Advertisement
ಹೆಬ್ರಿಯ ಸರಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳಲ್ಲಿ ಆಗುಂಬೆ ಹಾಗೂ ಸುತ್ತಮುತ್ತಲಿನ ಹಲವಾರು ವಿದ್ಯಾರ್ಥಿಗಳು ಎಸೆಸೆಲ್ಸಿ ಹಾಗೂ ಪಿಯುಸಿ ಕಲಿಯುತ್ತಿದ್ದಾರೆ. ಮಾ.1ರಿಂದ ಪಿಯು ಪರೀಕ್ಷೆ ಆರಂಭವಾಗಲಿದೆ. ಆಗುಂಬೆಯಿಂದ ಹೆಬ್ರಿಗೆ ಕೇವಲ 20 ಕಿ.ಮೀ. ದೂರವಿದ್ದರೂ ಬದಲಿ ಮಾರ್ಗದಲ್ಲಿ ವಿದ್ಯಾರ್ಥಿಗಳು ಸಂಚರಿಸುವುದು ಕಷ್ಟಕರ.
ಸೋಮೇಶ್ವರ, ನಾಡಾ³ಲು, ಸೀತಾನದಿ ಸುತ್ತ¤ಲಿನ ಹಲವಾರು ವಿದ್ಯಾರ್ಥಿಗಳು ಹೆಬ್ರಿಯ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಬರುತ್ತಿದ್ದು, ಪರೀಕ್ಷೆ ಮುಗಿಯುವ ತನಕ ಬಸ್ಸಿನ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪೋಷಕರ ಆಕ್ರೋಶ
ಜುಲೈ ತಿಂಗಳಲ್ಲಿ ಘಾಟಿ ಕುಸಿದಿತ್ತು. ಇದುವರೆಗೆ ಇಲಾಖೆ ಸುಮ್ಮನಿದ್ದು, ಈಗ ದುರಸ್ತಿಗೆ ಮುಂದಾಗಿರುವುದು ಫೋಷಕರ ಆಕ್ರೋಶಕ್ಕೆ ಕಾರಣವಾಗಿದೆ.