Advertisement

Bengaluru: ಬಿಡಿಎಗೆ ವಂಚನೆ: 19 ಮಂದಿ ವಿರುದ್ಧ ಕೇಸ್‌

10:55 AM Oct 05, 2024 | Team Udayavani |

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿ ಹಾರ ಪಡೆಯಲು ಯತ್ನಿಸಿದ ಖಾಸಗಿ ವ್ಯಕ್ತಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿ 19 ಮಂದಿ ವಿರುದ್ಧ ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಬಿಡಿಎ ವಿಚಕ್ಷಣ ದಳದ ಡಿವೈಎಸ್ಪಿ ಮಲ್ಲೇಶ್‌ ಅವರು ನೀಡಿದ ದೂರಿನ ಮೇರೆಗೆ ಚಲ್ಲಘಟ್ಟ ನಿವಾಸಿ ಪುಟ್ಟಮ್ಮ, ಗಂಗಮ್ಮ, ನಾಗರಾಜ್‌, ಲಕ್ಷ್ಮಮ್ಮ, ಶ್ರೀನಿವಾಸ, ಸಂತೋಷ್‌, ರವಿಕುಮಾರ್‌, ಭರತ್‌, ಸುನೀತ್‌, ಆಶಾ, ಸ್ವಾಮಿ, ಉಮೇಶ್‌ ಹಾಗೂ ಬಿಡಿಎನ ಭೂ ಸ್ವಾಧೀನ ಅಧಿಕಾರಿ ಡಾ. ಸುಧಾ, ದಕ್ಷಿಣ ವಿಭಾಗದ ಸಹಾಯ ಆಯುಕ್ತ ಡಾ. ಶಿವಣ್ಣ, ಸರ್ವೇ ವಿಭಾಗದ ರವಿಪ್ರಕಾಶ್‌, ವಿಶೇಷ ತಹಶೀಲ್ದಾರ್‌, ಕಂದಾಯ ಇಲಾಖೆ ಅಧಿಕಾರಿಗಳು, ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಶೇಷಾದ್ರಿಪುರ ಠಾಣೆ ಪೊಲೀಸರು ಎಫ್ಐಆರ್‌ ದಾಖಲಿಸಿದ್ದಾರೆ.

ಚಲ್ಲಘಟ್ಟ ಸರ್ವೇ ನಂ 13 ಮತ್ತು ಹೊಸ ಸರ್ವೇ ನಂಬರ್‌ 58ರಲ್ಲಿನ 6 ಎಕರೆ ಜಮೀನಿಗೆ ಸಂಬಂಧಿಸಿ ದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿರುವ ಎಲ್ಲ ಆರೋಪಿ ಗಳು ಜಮೀನಿನ ಮೂಲ ಮಾಲೀಕ ಮೂಡ್ಲಪ್ಪಗೂ ಸಂಬಂಧಿಗಳಲ್ಲ. ಆದರೂ ಸಂಬಂಧಿಕ ರೆಂದು ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಬಿಡಿಎಗೆ ಸಲ್ಲಿಸಿದ್ದಾರೆ. ಅಲ್ಲದೆ, ಈ ಆಸ್ತಿಯ ಮಾಲಿಕರುಗಳು ತಾವುಗಳೇ ಎಂದು ಹೇಳಿಕೊಂಡು 70 ಕೋಟಿ ರೂ. ಮೌಲ್ಯದ ಆಸ್ತಿಗೆ ಪರಿಹಾರ ಕೋರಿದ್ದಾರೆ.

ಈ ಆಸ್ತಿಯನ್ನು ಪರಿಶೀಲಿಸಿ ವರದಿ ನೀಡಲು ನೇಮಕವಾಗಿದ್ದ ಬಿಡಿಎನ ವಿಶೇಷ ಭೂಸ್ವಾಧೀನಾ ಧಿಕಾರಿ ಡಾ ಸುಧಾ, ಸರ್ವೇಯರ್‌ ಪಿ.ಎನ್‌.ರವಿ ಪ್ರಕಾಶ್‌ ಈ ಆಸ್ತಿಯ ಬಳಿಗೆ ಹೋಗಿ ಸೂಕ್ತ ರೀತಿಯಲ್ಲಿ ಪರಿಶೀಲನೆ ಮಾಡದೆ, ಆಸ್ತಿಗೆ ಸಂಬಂಧವಿಲ್ಲದ ವ್ಯಕ್ತಿ ಉಮೇಶ್‌ ಎಂಬುವರು ತೋರಿಸಿದ ಮೇರೆಗೆ ಪರಿಶೀ ಲನೆ ಮಾಡಿ ವರದಿ ಸಿದ್ಧªಪಡಿಸಿ, ಬಿಡಿಎಗೆ ತಪ್ಪು ಮಾಹಿತಿ ನೀಡುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ.

