣಿ
ಹೌದು, ಐಐಟಿ, ಐಐಎಂ ಮತ್ತು ಇತರ ಹೆಸರಾಂತ ಸಂಸ್ಥೆಗಳ ವಿದ್ಯಾರ್ಥಿಗಳು ಲಾಕ್‌ ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡಿರು ಕಾರ್ಮಿಕರು, ಕೂಲಿ ಕೆಲಸಗಾರರು ಮತ್ತಿತ್ತರ ನಿರುದ್ಯೋಗಿಗಳಿಗೆ ಅನುಕೂಲವಾಗಲೆಂದು ಸ್ಟೂಡೆಂಟ್ಸ್ ಫಾರ್‌ ಇನ್ವಾಲ್ವ್ಡ್ ಗವರ್ನೆನ್ಸ್ ಆ್ಯಂಡ್‌ ಮ್ಯೂಚುಯಲ್‌ ಆ್ಯಕ್ಷನ್‌ (ಸಿಗ್ಮಾ) ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದು, ಈ ಪೈಲಟ್‌ ಯೋಜನೆಗೆ ಥಿಂಕ್‌ – ಟ್ಯಾಂಕ್‌ ಸಹಾಯವಾಣಿ ಎಂಬ ಹೆಸರಿಟ್ಟಿದ್ದಾರೆ. ಇನ್ನು, ಈ ವಿದ್ಯಾರ್ಥಿಗಳ ತಂಡಕ್ಕೆ ದೆಹಲಿಯ ಜಿಲ್ಲಾಧಿಕಾರಿ ಅಭಿಷೇಕ್‌ ಸಿಂಗ್‌ ಮತ್ತು ಅಧಿಕಾರಿ ದುರ್ಗಾ ಶಕ್ತಿ ನಾಗ್ಪಾಲ್‌ ಅವರು ಸಹಾಯ ಹಸ್ತ ಮತ್ತು ಅವರಿಗೆ ಬೇಕಾದ ಮಾರ್ಗದರ್ಶನ ಸಲಹೆಗಳನ್ನು ನೀಡಿದ್ದಾರೆ.

Advertisement

ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಕಾರ್ಯಾಚರಣೆ
ಕೌಶಲ್ಯರಹಿತ, ಅರೆ-ನುರಿತ ಮತ್ತು ನುರಿತ ಕಾರ್ಮಿಕರನ್ನು ನೇಮಿಸಿಕೊಳ್ಳಲು ಹಾಗೂ ಸಹಾಯ ಮಾಡಲು ನಿರ್ದಿಷ್ಟ ಸಹಾಯವಾಣಿ ಸಂಖ್ಯೆಯನ್ನು (8800883323) ವಿದ್ಯಾರ್ಥಿಗಳು ನೀಡಿದ್ದು, ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 7ರವರೆಗೆ ಥಿಂಕ್‌-ಟ್ಯಾಂಕ್‌ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.

ವಿದ್ಯಾರ್ಥಿ ಸ್ವಯಂಸೇವಕರು, ಸಂಭಾವ್ಯ ಉದ್ಯೋಗದಾತರು ಕಾರ್ಮಿಕರ ಕರೆಗಳನ್ನು ಸ್ವೀಕರಿಸಲಿದ್ದು, ಸ್ಥಳೀಯರಿಗೆ ಮತ್ತು ವಲಸೆ ಕಾರ್ಮಿಕರಿಗೆ ಕೆಲಸ ಹುಡುಕಲು ಸಹಾಯ ಮಾಡುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಪೈಲಟ್‌ ಯೋಜನೆ ಮತ್ತು ಸಹಾಯವಾಣಿ ಸಂಖ್ಯೆಯ ಬಿಡುಗಡೆಯ ಸಂದರ್ಭದಲ್ಲಿ ಅಭಿಷೇಕ್‌ ಸಿಂಗ್‌ ಹೇಳಿದ್ದು, ಇದು ಅನೇಕ ಕೈಗಾರಿಕೆಗಳಲ್ಲಿ ಕಾರ್ಮಿಕರ ಕೊರತೆ ಸಹ ನೀಗಿಸಲಿದೆ ಎಂದು ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next