ಜತೆಗೆ ಈಗಾಗಲೇ ರೆವಿನ್ಯೂ ಸೈಟ್‌ಗಳಾಗಿ ಮಾರ್ಪಾ ಟಾಗಿದ್ದರೂ, ಆಶ್ರಯ ಯೋಜನೆಗೆ ಕಾಯ್ದಿರಿಸಿರುವ ಜಮೀನಾಗಿದ್ದರೂ ಸರ್ವೇಯರ್‌ ರವಿಪ್ರಕಾಶ್‌ ಮತ್ತು ಡಾ ಸುಧಾ ಭೂ ಪರಿಹಾರಕ್ಕೆ ಅರ್ಹವಾಗಿರುವ ಜಮೀನು ಎಂದು ಸುಳ್ಳು ನಕಾಶೆ ತಯಾರಿಸಿದ್ದಾರೆ. ಆರೋಪಿಗಳು ಸಲ್ಲಿಸಿದ್ದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆ ನಿಜವಾದ ಆಸ್ತಿ ಮಾಲಿಕರ ಬಗ್ಗೆ ವಿಚಾರ ಮಾಡದೆ ದಕ್ಷಿಣ ಉಪವಿಭಾಗದ ಉಪವಿಭಾಗಾಧಿಕಾರಿ ಡಾ ಶಿವಣ್ಣ, ಜ.19 2021ರಲ್ಲಿ ಆರೋಪಿ ಪುಟ್ಟಮ್ಮ ಹೆಸರಿಗೆ ಖಾತೆ ಮಾಡಲು ಬೆಂಗಳೂರು ದಕ್ಷಿಣ ತಾಲೂಕು ವಿಶೇಷ ತಹಶೀಲ್ದಾರ್‌ಗೆ ಆದೇಶ ಮಾಡಿ ಕೃತ್ಯದಲ್ಲಿ ಭಾಗಿಯಾಗಿದ್ದಾರೆ.

Advertisement

ಈ ಸಂಬಂಧ ಗೋವಿಂದರಾಜು ಎಂಬುವರು ಬಿಡಿಎಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಾಥಮಿಕ ವಿಚಾರಣೆ ಹಾಗೂ ಬೆರಳು ಮುದ್ರೆ ತಜ್ಞರಿಂದ ಪಡೆದಿರುವ ವರದಿಗಳಿಂದ ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ.

ಇನ್ನು ಆಸ್ತಿಯ ಮೂಲ ಮಾಲೀಕ ಮೂಡ್ಲಪ್ಪ ಅಲಿಯಾಸ್‌ ಮೂಡ್ಲಯ್ಯ 1976ರಲ್ಲಿ ನಿಧನರಾಗಿದ್ದಾರೆ. 1992 ಆಸ್ತಿಯ ಪೋಡಿ ಆಗಿದೆ. 2019-2020ರಲ್ಲಿ ಆಸ್ತಿಗೆ ಸಂಬಂಧಿಸಿದಂತೆ ಆರೋಪಿಗಳು ರಿಲೀಸ್‌ ಡೀಡ್‌ ಮಾಡಿಕೊಂಡಿದ್ದಾರೆ. ಪುಟ್ಟಮ್ಮ ಹೆಸರಿಗೆ 57498 ಚದರ ಅಡಿಗಳಿಗೆ ಭೂ ಪರಿಹಾರ ಮಂಜೂರಾತಿಗೆ ದಾಖಲೆಗಳ ಸಲ್ಲಿಕೆಯಾಗಿರುತ್ತೆ. ಆದರೆ, ಪರಿಹಾರ ಬಿಡುಗಡೆ ಆಗಿಲ್ಲ. ಹೀಗಾಗಿ ವಂಚನೆ ಮಾಡಿದ ಖಾಸಗಿ ವ್ಯಕ್ತಿಗಳು ಹಾಗೂ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಡಿವೈಎಸ್ಪಿ ಮಲ್ಲೇಶ್‌ ದೂರಿನಲ್ಲಿ ಕೋರಿದ್ದಾರೆ.

ವಂಚನೆ ನಡೆದಿದು ಹೇಗೆ?

 ಚಲ್ಲಘಟ್ಟದಲ್ಲಿ ಮೂಲ ಮಾಲಿಕ ಮೂಡ್ಲಪ್ಪ ಬಳಿ 6 ಎಕರೆ ಜಮೀನು.

 ಈ ಜಮೀನಿಗೆ ನಕಲಿ ದಾಖಲೆ ತಯಾರಿ ಸಿದ ಆರೋಪಿಗಳು. ನಕಲಿ ದಾಖಲೆಗ ಳನ್ನು ಬಿಡಿಎಗೆ ಸಲ್ಲಿಸಿ ಪರಿಹಾರ ಕೋರಿಕೆ.

 ತಾವೇ ಮಾಲಿಕರು ಎಂದು ಹೇಳಿ 70 ಕೋಟಿ ರೂ.ಗೆ ಡಿಮ್ಯಾಂಡ್‌

 ಈ ಆಸ್ತಿ ಪರಿಶೀಲನೆಗೆ ಬಿಡಿಎ ಅಧಿಕಾರಿಗಳ ನೇಮಕ. ಆಸ್ತಿ ಪರಿಶೀಲನೆ ಮಾಡದೇ ಬಿಡಿಎಗೆ ತಪ್ಪಿ ಮಾಹಿತಿ ಸಲ್ಲಿಕೆ

 ಈ ಆಸ್ತಿಗೆ ಸಂಬಂಧಿಸಿದ ವ್ಯಕ್ತಿಯಿಂದ ದೂರು. ಪ್ರಾಥಮಿಕ ತನಿಖೆ ನಡೆಸಿದಾಗ ವಂಚನೆ ಪತ್ತೆ

 

Advertisement

Udayavani is now on Telegram. Click here to join our channel and stay updated with the latest news.

Next